ETV Bharat / sports

89 ವರ್ಷದ ಟೆಸ್ಟ್​ ಇತಿಹಾಸ ಬ್ರೇಕ್​ ಮಾಡಲಿರುವ ಭಾರತ.. ಮೊದಲ ಬಾರಿಗೆ ತಟಸ್ಥ ಸ್ಥಳದಲ್ಲಿ ಕ್ರಿಕೆಟ್​ - ಟೀಂ ಇಂಡಿಯಾ ತಟಸ್ಥ ಸ್ಥಳ

ಟೆಸ್ಟ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ತಟಸ್ಥ ಸ್ಥಳದಲ್ಲಿ ಟೆಸ್ಟ್​ ಪಂದ್ಯ ಆಡಲು ಮುಂದಾಗಿದ್ದು, ಈ ಮೂಲಕ ಹೊಸದೊಂದು ದಾಖಲೆ ನಿರ್ಮಾಣ ಮಾಡಲಿದೆ.

Team india
Team india
author img

By

Published : May 17, 2021, 5:10 PM IST

ನವದೆಹಲಿ: ನ್ಯೂಜಿಲ್ಯಾಂಡ್​ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​​ನಲ್ಲಿ ಭಾರತ ಕಣಕ್ಕಿಳಿಯಲಿದ್ದು, ಈ ಮೂಲಕ ಟೀಂ ಇಂಡಿಯಾ ಹೊಸದೊಂದು ದಾಖಲೆಗೆ ಪಾತ್ರವಾಗಲಿದೆ.

ಮುಂದಿನ ತಿಂಗಳು ಭಾರತ - ನ್ಯೂಜಿಲ್ಯಾಂಡ್​ ನಡುವೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯ​ ತಟಸ್ಥ ಸ್ಥಳದಲ್ಲಿ ನಡೆಯುತ್ತಿದ್ದು, 89 ವರ್ಷಗಳ ಟೆಸ್ಟ್​​ ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಪಂದ್ಯದಲ್ಲಿ ಭಾರತ ಮೊದಲ ಸಲ ಭಾಗಿಯಾಗುತ್ತಿದೆ.

ವಿಶ್ವ ಟೆಸ್ಟ್ ಚಾಂಪಿಯನ್​ ಫೈನಲ್ ತಟಸ್ಥ ಸ್ಥಳದಲ್ಲಿ

ಈಗಾಗಲೇ ನಿರ್ಧಾರಗೊಂಡಿದ್ದ ಪ್ರಕಾರ ಕ್ರಿಕೆಟ್ ಕಾಶಿ ಲಾರ್ಡ್ಸ್​​ನಲ್ಲಿ ಫೈನಲ್ ಪಂದ್ಯ ನಡೆಯಬೇಕಾಗಿತ್ತು. ಆದರೆ, ಇದೀಗ ಉಭಯ ದೇಶದ ಕ್ರಿಕೆಟ್ ಮಂಡಳಿ ಸೌತಾಂಪ್ಟನ್​​ನಲ್ಲಿ ಫೈನಲ್​ ಪಂದ್ಯ ನಡೆಸಲು ನಿರ್ಧರಿಸಿದ್ದರಿಂದ ತಟಸ್ಥ ಸ್ಥಳದಲ್ಲಿ ಈ ಮ್ಯಾಚ್​ ನಡೆಯಲಿದೆ.

89 ವರ್ಷಗಳ ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಇದೇ ಮೊದಲ ಬಾರಿಗೆ ಇಂತಹ ಸರಣಿಯಲ್ಲಿ ಭಾಗಿಯಾಗುತ್ತಿದೆ. ಈ ಹಿಂದೆ 1999ರಲ್ಲಿ ತಟಸ್ಥ ಸ್ಥಳದಲ್ಲಿ ಭಾರತ ಟೆಸ್ಟ್​ ಪಂದ್ಯ ಆಡುವ ಪಡೆದುಕೊಂಡಿತ್ತು. ಆದರೆ, ಏಷ್ಯನ್ ಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ಫೈನಲ್ ತಲುಪಲು ವಿಫಲಗೊಂಡಿದ್ದರಿಂದ ಪಾಕಿಸ್ತಾನ - ಶ್ರೀಲಂಕಾ ಇದರಲ್ಲಿ ಭಾಗಿಯಾಗಿ ತಟಸ್ಥ ಸ್ಥಳದಲ್ಲಿ ಟೆಸ್ಟ್​ ಪಂದ್ಯ ಆಡಿದ್ದವು.

ಭಾರತ - ಬಾಂಗ್ಲಾ ತಟಸ್ಥ ಸ್ಥಳದಲ್ಲಿ ಆಡಿಲ್ಲ ಕ್ರಿಕೆಟ್​​

ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​(ಐಸಿಸಿ)ಯಿಂದ ಟೆಸ್ಟ್​ ಸ್ಥಾನಮಾನ ಪಡೆದ 12 ದೇಶಗಳ ಪೈಕಿ, ಭಾರತ ಹಾಗೂ ಬಾಂಗ್ಲಾದೇಶ ಇಲ್ಲಿಯವರೆಗೆ ತಟಸ್ಥ ಸ್ಥಳದಲ್ಲಿ ಟೆಸ್ಟ್​ ಪಂದ್ಯ ಆಡಿಲ್ಲ. ಆದರೆ, ಇದೀಗ ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಭಾಗಿಯಾಗುವ ಮೂಲಕ ಭಾರತ ಈ ರೆಕಾರ್ಡ್​ ಬ್ರೇಕ್ ಮಾಡಲಿದೆ. ಭಾರತ - ನ್ಯೂಜಿಲ್ಯಾಂಡ್ ನಡುವೆ ಜೂನ್​ 18ರಿಂದ ಇಂಗ್ಲೆಂಡ್​ನ ಸೌತಾಂಪ್ಟನ್​​ನಲ್ಲಿ ಫೈನಲ್​ ಪಂದ್ಯ ನಡೆಯಲಿದ್ದು, ಎರಡು ದೇಶಗಳಿಗೆ ಇದು ತಟಸ್ಥ ಸ್ಥಳವಾಗಿದೆ.

ಪಾಕಿಸ್ತಾನದಲ್ಲಿ ಭದ್ರತಾ ಬೆದರಿಕೆ ಗಮನದಲ್ಲಿಟ್ಟುಕೊಂಡು ವಿದೇಶಿ ತಂಡಗಳು ಒಂದು ದಶಕಕ್ಕೂ ಹೆಚ್ಚು ಕಾಲ ಅಲ್ಲಿಗೆ ಭೇಟಿ ನೀಡಿರಲಿಲ್ಲ. ಈ ಮಧ್ಯೆ ಪಾಕ್​ ಯುಎಇ ಮತ್ತು ಶ್ರೀಲಂಕಾದಲ್ಲಿ ತನ್ನ ತವರಿನ ಪಂದ್ಯ ನಡೆಸಿತ್ತು. ಈ ಮಧ್ಯೆ ಅನೇಕ ದೇಶಗಳು ತಟಸ್ಥ ಸ್ಥಳದಲ್ಲಿ ಟೆಸ್ಟ್​ ಪಂದ್ಯ ಆಡುವ ಅವಕಾಶ ಪಡೆದುಕೊಂಡಿವೆ.

ಯಾವೆಲ್ಲ ತಂಡಗಳು ತಟಸ್ಥ ಸ್ಥಳದಲ್ಲಿ ಕ್ರಿಕೆಟ್ ಆಡಿವೆ!?

ನ್ಯೂಜಿಲ್ಯಾಂಡ್​ 2014ರಿಂದ 2018ರವರೆಗೆ ತಟಸ್ಥ ಸ್ಥಳದಲ್ಲಿ ಆರು ಪಂದ್ಯಗಳನ್ನಾಡಿದ್ದು, ಅದರಲ್ಲಿ ಮೂರು ಪಂದ್ಯ ಗೆದ್ದು, ಎರಡಲ್ಲಿ ಸೋಲು ಕಂಡಿದೆ. ಅಂದ ಹಾಗೆ,109 ವರ್ಷಗಳ ಹಿಂದೆ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ನಡುವೆ ಮ್ಯಾಂಚೆಸ್ಟರ್​​ನಲ್ಲಿ 27-28 ಮೇ 1912ರಲ್ಲಿ ತಟಸ್ಥ ಸ್ಥಳದಲ್ಲಿ ಮೊದಲ ಕ್ರಿಕೆಟ್​ ಪಂದ್ಯ ನಡೆದಿತ್ತು. ತಟಸ್ಥ ಸ್ಥಳದಲ್ಲಿ ಪಾಕ್ ಇದುವರೆಗೆ 39 ಪಂದ್ಯಗಳಲ್ಲಿ ಭಾಗಿಯಾಗಿದೆ.

ಉಳಿದಂತೆ ಆಸ್ಟ್ರೇಲಿಯಾ 12 ಪಂದ್ಯ, ಶ್ರೀಲಂಕಾ 9, ದಕ್ಷಿಣ ಆಫ್ರಿಕಾ 7 ಮತ್ತು ನ್ಯೂಜಿಲ್ಯಾಂಡ್​, ವೆಸ್ಟ್​ ಇಂಡೀಸ್​​ ಮತ್ತು ಇಂಗ್ಲೆಂಡ್​ ತಲಾ ಮೂರು ಪಂದ್ಯಗಳನ್ನ ತಟಸ್ಥ ಸ್ಥಳದಲ್ಲಿ ಆಡಿದ್ದು, ಅಫ್ಘಾನಿಸ್ತಾನ ಸಹ ನಾಲ್ಕು ಪಂದ್ಯಗಳನ್ನಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.