ಹರಾರೆ: ಆತಿಥೇಯ ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಬಲ ಬೌಲಿಂಗ್ ದಾಳಿಗೆ ಎದುರಾಳಿ ತಂಡ ತತ್ತರಿಸಿತು. ಹೀಗಾಗಿ 40.3 ಓವರ್ಗಳಲ್ಲಿ ಜಿಂಬಾಬ್ವೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 189 ರನ್ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆಗೆ ಆರಂಭದಲ್ಲೇ ದೀಪಕ್ ಚಹರ್ ಆಘಾತ ನೀಡಿದರು. ಆರಂಭಿಕರಾದ ಇನೋಸೆಂಟ್ ಕೈಯಾ(4), ತಡಿವಾನಾಶೆ (8) ವಿಕೆಟ್ ಉರುಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದರ ಬಳಿಕ ಮಾಧವೀರ್ (5) ವಿಕೆಟ್ ಕೂಡಾ ಪಡೆದುಕೊಂಡರು.
-
Innings Break!
— BCCI (@BCCI) August 18, 2022 " class="align-text-top noRightClick twitterSection" data="
Clinical bowling effort from #TeamIndia as Zimbabwe are all out for 189 in 40.3 overs.
Scorecard - https://t.co/P3fZPWilGM #ZIMvIND pic.twitter.com/UmV6JjFjwT
">Innings Break!
— BCCI (@BCCI) August 18, 2022
Clinical bowling effort from #TeamIndia as Zimbabwe are all out for 189 in 40.3 overs.
Scorecard - https://t.co/P3fZPWilGM #ZIMvIND pic.twitter.com/UmV6JjFjwTInnings Break!
— BCCI (@BCCI) August 18, 2022
Clinical bowling effort from #TeamIndia as Zimbabwe are all out for 189 in 40.3 overs.
Scorecard - https://t.co/P3fZPWilGM #ZIMvIND pic.twitter.com/UmV6JjFjwT
ಮಧ್ಯಮ ಕ್ರಮಾಂಕದಲ್ಲಿ ವೆಸ್ಲಿ(1) ಸಿರಾಜ್ಗೆ ಬಲಿಯಾದರೆ, ಸಿಕಂದರ್ ರಾಜಾ(12) ಪ್ರಸಿದ್ಧ ಕೃಷ್ಣ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ವಿಕೆಟ್ ಕೀಪರ್, ಕ್ಯಾಪ್ಟನ್ ರೆಗಿಸ್ ಚಕಬ್ವಾ(35) ಭಾರತವನ್ನು ಸ್ವಲ್ಪ ಹೊತ್ತು ಕಾಡಿದರು. ಆದರೆ, ಇವರ ವಿಕೆಟ್ ಪಡೆದುಕೊಳ್ಳುವಲ್ಲಿ ಅಕ್ಸರ್ ಪಟೇಲ್ ಯಶಸ್ವಿಯಾದರು. ಇನ್ನುಳಿದಂತೆ ಬರ್ಲೆ(11), ಜೊಂಗ್ವೆ(13) ರನ್ಗಳಿಸಿ ಔಟಾದರು.
ಇದನ್ನೂ ಓದಿ: Zim vs India 1st ODI ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ.. ಆತಿಥೇಯರಿಗೆ ಆರಂಭಿಕ ಆಘಾತ
9ನೇ ವಿಕೆಟ್ ಜೊತೆಯಾಟ: ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದ ಜಿಂಬಾಬ್ವೆ ತಂಡಕ್ಕೆ 9ನೇ ವಿಕೆಟ್ ತುಸು ಬಲ ನೀಡಿತು. ಕ್ರೀಸ್‌ನಲ್ಲಿ ಒಂದಾದ ಬ್ರಾಡ್ ಇವಾನ್ಸ್ (33), ರಿಚರ್ಡ್(34) ರನ್ ಸಂಪಾದಿಸಿ ತಂಡವನ್ನು 180ರ ಗಡಿ ದಾಟಿಸಿದರು. ಕೊನೆಯದಾಗಿ ತಂಡ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 189ರನ್ಗಳಿಸಿದ್ದು, ಭಾರತಕ್ಕೆ 190ರನ್ಗಳ ಸಾಧಾರಣ ಗುರಿ ನೀಡಿದೆ.
ಟೀಂ ಇಂಡಿಯಾ ಪರ ಚಹರ್, ಪ್ರಸಿದ್ಧ ಕೃಷ್ಣ ಹಾಗೂ ಅಕ್ಸರ್ ಪಟೇಲ್ ತಲಾ 3 ವಿಕೆಟ್ ಪಡೆದರೆ, ಸಿರಾಜ್ 1 ವಿಕೆಟ್ ಕಿತ್ತರು.