ನವದೆಹಲಿ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಮ್ಮ ಟೆಸ್ಟ್ ವೃತ್ತಿಜೀವನದ ಚೊಚ್ಚಲ ಮ್ಯಾಚ್ ಆಡುವ ಸಾಧ್ಯತೆ ಇದೆ. ಜುಲೈ 12 ರಿಂದ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅವರ ಪದಾರ್ಪಣೆ ಬಹುತೇಕ ಖಚಿತವಾಗಿದೆ. ಹೀಗೆ ಹೇಳಲು ಕಾರಣ ಎಂದರೆ, ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಬ್ಯಾಟ್ ಮಾಡಿದ್ದಾರೆ.
-
Jaiswal set to make his debut in the first Test vs West Indies. [PTI] pic.twitter.com/rGSXV05fSZ
— Johns. (@CricCrazyJohns) July 7, 2023 " class="align-text-top noRightClick twitterSection" data="
">Jaiswal set to make his debut in the first Test vs West Indies. [PTI] pic.twitter.com/rGSXV05fSZ
— Johns. (@CricCrazyJohns) July 7, 2023Jaiswal set to make his debut in the first Test vs West Indies. [PTI] pic.twitter.com/rGSXV05fSZ
— Johns. (@CricCrazyJohns) July 7, 2023
ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ಅವರನ್ನು ಕೈ ಬಿಟ್ಟು ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಈಗ ಪೂಜಾರ ಜಾಗವನ್ನು ಯಾರು ಫುಲ್ ಫಿಲ್ ಮಾಡಲಿದ್ದಾರೆ ಎಂಬುದು ಪ್ರಶ್ನೆಯಾಗುತ್ತಿದೆ. ಮುಂದಿನ ಆವೃತ್ತಿಯ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಪ್ರವಾಸ ಹಾಗೂ ಮೊದಲ ಪಂದ್ಯವನ್ನು ಭಾರತ ಆಡುತ್ತಿದೆ. ಅನುಭವಿ ಆಟಗಾರರ ನಡುವೆ ಯುವ ಬ್ಯಾಟರ್ಗಳು ಎಷ್ಟು ಯಶಸ್ಸು ಕಾಣುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು ಬಾರ್ಡರ್ ಗವಾಸ್ಕರ್ ಟ್ರೋಫಿ ಪಂದ್ಯಗಳಲ್ಲಿ ಶುಭಮನ್ ಗಿಲ್ ಆರಂಭಿಕರಾಗಿ ಬ್ಯಾಟ್ ಬೀಸಿದ್ದರು. ಆದೆರೆ ತಂಡ ಗಿಲ್ ಅವರ ಸ್ಥಾನವನ್ನು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಬದಲಾಯಿಸುವ ಸಾಧ್ಯತೆ ಇದೆ. ಅದರಂತೆ ಚೇತೇಶ್ವರ ಪೂಜಾರ ಅವರ ಮೂರನೇ ಬ್ಯಾಟರ್ ಸ್ಥಾನದಲ್ಲಿ ಗಿಲ್ ಕಣಕ್ಕಿಳಿಯುವ ನಿರೀಕ್ಷೆಗಳಿವೆ. ಮೂರನೇ ಸ್ಥಾನದಲ್ಲಿ ಗಿಲ್ ಯಶಸ್ವಿ ಆಗುತ್ತಾ ಎಂಬುದನ್ನು ಕಾದುನೋಡಬೇಕಿದೆ.
ನಡೆದ ಅಭ್ಯಾಸ ಪಂದ್ಯದಲ್ಲಿ ಆರಂಭಿಕ ಜೋಡಿಯಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಜೋಡಿ 76 ಬಾಲ್ನಲ್ಲಿ 54 ರನ್ ಗಳಿಸಿತು. 67 ಬಾಲ್ ಆಡಿದ ನಂತರ ನಾಯಕ ರೋಹಿತ್ ವಿರಾಮ ತೆಗೆದುಕೊಂಡರು. ಗಂಭೀರ್ ಮತ್ತು ಸೆಹ್ವಾಗ್ ಅವರ ಆರಂಭಿಕ ಜೋಡಿಯಂತೆ ಬಲ ಮತ್ತು ಎಡ ಕಾಂಬಿನೇಷನ್ನ ಪ್ರಯೋಗವನ್ನು ನಡೆಸಲು ತಂಡ ಮುಂದಾದಂತಿದೆ. ಈ ರೀತಿಯ ಕಾಂಬಿನೇಷನ್ ಎದುರಾಳಿ ಬೌಲರ್ಗಳ ಲಯ ತಪ್ಪಿಸಲು ಸಹಕಾರಿಯಾಗಲಿದೆ.
ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಬಂದಲ್ಲಿ 11 ಆಟಗಾರರಲ್ಲಿ ಗಿಲ್ ಮೂರನೇ ಬ್ಯಾಟರ್ ಆಗಲಿದ್ದಾರೆ. ವಿರಾಟ್ ಎಂದಿನಂತೆ ನಾಲ್ಕುನೇ ಸ್ಥಾನದಲ್ಲಿ ಬಂದರೆ, ಐದನೇಯವರಾಗಿ ರಹಾನೆ ಕಣಕ್ಕಿಳಿಯುತ್ತಾರೆ ನಂತರ ಆರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಇನ್ನಿಂಗ್ಸ್ ಆಡುವ ಸಾಧ್ಯತೆ ಇದೆ.
ಧೋನಿ ಅವರ ನಿವೃತ್ತಿಯ ನಂತರ ವಿಕೆಟ್ ಕೀಪರ್ ಕಮ್ ಫಿನಿಶರ್ ಹುಡುಕಾಟ ಮುಂದುವರೆದಿದೆ. ಆ ಸ್ಥಾನವನ್ನು ಧೋನಿಯವರಂತೆ ನಿಭಾಯಿಸುವವರು ಸಿಗುವುದು ಕಷ್ಟವೇ. ರಿಷಭ್ ಪಂತ್ ಅವರನ್ನು ಟೆಸ್ಟ್ನ ಕೀಪರ್ ಆಗಿ ಪರಿಗಣಿಸಲಾಗಿತ್ತು. ಆದರೆ, ಕಾರು ಅಪಘಾತದಲ್ಲಿ ಗಾಯಗೊಂಡ ಅವರ ಬದಲಾಗಿ ಕೆ ಎಸ್ ಭರತ್ಗೆ ಅವಕಾಶ ಕೊಡಲಾಗಿತ್ತು. ಭರತ್ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಕೀಪರ್ ಆಗಿ ಉತ್ತಮವಾಗಿ ಕಂಡರೂ, ಬ್ಯಾಟರ್ ಆಗಿ ಯಶಸ್ಸು ಕಾಣಲಿಲ್ಲ. ಹೀಗಾಗಿ ಈ ಸರಣಿಯಲ್ಲಿ ಏಕದಿನ ಪಂದ್ಯಗಳಲ್ಲಿ ಕೀಪರ್ ಆಗಿ ಕಾರ್ಯ ನಿರ್ವಹಸಿದ ಅನುಭವ ಇರುವ ಕಿಶನ್ ಸ್ಥಾನ ನೀಡುವ ಸಂಭವ ಹೆಚ್ಚಿದೆ.
ತಂಡದ ಆಡಳಿತವು ರಿತುರಾಜ್ ಗಾಯಕ್ವಾಡ್‌ಗಿಂತ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ಗೆ ಆದ್ಯತೆ ನೀಡುತ್ತಿದೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ತಂಡ ರಚನೆಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಜೈಸ್ವಾಲ್ ಪ್ರಸ್ತುತ ಚೊಚ್ಚಲ ಪಂದ್ಯವನ್ನು ಆಡುವ ರೇಸ್‌ನಲ್ಲಿ ಗಾಯಕ್ವಾಡ್‌ಕ್ಕಿಂತ ಮುಂದಿದ್ದಾರೆ.
ಇದನ್ನೂ ಓದಿ: 10ನೇ ತರಗತಿ 66%, 12ರಲ್ಲಿ 56%: 3 ICC ಟ್ರೋಫಿ ಗೆದ್ದ ಏಕೈಕ ನಾಯಕ! ಕ್ರಿಕೆಟ್ ಲೋಕದ ಕಣ್ಮಣಿ ಧೋನಿಗೆ 42ನೇ ಹುಟ್ಟುಹಬ್ಬ!