ರೋಸೋ (ಡೊಮಿನಿಕಾ): ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹಿಡಿತ ಸಾಧಿಸಿದೆ. ಆರಂಭಿಕ ಯುವ ಆಟಗಾರ ಯಶಸ್ವಿ ಜೈಸ್ವಾಲ್ (143 ಬ್ಯಾಟಿಂಗ್; 350 ಎಸೆತಗಳಲ್ಲಿ 14 ಬೌಂಡರಿ) ಮತ್ತು ರೋಹಿತ್ ಶರ್ಮಾ (103; 221 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್) ಮೊದಲ ಇನಿಂಗ್ಸ್‌ನಲ್ಲಿ ದಾಖಲೆಯ ಜೊತೆಯಾಟವಾಡಿದರು. ಆರಂಭಿಕ ಜೋಡಿ 229 ರನ್‌ಗಳ ಜೊತೆಯಾಟವಾಡಿ ಏಷ್ಯಾದ ಹೊರಗೆ ಅತ್ಯಧಿಕ ಜೊತೆಯಾಟದ ದಾಖಲೆ ಬರೆದಿದ್ದಾರೆ.
ಇನ್ನು ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ಎರಡು ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿತ್ತು. ಸದ್ಯ 162 ರನ್‌ಗಳ ಮುನ್ನಡೆಯಲ್ಲಿದೆ. ಯಶಸ್ವಿ ಮತ್ತು ವಿರಾಟ್ ಕೊಹ್ಲಿ (36) ಮೂರನೇ ದಿನದ ಆಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
80/0 ಓವರ್ ನೈಟ್ ಸ್ಕೋರ್ ನೊಂದಿಗೆ ಎರಡನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಮೊದಲ ಸೆಷನ್ನಲ್ಲಿ ನಿಧಾನವಾಗಿ ಆಡಿತು. ಮೊದಲ ದಿನ ಕೊಂಚ ಬಿರುಸಿನ ಬ್ಯಾಟಿಂಗ್ ಮಾಡಿದ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಎರಡನೇ ದಿನ ಕೆರಿಬಿಯನ್ ಬೌಲರ್‌ಗಳು ಬಿಗಿ ಬೌಲಿಂಗ್ ಮಾಡಿದ್ದರಿಂದ ನಿಧಾನಗತಿಯಲ್ಲಿ ರಕ್ಷಣಾತ್ಮಕ ಆಟವನ್ನಾಡಿದರು.
-
🚨 Milestone Alert 🚨
— BCCI (@BCCI) July 13, 2023 " class="align-text-top noRightClick twitterSection" data="
2️⃣0️⃣0️⃣ up & going strong 💪 💪@ImRo45 and @ybj_19 now hold the record of the highest opening partnership for India against West Indies in Tests 🔝
Follow the match ▶️ https://t.co/FWI05P4Bnd#TeamIndia | #WIvIND pic.twitter.com/16Ok0G8ZpV
">🚨 Milestone Alert 🚨
— BCCI (@BCCI) July 13, 2023
2️⃣0️⃣0️⃣ up & going strong 💪 💪@ImRo45 and @ybj_19 now hold the record of the highest opening partnership for India against West Indies in Tests 🔝
Follow the match ▶️ https://t.co/FWI05P4Bnd#TeamIndia | #WIvIND pic.twitter.com/16Ok0G8ZpV🚨 Milestone Alert 🚨
— BCCI (@BCCI) July 13, 2023
2️⃣0️⃣0️⃣ up & going strong 💪 💪@ImRo45 and @ybj_19 now hold the record of the highest opening partnership for India against West Indies in Tests 🔝
Follow the match ▶️ https://t.co/FWI05P4Bnd#TeamIndia | #WIvIND pic.twitter.com/16Ok0G8ZpV
ಸಿಂಗಲ್ಸ್‌ನೊಂದಿಗೆ ಸ್ಟ್ರೈಕ್ರೋಟೆಟ್ ಮಾಡುತ್ತ ಅವಕಾಶ ಸಿಕ್ಕಾಗ ಬೌಂಡರಿಗಳನ್ನು ಬಾರಿಸುತ್ತ ತಂಡದ ಸ್ಕೋರ್100ರ ಗಡಿ ದಾಟಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 104 ಎಸೆತಗಳಲ್ಲಿ ಅಲ್ಜಾರಿ ಜೋಸೆಫ್ ಬೌಲಿಂಗ್‌ನಲ್ಲಿ ಪುಲ್ ಶಾಟ್‌ನೊಂದಿಗೆ ಅರ್ಧಶತಕ ಪೂರೈಸಿದರು. ಬಳಿಕ ರೋಹಿತ್ ಕೂಡ ಜೋಸೆಫ್ ಬೌಲಿಂಗ್‌ನಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಭೋಜನ ವಿರಾಮದ ವೇಳೆಗೆ ಭಾರತ ವಿಕೆಟ್ ನಷ್ಟವಿಲ್ಲದೇ 146/0 ಕಲೆ ಹಾಕಿತು.
ವಿರಾಮದ ಬಳಿಕ ಬಿರುಸಿನ ಬ್ಯಾಟಿಂಗ್ ಮಾಡಿದ ಜೈಸ್ವಾಲ್ ಬೌಂಡರಿಗಳೊಂದಿಗೆ 215 ಎಸೆತಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು. ನಂತರ, ರೋಹಿತ್ 220 ಎಸೆತಗಳಲ್ಲಿ ಹತ್ತನೇ ಟೆಸ್ಟ್ ಶತಕವನ್ನು ಪೂರೈಸಿ, ಅಥನಾಜೆ ಎಸೆತದಲ್ಲಿ ಸಿಲ್ವಾಗೆ ಕ್ಯಾಚಿತ್ತು ಪೆವಿಲಿಯನ್ ತಲುಪಿದರು. ರೋಹಿತ್ ನಿರ್ಗಮನದ ಬಳಿಕ ಕ್ರೀಸ್ಗೆ ಬಂದ ಶುಭಮನ್ ಗಿಲ್ (6) ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಟೀ ವಿರಾಮದ ವೇಳೆಗೆ ಭಾರತ 2 ವಿಕೆಟ್ ನಷ್ಟಕ್ಕೆ 245 ರನ್ ಕಲೆಹಾಕಿತು. ಬಳಿಕ ಕ್ರೀಸ್ಗೆ ಬಂದ ವಿರಾಟ್ ಕೊಹ್ಲಿ ಜತೆ ಯಶಸ್ವಿ ಇನಿಂಗ್ಸ್ ಮುಂದುವರಿಸಿದರು. ಇಬ್ಬರೂ ಸಮಯೋಚಿತ ಪ್ರದರ್ಶನದೊಂದಿಗೆ ತಂಡದ ಸ್ಕೋರನ್ನು 300ಕ್ಕೆ ಕೊಂಡೊಯ್ದರು. ಕೊನೆಯ ಅವಧಿಯಲ್ಲಿ ಈ ಜೋಡಿ 67 ರನ್ ಗಳಿಸಿತ್ತು. ಈ ಮೂಲಕ ದಿನದಾಟದ ಅಂತ್ಯಕ್ಕೆ ಭಾರತ 2 ವಿಕೆಟ್ ನಷ್ಟಕ್ಕೆ 312ರನ್ಗಳೊಂದಿಗೆ ಮುನ್ನಡೆಯಲ್ಲಿದೆ.
ರೋಹಿತ್-ಯಶಸ್ವಿ ದಾಖಲೆ: ಭಾರತದ ಆರಂಭಿಕ ಜೋಡಿ ಅತ್ಯಧಿಕ ರನ್‌ಗಳ ಜೊತೆಯಾಟವಾಡಿ ದಾಖಲೆ ಬರೆದಿದ್ದಾರೆ. ರೋಹಿತ್-ಯಶಸ್ವಿ ಏಷ್ಯಾದ ಹೊರಗೆ 229 ರನ್‌ಗಳ ಜೊತೆಯಾಟವಾಡಿದ ಆರಂಭಿಕ ಜೋಡಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನಾ ಭಾರತದ ಚೇತನ್ ಚೌಹಾಣ್-ಗವಾಸ್ಕರ್ ಜೋಡಿ 1979ರಲ್ಲಿ ಇಂಗ್ಲೆಂಡ್ ವಿರುದ್ಧ, 213ರನ್‌ಗಳ ಜೊತೆಯಾಟವಾಡಿ ದಾಖಲೆಯನ್ನು ಮಾಡಿದ್ದರು. ಇದೀಗ ರೋಹಿತ್ ಯಶಸ್ವಿ ಜೋಡಿ ಆ ದಾಖಲೆಯನ್ನು ಮುರಿದಿದೆ.
ಜೈಸ್ವಾಲ್ ದಾಖಲೆ: ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ಶತಕ ಸಿಡಿಸುವ ಮೂಲಕ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ 17ನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ 2013ರ ಮಾರ್ಚ್‌ನಲ್ಲಿ ಆಸೀಸ್ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ಶಿಖರ್ ಧವನ್ (187) ಶತಕ ಸಿಡಿಸಿದ್ದರು. ಇದೀಗ ಎಡಗೈ ಬ್ಯಾಟರ್ ಜೈಸ್ವಾಲ್ ಶತಕ ಬಾರಿಸುವ ಮೂಲಕ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ: Asian Athletics Championships: ಸ್ಪರ್ಧೆಯಲ್ಲಿ ಮಿಂಚಿದ ಆಟಗಾರರು, ಭಾರತಕ್ಕೆ ಮೂರು ಚಿನ್ನ, ಎರಡು ಕಂಚು!