ETV Bharat / sports

IND vs WI: ಭಾರತ-ವಿಂಡೀಸ್‌ ಟಿ20 ಪಂದ್ಯ 2 ಗಂಟೆ ತಡ, ಕಾರಣ!?

author img

By

Published : Aug 1, 2022, 6:17 PM IST

ಭಾರತ-ವೆಸ್ಟ್ ಇಂಡೀಸ್ ತಂಡಗಳ ನಡುವೆ ಇಂದು ನಡೆಯಲಿರುವ ಎರಡನೇ ಟಿ20 ಪಂದ್ಯ ಎರಡು ಗಂಟೆ ತಡವಾಗಿ ಆರಂಭವಾಗಲಿದೆ.

India vs West Indies
India vs West Indies

ಟ್ರಿನಿಡಾಡ್​(ವೆಸ್ಟ್ ಇಂಡೀಸ್​): ಪ್ರವಾಸಿ ಭಾರತ ಹಾಗೂ ಆತಿಥೇಯ ವೆಸ್ಟ್ ಇಂಡೀಸ್​ ನಡುವಿನ 2ನೇ ಟಿ20 ಪಂದ್ಯ ಇಂದು ನಡೆಯಲಿದ್ದು, ಎರಡು ಗಂಟೆ ತಡವಾಗಿ ಆರಂಭವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.

ಟ್ರಿನಿಡಾಡ್‌ನಿಂದ ಸೇಂಟ್ ಕಿಟ್ಸ್‌ಗೆ ಆಗಮಿಸುವ ತಂಡದ ಲಗೇಜ್‌ ವಿಳಂಬವಾಗಿದೆ. ಹೀಗಾಗಿ, ರಾತ್ರಿ 8 ಗಂಟೆ ಬದಲಾಗಿ 10 ಗಂಟೆಗೆ ಪಂದ್ಯ ಶುರುವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10 ಗಂಟೆಗೆ ಪಂದ್ಯ ಆಯೋಜನೆಗೊಂಡಿದೆ. ಅಭಿಮಾನಿಗಳು, ಪ್ರಾಯೋಜಕರು, ಪ್ರಸಾರಕರು ಹಾಗೂ ಇತರೆ ಎಲ್ಲ ಪಾಲುದಾರರಿಗೆ ಇದರಿಂದ ಅನಾನುಕೂಲತೆ ಉಂಟಾಗಿದ್ದರೆ ವಿಷಾದಿಸುತ್ತೇವೆ ವಿಂಡೀಸ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಟ್ರಿನಿಡಾಡ್​​ನ ಬ್ರಿಯಾನ್ ಲಾರಾ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 68 ರನ್​ಗಳಿಂದ ಗೆಲುವು ದಾಖಲಿಸಿದ್ದು, ಈ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಇಂದಿನ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ: India-Pak women cricket: ಪಾಕ್​ ಟೀಂ ಬಗ್ಗುಬಡಿದ ಕೌರ್​ ಪಡೆ.. ಮಿಂಚಿದ ಮಂದಾನ

ಟೀಂ ಇಂಡಿಯಾ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಆರ್ ಅಶ್ವಿನ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಭುವನೇಶ್ವರ್, ಆವೇಶ್​ ಖಾನ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.