ETV Bharat / sports

ಭಾರತ vs ವೆಸ್ಟ್​ ಇಂಡೀಸ್​ ಮೊದಲ ಟೆಸ್ಟ್‌: ಅಶ್ವಿನ್‌ 'ಫೈವ್‌ಸ್ಟಾರ್‌', ನಲುಗಿದ ವಿಂಡೀಸ್‌ - ವೆಸ್ಟ್ ಇಂಡೀಸ್

ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಿದೆ.

ಭಾರತ ಬೌಲಿಂಗ್​ ದಾಳಿಗೆ ವೆಸ್ಟ್​ ಇಂಡೀಸ್​ ತತ್ತರ

author img

By

Published : Jul 13, 2023, 9:13 AM IST

ರೋಸೋ (ಡೊಮಿನಿಕಾ): ವೆಸ್ಟ್ ಇಂಡೀಸ್ ವಿರುದ್ಧ ಬುಧವಾರ ಇಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಶುಭಾರಂಭ ಮಾಡಿದೆ. ವಿಂಡೀಸ್ ತಂಡವನ್ನು ಕೇವಲ 150 ರನ್​ಗಳಿಗೆ ಆಲೌಟ್ ಮಾಡಿದ ಭಾರತ, ಬ್ಯಾಟಿಂಗ್​ನಲ್ಲೂ ಮೇಲುಗೈ ಸಾಧಿಸುತ್ತಿದೆ. ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 80 ರನ್ ಗಳಿಸಿದೆ. ರೋಹಿತ್ ಶರ್ಮಾ (30) ಮತ್ತು ಯಶಸ್ವಿ ಜೈಸ್ವಾಲ್ (40) ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ. ಭಾರತ ಮೊದಲ ಇನಿಂಗ್ಸ್‌ನಲ್ಲಿ 70 ರನ್‌ಗಳ ಹಿನ್ನಡೆಯಲ್ಲಿದೆ.

ಹೀಗಿತ್ತು ಆಟ: ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ವಿಂಡೀಸ್,​ 10 ಓವರ್​ಗಳ ಮುಕ್ತಾಯಕ್ಕೆ ವಿಕೆಟ್​ ನಷ್ಟವಿಲ್ಲದೇ 29 ರನ್​ ಕಲೆ ಹಾಕಿತ್ತು. ಈ ಸಂದರ್ಭದಲ್ಲಿ ಉತ್ತಮ ಸ್ಕೋರ್​ ಗಳಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆರಂಭಿಕ ಬ್ಯಾಟರ್​ ತ್ಯಾಗ್ನಾರಾಯಣ ಚಂದ್ರಪಾಲ್ (12) ಅವರನ್ನು ಅಶ್ವಿನ್ ಕ್ಲೀನ್‌ಬೌಲ್ಡ್ ಮಾಡುವ ಮೂಲಕ ಜೊತೆಯಾಟಕ್ಕೆ ಬ್ರೇಕ್​ ಹಾಕಿದರು. ನಂತರ ವೆಸ್ಟ್ ಇಂಡೀಸ್ ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಬ್ರಾಥ್ ವೈಟ್ (20) ಅವರು ಅಶ್ವಿನ್ ಬೌಲಿಂಗ್​ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚಿತ್ತರೆ, ಶಾರ್ದೂಲ್ ಠಾಕೂರ್ ಎಸೆದ 20ನೇ ಓವರ್​ನಲ್ಲಿ ರೀಫರ್ (2) ಅವರು ವಿಕೆಟ್ ಕೀಪರ್​ಗೆ ಕ್ಯಾಚ್ ಕೊಟ್ಟರು. ಭೋಜನ ವಿರಾಮಕ್ಕೂ ಮುನ್ನ ಬ್ಲಾಕ್ ವುಡ್ (14) ಜಡೇಜಾ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು.

ಭೋಜನ ವಿರಾಮದ ವೇಳೆಗೆ ವಿಂಡೀಸ್​ 68/4 ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ವಿರಾಮದ ನಂತರವೂ ಕಳಪೆ ಪ್ರದರ್ಶನ ಮುಂದುವರೆಸಿದ ವಿಂಡೀಸ್​, ಜಡೇಜಾ ಎಸೆದ 32ನೇ ಓವರ್​ನಲ್ಲಿ ಜೋಶುವಾ ಡ ಸಿಲ್ವಾ (2) ವಿಕೆಟ್ ಕೀಪರ್ ಇಶಾನ್ ಕಿಶನ್‌ಗೆ ಕ್ಯಾಚ್ ನೀಡಿದರೆ, ಸಿರಾಜ್​ ಎಸೆತದಲ್ಲಿ ಹೋಲ್ಡರ್ (18), ಅಲ್ಜಾರಿ ಜೋಸೆಫ್ (4) ಮತ್ತು ಅಥಾನಾಜೆ ಅವರನ್ನು ಅಶ್ವಿನ್ ಪೆವಿಲಿಯನ್‌ಗೆ ಕಳುಹಿಸಿದರು. ಚಹಾ ವಿರಾಮದ ಹೊತ್ತಿಗೆ ವೆಸ್ಟ್ ಇಂಡೀಸ್ ಎಂಟು ವಿಕೆಟ್ ಕಳೆದುಕೊಂಡು 137 ರನ್ ಗಳಿಸಿತ್ತು. ಕೊನೆಯ ಸೆಷನ್‌ನಲ್ಲಿ ಜಡೇಜಾ ಬೌಲಿಂಗ್‌ನಲ್ಲಿ ಕೀಮರ್ ರೋಚ್ (1) ಎಲ್ಬಿಡಬ್ಲ್ಯೂ ಆದರು.

ಅಶ್ವಿನ್ ಫೈವ್‌ಸ್ಟಾರ್‌ ಪ್ರದರ್ಶನ : ವಿಂಡೀಸ್​ ಮೇಲೆ ಮಾರಕ ಸ್ಪಿನ್​ ದಾಳಿ ನಡೆಸಿದ ಆರ್‌. ಅಶ್ವಿನ್ 5 ವಿಕೆಟ್ ಪಡೆದು ಕೆರಿಬಿಯನ್ನರು ಸರ್ವಪತನದಲ್ಲಿ ಪ್ರಮುಖ ಪಾತ್ರವಹಿಸಿದರು. ಮತ್ತೊಂದೆಡೆ, ಜಡೇಜಾ 3, ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

700 ಅಂತಾರಾಷ್ಟ್ರೀಯ ವಿಕೆಟ್ ಪಡೆದ ಅಶ್ವಿನ್ ​: ಅಶ್ವಿನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 95ನೇ ಬಾರಿಗೆ ಬ್ಯಾಟರ್‌ಗಳನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ಮೂಲಕ ಅನಿಲ್ ಕುಂಬ್ಳೆ 94 ಕ್ಲೀನ್​ ಬೌಲ್ಡ್​ ಮಾಡಿದ್ದ ದಾಖಲೆ ಮುರಿದಿದ್ದಾರೆ. ಇದರೊಂದಿಗೆ ವೃತ್ತಿ ಜೀವನದ 700ನೇ ಅಂತಾರಾಷ್ಟ್ರೀಯ ವಿಕೆಟ್‌ ಪಡೆದರು. ಈ ಸಾಧನೆ ಮಾಡಿದ ಭಾರತದ ಮೂರನೇ ಬೌಲರ್ ಎನಿಸಿಕೊಂಡರು. ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ 956 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದರೆ, ಹರ್ಭಜನ್ ಸಿಂಗ್ 711 ವಿಕೆಟ್‌ಗಳನ್ನು ಪಡೆದು 2ನೇ ಕ್ರಮಾಂಕದಲ್ಲಿದ್ದಾರೆ.

ವಿಂಡೀಸ್ ನೆಲದಲ್ಲಿ ಭಾರತ ಪ್ರಾಬಲ್ಯ: ಕೆರಿಬಿಯನ್ ನೆಲದಲ್ಲಿ ಆಡಿದ ಕೊನೆಯ ನಾಲ್ಕು ಟೆಸ್ಟ್ ಸರಣಿಗಳನ್ನು ಭಾರತ ಗೆದ್ದುಕೊಂಡಿದೆ. ವೆಸ್ಟ್ ಇಂಡೀಸ್ ಕೊನೆಯದಾಗಿ 2002ರಲ್ಲಿ ಟೀಂ ಇಂಡಿಯಾ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು. ಅಂದಿನಿಂದ ಭಾರತ ಸಂಪೂರ್ಣ ಪ್ರಾಬಲ್ಯ ಮೆರೆಯುತ್ತಿದೆ. ವಿಂಡೀಸ್ ತಂಡಕ್ಕೆ 21 ವರ್ಷಗಳಿಂದ ತವರಿನಲ್ಲಿ ಭಾರತದ ವಿರುದ್ಧ ಒಂದೇ ಒಂದು ಟೆಸ್ಟ್ ಗೆಲ್ಲಲಾಗಿಲ್ಲ.

ಕಿಶಾನ್​, ಜೈಸ್ವಾಲ್ ಟೆಸ್ಟ್ ಪದಾರ್ಪಣೆ​: ವೆಸ್ಟ್​ ಇಂಡೀಸ್​ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್​ ಸರಣಿಗೆ ಭಾರತದ ಯುವ ಆಟಗಾರರಾದ ಇಶಾನ್​ ಕಿಶಾನ್​, ಯಶಸ್ವಿ ಜೈಸ್ವಾಲ್ ಆಯ್ಕೆಯಾಗಿದ್ದು, ಇದು ಇಬ್ಬರು ಆಟಗಾರರ ಚೊಚ್ಚಲ ಟೆಸ್ಟ್​ ಪಂದ್ಯವಾಗಿದೆ.

ಇದನ್ನೂ ಓದಿ: 12 ವರ್ಷಗಳ ಹಳೆಯ ವೆಸ್ಟ್​ ಇಂಡೀಸ್​ ಪ್ರವಾಸದ ಕ್ಷಣಗಳನ್ನು ಮೆಲುಕು ಹಾಕಿದ ರಾಹುಲ್ & ವಿರಾಟ್..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.