ETV Bharat / sports

14 ದಿನಗಳ ಕ್ವಾರಂಟೈನ್​ ಮುಗಿಸಿದ ಯಂಗ್ ಇಂಡಿಯಾ.. ಲಂಕಾ ಸರಣಿಗಾಗಿ ಶಿಖರ್ ಪಡೆ ಸರ್ವ ಸನ್ನದ್ಧ!

ತಂಡದ ನಾಯಕನಾಗಿ ಶಿಖರ್​ ಧವನ್​ ಆಯ್ಕೆಯಾಗಿದ್ದು,ಉಪನಾಯಕನಾಗಿ ಭುವನೇಶ್ವರ್​ ಕುಮಾರ್​​ ಇರಲಿದ್ದಾರೆ. ಇದರ ಬೆನ್ನಲ್ಲೇ ವಿರಾಟ್​ ಕೊಹ್ಲಿ ನೇತೃತ್ವದ ತಂಡವೊಂದು ಆಗಸ್ಟ್​ 4ರಿಂದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗಲಿದ್ದು, ಈಗಾಗಲೇ ಲಂಡನ್​ನಲ್ಲಿದೆ..

author img

By

Published : Jun 25, 2021, 3:39 PM IST

India vs Sri Lanka
India vs Sri Lanka

ಮುಂಬೈ : ನ್ಯೂಜಿಲ್ಯಾಂಡ್​ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಮುಕ್ತಾಯಗೊಂಡಿದೆ. ಇದೀಗ ಭಾರತದ ಮತ್ತೊಂದು ಪಡೆ ಶ್ರೀಲಂಕಾ ವಿರುದ್ಧದ ಸರಣಿಗೋಸ್ಕರ ತಯಾರಿ ನಡೆಸುತ್ತಿದೆ. ಯುವ ಪಡೆಯನ್ನೊಳಗೊಂಡಿರುವ ಶಿಖರ್​ ಧವನ್​ ನೇತೃತ್ವದ ತಂಡ ಇದೀಗ 14 ದಿನಗಳ ಹೋಟೆಲ್​ ಕ್ವಾರಂಟೈನ್​ ಮುಗಿಸಿದೆ.

ಎಲ್ಲ ಪ್ಲೇಯರ್ಸ್​​​ ಮುಂಬೈ ಹೋಟೆಲ್​ನಲ್ಲಿ 14 ದಿನಗಳ ಕ್ವಾರಂಟೈನ್​ ಮುಕ್ತಾಯಗೊಳಿಸಿದೆ. ಇದೀಗ ಅಭ್ಯಾಸ ಆರಂಭಿಸುವ ತವಕದಲ್ಲಿದ್ದಾರೆ. ಲಂಕಾ ವಿರುದ್ಧ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಯಂಗ್ ಇಂಡಿಯಾ ಭಾಗಿಯಾಗಲಿದೆ. ಏಕದಿನ ಪಂದ್ಯಗಳು ಜುಲೈ 13,16 ಹಾಗೂ 18 ರಂದು ನಡೆಯಲಿದೆ. ಟಿ-20 ಪಂದ್ಯಗಳು ಜುಲೈ 21,23 ಹಾಗೂ 25 ರಂದು ನಡೆಯಲಿವೆ.

ಇದನ್ನೂ ಓದಿರಿ: ಪರೀಕ್ಷೆ ಬರೆದಿದ್ದೇವೆ, ಫಲಿತಾಂಶಕೋಸ್ಕರ ಕಾಯ್ತಿದ್ದೇವೆ ಎಂದ ಸಿಪಿ ಯೋಗೇಶ್ವರ್​.. ಈ ಮಾತಿನಲ್ಲೇನಿದೆಯೋ ಒಳಾರ್ಥ!

ಲಂಕಾ ವಿರುದ್ಧದ ಸರಣಿಯಲ್ಲಿ ಯುವ ಪ್ಲೇಯರ್ಸ್​ಗಳಾದ ದೇವದತ್​ ಪಡಿಕ್ಕಲ್​, ಋತುರಾಜ್​​​ ಗಾಯಕ್ವಾಡ್, ಕೃಷ್ಣಪ್ಪ ಗೌತಮ್​, ಚೇತನ್​ ಸಕಾರಿಯಾ, ವರುಣ್​ ಚಕ್ರವರ್ತಿ ಹಾಗೂ ನಿತೀಶ್ ರಾಣಾ ಭಾಗಿಯಾಗುತ್ತಿದ್ದಾರೆ. ಸದ್ಯ ಜಿಮ್​​ನಲ್ಲಿರುವ ವಿಡಿಯೋ ಶೇರ್​​ ಮಾಡಿಕೊಂಡಿದ್ದಾರೆ. ಇದೀಗ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ಯಂಗ್​ ಪ್ಲೇಯರ್ಸ್​ ಜಿಮ್​ನಲ್ಲಿರುವ ವಿಡಿಯೋ ಶೇರ್ ಮಾಡಿದೆ.

ತಂಡದ ನಾಯಕನಾಗಿ ಶಿಖರ್​ ಧವನ್​ ಆಯ್ಕೆಯಾಗಿದ್ದು,ಉಪನಾಯಕನಾಗಿ ಭುವನೇಶ್ವರ್​ ಕುಮಾರ್​​ ಇರಲಿದ್ದಾರೆ. ಇದರ ಬೆನ್ನಲ್ಲೇ ವಿರಾಟ್​ ಕೊಹ್ಲಿ ನೇತೃತ್ವದ ತಂಡವೊಂದು ಆಗಸ್ಟ್​ 4ರಿಂದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗಲಿದ್ದು, ಈಗಾಗಲೇ ಲಂಡನ್​ನಲ್ಲಿದೆ.

ಶ್ರೀಲಂಕಾ ವಿರುದ್ಧದ ಸರಣಿಗಾಗಿ ಟೀಂ ಇಂಡಿಯಾ ತಂಡ

ಶಿಖರ್‌ ಧವನ್​(ಕ್ಯಾಪ್ಟನ್​), ಪೃಥ್ವಿ ಶಾ, ದೇವದತ್ ಪಡಿಕ್ಕಲ್​, ಋತುರಾಜ್​ ಗಾಯಕ್ವಾಡ್​, ಸೂರ್ಯಕುಮಾರ್​ ಯಾದವ್​, ಮನೀಶ್​ ಪಾಂಡೆ, ಹಾರ್ದಿಕ್​ ಪಾಂಡ್ಯಾ, ನಿತೀಶ್ ರಾಣಾ, ಇಶನ್​ ಕಿಶನ್​(ವಿ,ಕೀ), ಸಂಜು ಸ್ಯಾಮ್ಸನ್​​(ವಿ,ಕೀ), ಯಜುವೇಂದ್ರ ಚಹಲ್​, ರಾಹುಲ್​ ಚಹರ್​, ಕೆ. ಗೌತಮ್​, ಕೃನಾಲ್ ಪಾಂಡ್ಯಾ, ಕುಲ್ದೀಪ್​ ಯಾದವ್​, ವರುಣ್​ ಚಕ್ರವರ್ತಿ, ಭುವನೇಶ್ವರ್​ ಕುಮಾರ್​(ಉ.ನಾಯಕ), ದೀಪಕ್ ಚಹರ್​, ನವದೀಪ್​ ಸೈನಿ, ಚೇತನ್​ ಸಕಾರಿಯಾ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.