ETV Bharat / sports

ಸೂರ್ಯಕುಮಾರ್​ ಅರ್ಧಶತಕದ ಬಲ: ಶ್ರೀಲಂಕಾಗೆ 165 ರನ್​ಗಳ ಗುರಿ ನೀಡಿದ ಟೀಮ್ ಇಂಡಿಯಾ - ಸೂರ್ಯಕುಮಾರ್ ಯಾದವ್ ಅರ್ಧಶತಕ

ಶಿಖರ್ ಧವನ್ 36 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್​ ಸಹಿತ 46, ಸೂರ್ಯಕುಮಾರ್ ಯಾದವ್​ 34 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್​ಗಳ ಸಹಿತ 50 ರನ್​ಗಳಿಸಿದರು.

India vs Sri Lanka T20I
ಸೂರ್ಯಕುಮಾರ್ ಯಾದವ್​
author img

By

Published : Jul 25, 2021, 9:54 PM IST

ಕೊಲಂಬೊ: ಸೂರ್ಯಕುಮಾರ್ ಯಾದವ್​ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಅತಿಥೇಯ ಶ್ರೀಲಂಕಾ ತಂಡಕ್ಕೆ 165ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.

ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಇಳಿದ ಭಾರತ ತಂಡ ಖಾತೆ ತೆರೆಯುವ ಮುನ್ನವೇ ಪದಾರ್ಪಣೆ ಬ್ಯಾಟ್ಸ್​ಮನ್ ಪೃಥ್ವಿ ಶಾ(0) ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿತು.

ಎರಡನೇ ವಿಕೆಟ್​ಗೆ ನಾಯಕ ಶಿಖರ್ ಧವನ್​ ಮತ್ತು ಸಂಜು ಸಾಮ್ಸನ್​ ಜೊತೆಗೂಡಿ 51 ರನ್​ ಸೇರಿಸಿ ಚೇತರಿಕೆ ನೀಡಿದರು. ಉತ್ತಮವಾಗಿ ಆಡುತ್ತಿದ ಸಾಮ್ಸನ್​ ಹಸರಂಗ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಅವರು 20 ಎಸತಗಳಲ್ಲಿ 27ರನ್​ಗಳಿಸಿದ್ದರು.

ನಂತರ ಬಂದ ಸೂರ್ಯಕುಮಾರ್​ ಯಾದವ್​ ಎಚ್ಚರಿಕೆಯ ಆಟದ ಜೊತೆಗೆ ಕೆಟ್ಟ ಹೊಡೆತಗಳನ್ನು ದಂಡಿಸುತ್ತಾ ಧವನ್​ ಜೊತೆಗೂಡಿ 62 ರನ್​ ಸೇರಿಸಿದರು. ಕೇವಲ 14 ರನ್​ಗಳ ಅಂತರದಲ್ಲಿ ಇಬ್ಬರು ವಿಕೆಟ್​ ಒಪ್ಪಿಸಿದ್ದು ಭಾರತದ ಬೃಹತ್​ ಮೊತ್ತದ ಕನಸಿಗೆ ಹಿನ್ನಡೆಯುಂಟಾಯಿತು.

ಶಿಖರ್ ಧವನ್ 36 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್​ ಸಹಿತ 46, ಸೂರ್ಯಕುಮಾರ್ ಯಾದವ್​ 34 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್​ಗಳ ಸಹಿತ 50 ರನ್​ಗಳಿಸಿದರು.

ಹಾರ್ದಿಕ್​ ಪಾಂಡ್ಯ 12 ಎಸೆತಗಳಲ್ಲಿ 10 ರನ್​ಗಳಿಸಿ ಮತ್ತೊಮ್ಮೆ ವಿಫಲರಾದರು. ಇಶಾನ್​ ಕಿಶನ್ 14 ಎಸೆತಗಳಲ್ಲಿ ಅಜೇಯ 20 ರನ್​ಗಳಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದ್ದಲ್ಲದೆ 164 ರನ್​ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾದರು.

ಇದನ್ನು ಓದಿ:'ಬೆಳ್ಳಿ ಹುಡುಗಿ' ಮೀರಾಬಾಯಿಗೆ ಜೀವನಪೂರ್ತಿ FREE ಡಾಮಿನೊಸ್ ಪಿಜ್ಜಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.