ಕೊಲಂಬೊ: ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ಆತಿಥೇಯ ಶ್ರೀಲಂಕಾ ತಂಡ ಸೋಲು ಕಂಡಿದೆ. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಭಾರತ ಸರಣಿಯನ್ನು 2-0 ಅಂತರದಿಂದ ಕೈವಶ ಮಾಡಿಕೊಂಡಿದೆ. ಈ ಪಂದ್ಯ ಸೋಲುತ್ತಿದ್ದಂತೆ ಶ್ರೀಲಂಕಾ ಕ್ಯಾಪ್ಟನ್ ಹಾಗೂ ಕೋಚ್ ನಡುವೆ ಮಾತಿನ ಚಕಮಕಿ ನಡೆಯಿತು.
- — cric fun (@cric12222) July 20, 2021 " class="align-text-top noRightClick twitterSection" data="
— cric fun (@cric12222) July 20, 2021
">— cric fun (@cric12222) July 20, 2021
ಲಂಕಾ ನೀಡಿದ 276 ರನ್ ಬೆನ್ನತ್ತಿದ್ದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 196 ರನ್ಗಳಿಕೆ ಮಾಡಿ, ಸೋಲಿನ ಸುಳಿಗೆ ಸಿಲುಕಿಕೊಂಡಿತ್ತು. ಈ ವೇಳೆ ಆಕರ್ಷಕ ಜೊತೆಯಾಟವಾಡಿದ ದೀಪಕ್ ಚಹರ್ (69) ಹಾಗೂ ಉಪನಾಯಕ ಭುವನೇಶ್ವರ್ ಕುಮಾರ್ (19) ತಂಡವನ್ನು ಗೆಲುವಿನ ದಡ ಸೇರಿಸಿದರು. ಸುಲಭವಾಗಿ ಗೆಲುವು ಸಾಧಿಸಬೇಕಾದ ಪಂದ್ಯದಲ್ಲಿ ಲಂಕಾ ಪಡೆ ಸೋಲು ಕಂಡಿದ್ದರಿಂದ ತಂಡದ ಕೋಚ್ ಮಿಕ್ಕಿ ಆರ್ಥರ್ ಆಕ್ರೋಶಗೊಂಡರು. ಜೊತೆಗೆ, ಕ್ಯಾಪ್ಟನ್ ದಸುನ್ ಶನಕ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಪಂದ್ಯ ನಡೆಯುತ್ತಿದ್ದ ವೇಳೆ ಮೇಲಿಂದ ಮೇಲೆ ಮೈದಾನದ ಹತ್ತಿರ ಬಂದು ತಂಡದ ಪ್ಲೇಯರ್ಸ್ಗಳಿಗೆ ಆರ್ಥರ್ ಕಿವಿಮಾತು ಹೇಳುತ್ತಿದ್ದರು. ಇದರ ಹೊರತಾಗಿಯೂ ತಂಡ ಸೋಲುಂಡಿದ್ದು ಪಂದ್ಯ ಮುಕ್ತಾಯದ ಬಳಿಕ ಮೈದಾನಕ್ಕೆ ಬಂದು ಕ್ಯಾಪ್ಟನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ದೀಪಕ್ ಚಾಹರ್ ಭರ್ಜರಿ ಬ್ಯಾಟಿಂಗ್: ಲಂಕಾ ವಿರುದ್ಧ ಭಾರತಕ್ಕೆ ರೋಚಕ ಜಯ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಲಂಕಾ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 275 ರನ್ಗಳಿಕೆ ಮಾಡಿತ್ತು. ಈ ಮೊತ್ತ ಬೆನ್ನತ್ತಿದ್ದ ಭಾರತ 49.1 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ ಗೆಲುವಿನ ನಗೆ ಬೀರಿತು.