ಕೊಲಂಬೊ: ಏಕದಿನ ಸರಣಿಯನ್ನು 2-1ರಲ್ಲಿ ಗೆದ್ದಿರುವ ಶಿಖರ್ ಧವನ್ ನೇತೃತ್ವದ ಭಾರತ ತಂಡ ಇಂದು ಶ್ರೀಲಂಕಾ ವಿರುದ್ಧ 2ನೇ ಟಿ20 ಪಂದ್ಯವನ್ನಾಡಲಿದ್ದು, ಸರಣಿ ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.
ಶ್ರೀಲಂಕಾ 2019ರಿಂದ ಭಾರತ ತಂಡವನ್ನು 14 ಟಿ20 ಪಂದ್ಯಗಳಲ್ಲಿ ಎದುರಿಸಿದ್ದು, ಕೇವಲ ಒಂದು ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿದೆ. ಆದರೆ ಭಾರತ ತಂಡ ಉಳಿದ 13 ಪಂದ್ಯಗಳನ್ನು ಗೆದ್ದು ಬೀಗಿದೆ. ಆದ್ರೆ ಮೊದಲ ಪಂದ್ಯದ ಸೋಲನ್ನು ಮರೆತು 2ನೇ ಪಂದ್ಯದಲ್ಲಿ ಉತ್ತಮವಾಗಿ ಕಮ್ಬ್ಯಾಕ್ ಮಾಡುವ ಇರಾದೆಯಲ್ಲಿ ಲಂಕಾ ಪಡೆಯಿದೆ.
ಭಾರತದ ಕಡೆ ತಮ್ಮ ಮೊದಲನೇ ಪಂದ್ಯದಲ್ಲೇ ಡಕ್ ಔಟ್ ಆಗಿದ್ದ ಯುವ ಓಪನರ್ ತಮ್ಮ ತಪ್ಪನ್ನು ತಿದ್ದಿಕೊಂಡು ಸರಣಿ ಗೆಲ್ಲಲು ನೆರವಾಗುವುದರತ್ತ ಎದುರು ನೋಡುತ್ತಿದ್ದಾರೆ. ಶಿಖರ್ ಧವನ್, ಸೂರ್ಯಕುಮಾರ್ ಯಾದವ್ ಅದ್ಭುತ ಫಾರ್ಮ್ನಲ್ಲಿರುವುದರಿಂದ ಸಿಂಹಳೀಯರ ನಾಡಿನಲ್ಲಿ ಭಾರತಕ್ಕೆ ಸರಣಿ ಇಂದಿನ ಪಂದ್ಯದಲ್ಲೇ ದೃಢಪಡಿಸಿಕೊಳ್ಳುವ ಅವಕಾಶ ಹೆಚ್ಚಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ದೀಪಕ್ ಚಹರ್ ಮತ್ತು ಚಹಲ್ ಅತ್ಯುತ್ತಮ ಫಾರ್ಮ್ನಲ್ಲಿ ಭಾರತ ತಂಡ ಇನ್ನು ಒಂದು ಪಂದ್ಯ ಉಳಿದಿರುವಂತೆ ಸರಣಿ ಗೆಲ್ಲಲು ಕಾಯುತ್ತಿದೆ.
ಮುಖಾಮುಖಿ: ಎರಡು ತಂಡಗಳು 2009ರಿಂದ ಇಲ್ಲಿಯವರೆಗೆ 20 ಟಿ20 ಪಂದ್ಯಗಳನ್ನಾಡಿದ್ದು, ಭಾರತ ತಂಡ 5 ಪಂದ್ಯಗಳನ್ನು ಗೆದ್ದಿದ್ದರೆ, ಭಾರತದ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 2018ರ ನಿಢಾಹಸ್ ಟ್ರೋಪಿಯಲ್ಲಿ ಕೊನೆಯ ಬಾರಿಗೆ ಗೆದ್ದ ದಾಖಲೆ ಹೊಂದಿದೆ.
ಭಾರತ : ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ವರುಣ್ ಚಕ್ರವರ್ತಿ
ಶ್ರೀಲಂಕಾ : ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಾಸುನ್ ಶಾನಕಾ (ನಾಯಕ), ಆಶೆನ್ ಬಂಡರಾ, ವನಿಂಡು ಹಸರಂಗ, ಚಮಿಕಾ ಕರುಣರತ್ನ, ಇಸುರು ಉದಾನ, ಅಕಿಲಾ ಧನಂಜಯ.
ಇದನ್ನು ಓದಿ:ಲಂಕಾ ರಾಷ್ಟ್ರಗೀತೆಗೆ ದನಿಯಾಗಿ, ಕರುಣರತ್ನೆಗೆ ಬ್ಯಾಟ್ ಗಿಫ್ಟ್ ಮಾಡಿ ಮನಗೆದ್ದ ಪಾಂಡ್ಯಾ