ರಾಜ್ಕೋಟ್: ಭಾರತ ನೀಡಿದ್ದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಸಿಂಹಳೀಯರು 137 ರನ್ಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದು ಕೊಂಡು ಟೀಂ ಇಂಡಿಯಾ ಎದುರು ಮಂಡಿಯೂರಿದ್ದಾರೆ. ಭಾರತದ ಪರ ಅರ್ಷದೀಪ್ ಸಿಂಗ್ ಮೂರು ವಿಕೆಟ್ ಮತ್ತು ಮಲಿಕ್, ಹಾರ್ದಿಕ್ ಪಾಂಡ್ಯ, ಚಹಾಲ್ ತಲಾ ಎರಡು ವಿಕೆಟ್ ಪಡೆದರು. ಭಾರತ 91ರನ್ಗಳ ಅಂತರದ ಗೆಲುವು ಸಾಧಿಸುವ ಮೂಲಕ ವರ್ಷದ ಮೊದಲ ಸರಣಿಯನ್ನು ಗೆದ್ದುಕೊಂಡಿತು. ಲಂಕಾ ಪರ 23ರನ್ಗಳೇ ಅತೀ ಹೆಚ್ಚಿನ ರನ್ ಗಳಿಕೆಯಾಗಿದ್ದೇ ಅತಿ ದೊಡ್ಡ ಸ್ಕೋರ್.
-
A 91-run win and a series victory for India in Rajkot!#INDvSL | 📝Scorecard: https://t.co/v6DELbUa9F pic.twitter.com/xnh2ZFOcB5
— ICC (@ICC) January 7, 2023 " class="align-text-top noRightClick twitterSection" data="
">A 91-run win and a series victory for India in Rajkot!#INDvSL | 📝Scorecard: https://t.co/v6DELbUa9F pic.twitter.com/xnh2ZFOcB5
— ICC (@ICC) January 7, 2023A 91-run win and a series victory for India in Rajkot!#INDvSL | 📝Scorecard: https://t.co/v6DELbUa9F pic.twitter.com/xnh2ZFOcB5
— ICC (@ICC) January 7, 2023
ತಾಳ್ಮೆಯ ಆರಂಭ: ಬೃಹತ್ ಮೊತ್ತವನ್ನು ಬೆನ್ನಟ್ಟಿದ ಲಂಕಾ ಆರಂಭಿಕರು ತಾಳ್ಮೆಯಿಂದ ಭಾರತದ ಆರಂಭಿಕ ಬೌಲಿಂಗ್ ದಾಂಡಿಗರ ದಾಳಿ ಎದರುರಿಸಿದರು. ಓವರ್ಗೆ 10 ರನ್ ನಂತೆ 4.5 ಓವರ್ಗೆ 44 ರನ್ ಗಳಿಸಿದ್ದಾಗ ಅಕ್ಷರ್ ಪಟೇಲ್ ವಿಕೆಟ್ ಕೀಪರ್ ಕುಸಲ್ ಮೆಂಡಿಸ್ ಅವರ ವಿಕೆಟ್ ಪಡೆದರು. 15 ಎಸೆತದಲ್ಲಿ ಎರಡು ಸಿಕ್ಸರ್, ಎರಡು ಬೌಂಡರಿ ಸಹಿತ 23 ರನ್ ಗಳಿಸಿದ್ದ ಮೆಂಡಿಸ್ ಮಲಿಕ್ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಹಾದಿ ಹಿಡಿದರು.
ಕುಸಲ್ ಮೆಂಡಿಸ್ ಬೆನ್ನಲ್ಲೆ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕ ವಿಕೆಟ್ ಒಪ್ಪಿಸಿದರು. ಅರ್ಷದೀಪ್ ಸಿಂಗ್ ದಾಳಿಗೆ ಶಿವಂ ಮಾವಿಗೆ ಕ್ಯಾಚ್ ಇತ್ತರು. ನಿಸ್ಸಾಂಕ 17 ಎಸೆತ ಎದುರಿಸಿ 3 ಫೋರ್ನಿಂದ 15 ರನ್ಗಳಿಸಿ ಆಡುತ್ತಿದ್ದರು. ನಿಸ್ಸಾಂಕ ಬೆನ್ನಲ್ಲೇ ಮೂರನೇ ವಿಕೆಟ್ ಆಗಿ ಬಂದಿದ್ದ ಅವಿಷ್ಕಾ ಫೆರ್ನಾಂಡೊ(1) ಔಟ್ ಆಗಿ ಪೆವಿಲಿಯನ್ಗೆ ಮರಳಿದರು. ನಂತರ ಬಂದ ಧನಂಜಯ ಡಿ ಸಿಲ್ವಾ ಮತ್ತು ಚರಿತ್ ಅಸಲಂಕಾ ಭಾರತೀಯ ಬೌಲರ್ಗಳ ಎದುರು ಕೊಂಚ ಬಿರುಸಿನ ಆಟಕ್ಕೆ ಮುಂದಾದರು. ಚರಿತ್ ಅಸಲಂಕಾ ಒಂದು ಸಿಕ್ಸರ್ ಮತ್ತು 2 ಬೌಂಡರಿಯಿಂದ 14 ಎಸೆತದಲ್ಲಿ 19 ರನ್ಗಳಿಸಿ ಔಟ್ ಆದರು. ನಂತರ ನಾಯಕ ದಸುನ್ ಶನಕ ಸಿಲ್ವಾ ಅವರೊಂದಿಗೆ ಜೊತೆಯಾದರು.
ಸಿಲ್ವ ಚಹಾಲ್ ಎಸೆತಕ್ಕೆ ಗಿಲ್ಗೆ ಕ್ಯಾಚ್ ಇತ್ತು ವಿಕೆಟ್ ಬಿಟ್ಟುಕೊಟ್ಟರು. 22 ರನ್ ಗಳಿಸಿದ್ದ ಸಿಲ್ವಾ ನಾಯಕ ಶನಕ ಅವರ ಜೊತೆ ಗೆಲುವಿನ ವರೆಗೆ ನಿಲ್ಲುತ್ತಾರೆ ಎಂದು ಭಾವಿಸುವಂತೆ ಜೊತೆಯಾಟ ಕಂಡಿತ್ತು. ಸಿಲ್ವಾ ನಂತರ ಬಂದ ಹಸರಂಗ 9 ರನ್ಗೆ ಪೆವಿಲಿಯನ್ ಹಾದಿ ಹಿಡಿದರು. ಚಮಿಕಾ ಕರುಣಾರತ್ನೆ ನಾಯಕ ಹಾರ್ದಿಕ್ಗೆ ಎಲ್ಬಿಡ್ಲ್ಯೂಗೆ ಬಲಿಯಾದರು.
ಫಾರ್ಮ್ನಲ್ಲಿದ್ದು ಒಂದೆಡೆ ವಿಕೆಟ್ ನಿಲ್ಲಿಸಿ ನಾಯಕ ಶನಕ ಗೆಲುವಿನ ರನ್ಗಳಿಸಲು ಪ್ರಯತ್ನಿಸುತ್ತಿದ್ದರು. ಇತ್ತ ಕಡೆ ವಿಕೆಟ್ ಉರುಳುತ್ತಿದ್ದರಿಂದ ಒತ್ತಡಕ್ಕೆ ಒಳಗಾದ ನಾಯಕ ಶನಕ ಬಿರುಸಿನ ಆಟಕ್ಕೆ ಮುಂದಾದರು. ಈ ವೇಳೆ ಅರ್ಷದೀಪ್ ಸಿಂಗ್ ಅವರ ಬೌಲ್ನಲ್ಲಿ ಸಿಕ್ಸ್ ಗಳಿಸಲು ಹೋಗಿ ಅಕ್ಷರ್ಗೆ ಕ್ಯಾಚ್ ಇತ್ತು 23 ರನ್ಗೆ ಪೆವಿಲಿಯನ್ಗೆ ತೆರಳಿದರು. ದಿಲ್ಶನ್ ಮಧುಶಂಕ 1 ರನ್ಗೆ ಔಟ್ ಆದರು. ಕಸುನ್ ರಜಿತ 9 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಭಾರತ 91 ರನ್ಗಳ ಗೆಲುವು ಸಾಧಿಸಿತು.
ಭಾರತದ ಪರ ಅರ್ಷದೀಪ್ ಸಿಂಗ್ 2.4 ಓವರ್ನಲ್ಲಿ 7.5 ಎಕಾನಮಿಯಲ್ಲಿ 20 ರನ್ ಬಿಟ್ಟುಕೊಟ್ಟು ಮೂರು ವಿಕೆಟ್ ಪಡೆದರು. ನಾಯಕ ಹಾರ್ದಿಕ್ ಪಾಂಡ್ಯ, ಮಲಿಕ್ ಮತ್ತು ಚಹಾಲ್ ತಲಾ ಎರಡು ವಿಕೆಟ್ ಪಡೆದರು. ಅಕ್ಷರ್ ಪಟೇಲ್ 1 ವಿಕೆಟ್ ಕಬಳಿಸಿದರು. ಪಂದ್ಯ ಶ್ರೇಷ್ಠ ಪ್ರಶಸ್ತಿ ಶತಕ ಗಳಿಸಿದ ಸೂರ್ಯ ಕುಮಾರ್ ಯಾದವ್ಗೆ ನೀಡಲಾಯಿತು. ಅಕ್ಷರ್ ಪಟೇಲ್ಗೆ ಆಲ್ ರೌಂಡರ್ ಆಟಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಇದನ್ನೂ ಓದಿ: ಲಂಕಾ ವಿರುದ್ಧ ಸಿಡಿದ ಸೂರ್ಯಕುಮಾರ್ ಯಾದವ್ ಶತಕ: ಲಂಕಾಕ್ಕೆ 229 ರನ್ಗಳ ಗುರಿ