ರಾಜ್ಕೋಟ್: ಆತಿಥೇಯ ಭಾರತಕ್ಕೆ ಮತ್ತು ಪ್ರವಾಸಿ ಲಂಕಾಗೆ ನಿರ್ಣಾಯಕ ಪಂದ್ಯವಾಗಿರುವ ಮೂರನೇ ಟಿ20ಯಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಲಂಕಾ ತಂಡದಲ್ಲಿ ಒಂದು ಬದಲಾವಣೆ ಆಗಿದ್ದು, ಭಾನುಕಾ ರಾಜಪಕ್ಸೆ ಸ್ಥಾನಕ್ಕೆ ಅವಿಷ್ಕಾ ಫರ್ನಾಂಡೋ ಬಂದಿದ್ದಾರೆ.
ಸರಣಿಯ ಎರಡು ಪಂದ್ಯಗಳಲ್ಲಿ ಕೊನೆಯ ಓವರ್ ನಿರ್ಣಾಯಕ ಪಾತ್ರ ವಹಿಸಿತ್ತು. ಮೊದಲ ಪಂದ್ಯದಲ್ಲಿ ಅಕ್ಷರ್ ಪಟೇಲ್ ಮಾಡಿದ ಸ್ಪಿನ್ ಮೋಡಿ ಸಿಂಹಳೀಯರು ಬಲಿಯಾದರು. ಸಾಧಾರಣ ಗುರಿ ಬೆನ್ನು ಹತ್ತಿದ್ದ ತಂಡಕ್ಕೆ ಎರಡು ರನ್ನಿಂದ ಸೋಲನುಭವಿಸ ಬೇಕಾಯಿತು. ಎರಡನೇ ಪಂದ್ಯದಲ್ಲಿ ಕೊನೆಯ ಓವರ್ನಲ್ಲಿ ಭಾರತ ಗೆಲುವಿನ ಹೊಸ್ತಿಲಲ್ಲಿ ಇತ್ತಾದರೂ ಲಂಕನ್ನರ ಕರಾರುವಕ್ಕು ದಾಳಿಗೆ ಮಣಿದು 16 ರನ್ನಿಂದ ಸೋಲನುಭವಿಸ ಬೇಕಾಯಿತು. ಅಲ್ಲದೇ 6 ನೋಬಾಲ್ ಸೇರಿ ಎರಡನೇ ಪಂದ್ಯದಲ್ಲಿ ಬೌಲರ್ಗಳು ಹೆಚ್ಚುವರಿಯಾಗಿ ನೀಡಿದ್ದ 27 ರನ್ ನೀಡಿದ್ದು ಭಾರತಕ್ಕೆ ಮುಳುವಾಗಿತ್ತು.
-
#TeamIndia have won the toss and elect to bat first in the third and final T20I.
— BCCI (@BCCI) January 7, 2023 " class="align-text-top noRightClick twitterSection" data="
We go in with an unchanged Playing XI.
Live - https://t.co/bY4wgiSvMC #INDvSL @mastercardindia pic.twitter.com/SDfhNlastc
">#TeamIndia have won the toss and elect to bat first in the third and final T20I.
— BCCI (@BCCI) January 7, 2023
We go in with an unchanged Playing XI.
Live - https://t.co/bY4wgiSvMC #INDvSL @mastercardindia pic.twitter.com/SDfhNlastc#TeamIndia have won the toss and elect to bat first in the third and final T20I.
— BCCI (@BCCI) January 7, 2023
We go in with an unchanged Playing XI.
Live - https://t.co/bY4wgiSvMC #INDvSL @mastercardindia pic.twitter.com/SDfhNlastc
ಟಾಸ್ ಗೆದ್ದ ನಂತರ ಮಾತನಾಡಿದ ಹಾರ್ದಿಕ್ ಪಾಂಡ್ಯ, ನಾವು ಮೊದಲು ಬ್ಯಾಟ್ ಮಾಡಲು ಇಚ್ಚಿಸುತ್ತೇವೆ. ಮೊದಲು ಬ್ಯಾಟ್ ಮಾಡುವವರಿಗೆ ಪಿಚ್ ಉತ್ತಮವಾಗಿದೆ. ಕಳೆದ ಬಾರಿ ಈ ಪಿಚ್ನಲ್ಲಿ ಆಡಿದಾಗ ಉತ್ತಮ ರನ್ ಕದಿಯಲು ಸಾಧ್ಯವಾಗಿತ್ತು. ಎರಡನೇ ಇನ್ನಿಂಗ್ಸ್ ವೇಳೆ ಸ್ವಿಂಗ್ ಹೆಚ್ಚಾಗಿರುವುದರಿಂದ ಬೌಲರ್ಗಳಿಗೆ ಸಹಕಾರವಾಗಲಿದೆ. ಕೊನೆಯ ಪಂದ್ಯದಲ್ಲಿ ತಂಡ ಉತ್ತಮ ಆಟ ಪ್ರದರ್ಶಿಸುವಲ್ಲಿ ಎಡವಿತ್ತು. ಈ ಬಾರಿ ಬೃಹತ್ ಟಾರ್ಗೆಟ್ ನೀಡುವ ಗುರಿಯನ್ನು ಹೊಂದಿದ್ದೇವೆ. ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದರು.
ಭಾರತ ತಂಡದಲ್ಲಿ ಎರಡು ಪಂದ್ಯಗಳಲ್ಲಿ ವಿಫಲತೆ ಕಂಡಿರುವ ಗಿಲ್ ಅವರನ್ನು ತಂಡದಿಂದ ಕೈಬಿಟ್ಟು ದೇಶಿಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಗಾಯಕ್ವಾಡ್ ಅವರಿಗೆ ಅವಕಾಶ ದೊರೆಯ ಬಹುದು ಎಂದು ಹೇಳಲಾಗಿತ್ತು. ಅಲ್ಲದೇ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಬೌಲಿಂಗ್ ಪಡೆಯಲ್ಲೂ ಬದಲಾವಣೆ ನಿರೀಕ್ಷಿಸಲಾತ್ತು. ಆದರೆ, ಹಾರ್ದಿಕ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿದೇ ಅದೇ ಟೀಂ ಅಂಕಣಕ್ಕಿಳಿಸಿದ್ದಾರೆ.
ಟಾಸ್ ನಂತರ ಮಾತನಾಡಿದ ಲಂಕಾ ನಾಯಕ ದಾಸುನ್ ಶನಕ, ಟಾಸ್ ಗೆದ್ದಿದ್ದರೆ ನಾವೂ ಕೂಡ ಮೊದಲು ಬ್ಯಾಟ್ ಮಾಡುವ ಚಿಂತನೆಯಲ್ಲಿ ಇದ್ದೆವು. ಪಿಚ್ ರೀಪೋರ್ಟ್ ರೀತಿ ಮೊದಲು ಬ್ಯಾಟಿಂಗ್ ಉತ್ತಮವಾಗಿರುತ್ತದೆ. ಆದರೂ ನಾವು ಚೇಸಿಂಗ್ ಬಗ್ಗೆ ಉತ್ಸುಕರಾಗಿದ್ದೇವೆ. ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದ್ದು, ಅವಿಷ್ಕಾ ಫರ್ನಾಂಡೋ ಅವರು ಭಾನುಕಾ ರಾಜಪಕ್ಸೆ ಅವರ ಸ್ಥಾನದಲ್ಲಿ ಆಡಲಿದ್ದಾರೆ.
ಎರಡು ವಿಕೆಟ್ ನಷ್ಟದಲ್ಲಿ ಭಾರತ: 77 ರನ್ಗೆ 2 ವಿಕೆಟ್ ಕಳೆದು ಕೊಂಡಿರುವ ಭಾರತವನ್ನು ಗಿಲ್ ಮತ್ತು ಸೂರ್ಯ ಕುಮಾರ್ ಯಾದವ್ ಮುನ್ನಡೆಸುತ್ತಿದ್ದಾರೆ. ಆರಂಭಿಕರಾಗಿ ಮತ್ತೆ ಕಿಶನ್ ಫ್ಲಾಫ್ ಆಗಿದ್ದಾರೆ. ಕಿಶನ್ 1ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ಮರಳಿದ್ದಾರೆ. ಬಿರುಸಿನ ಆಟಕ್ಕೆ ಮುಂದಾದ ತ್ರಿಪಾಠಿ 16 ಎಸೆತದಲ್ಲಿ 35 ರನ್ ದಾಖಲಿಸಿ ವಿಕೆಟ್ ಒಪ್ಪಿಸಿದ್ದಾರೆ.
ಶ್ರೀಲಂಕಾ ಆಡುವ ಹನ್ನೊಂದು: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಅವಿಷ್ಕಾ ಫೆರ್ನಾಂಡೊ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ
ಭಾರತ ಆಡುವ ಹನ್ನೊಂದು: ಇಶಾನ್ ಕಿಶನ್(ವಿಕೆಟ್ ಕೀಪರ್), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ಅಕ್ಷರ್ ಪಟೇಲ್, ಶಿವಂ ಮಾವಿ, ಉಮ್ರಾನ್ ಮಲಿಕ್, ಅಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್
ಇದನ್ನೂ ಓದಿ: ಮಾಡು ಇಲ್ಲವೇ ಮಡಿ.. ಭಾರತ-ಶ್ರೀಲಂಕಾ ನಡುವಿನ ನಿರ್ಣಾಯಕ ಪಂದ್ಯಕ್ಕೆ ರಾಜ್ಕೋಟ್ ಸಜ್ಜು