ETV Bharat / sports

ಬಿಗ್​ ತ್ರೀ ಇಲ್ಲದೇ ಪಾಂಡ್ಯಗೆ ಜವಾಬ್ದಾರಿ.. ನವ ನಾಯಕನ ಕೈಚಳಕದಲ್ಲಿ ಟಿ20 ಪಡೆ

author img

By

Published : Jan 3, 2023, 4:19 PM IST

ಶ್ರೀಲಂಕಾ ವಿರುದ್ಧ ಟಿ20 ಸರಣಿ - ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ- ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಗೆ ನಾಯಕತ್ವ - ಲಂಕಾದ ದಸುನ್​ ಶನಕಾ ತಂಡಕ್ಕೆ ಸರಣಿ ಗೆಲ್ಲುವ ತವಕ

India vs Sri Lanka
ಬಿಗ್​ ತ್ರೀ ಇಲ್ಲದೇ ಪಾಂಡ್ಯಗೆ ಜವಾಬ್ದಾರಿ

ಮುಂಬೈ: 2023ರ ಮೊದಲ ಸರಣಿಯನ್ನು ಭಾರತ ಲಂಕಾದೊಂದಿಗೆ ವಾಂಖೆಡೆಯಲ್ಲಿ ಆಡುತ್ತಿದೆ. ಈ ಸರಣಿಯ ನಾಯಕತ್ವ 2022ರ ಐಪಿಎಲ್​ ವಿಜೇತ ನಾಯಕ ಹಾರ್ದಿಕ್​ ಪಾಂಡ್ಯಗೆ ನೀಡಲಾಗಿದೆ. ಟಿ 20 ನಂ ಬ್ಯಾಟರ್​ ಸೂರ್ಯ ಕುಮಾರ್​ ಯಾದವ್​ ಕೈಗೆ ಉಪನಾಯಕತ್ವ ವಹಿಸಲಾಗಿದೆ. ನ್ಯೂಜಿಲೆಂಡ್‌ ಎದುರಿನ ಸರಣಿಯಲ್ಲಿ ಹಾರ್ದಿಕ್​ ಪಾಂಡ್ಯ ಭಾರತ ತಂಡ ನಾಯತ್ವ ವಹಿಸಿದ್ದರೂ ಮಳೆಯಿಂದ ಸರಣಿ ಅಪೂರ್ಣವಾಗಿ ಮುಗಿಯಿತು. ಮೂರು ಪಂದ್ಯದಲ್ಲಿ ಒಂದು ಪಂದ್ಯವನ್ನು ಭಾರತ 60 ರನ್​ಗಳಿಂದ ಗೆದ್ದರೆ, ಮಿಕ್ಕೆರಡು ಪಂದ್ಯಗಳು ನೋ ರಿಸಲ್ಟ್​ ಪಂದ್ಯಗಳಾಗಿದ್ದವು.

ಬಿಗ್​ ತ್ರೀ ಇಲ್ಲದೇ ಪಾಂಡ್ಯಾಗೆ ಜವಾಬ್ದಾರಿ: ಭಾರತ ತಂಡ ಪ್ರಮುಖ ಆಟಗಾರರಾಗಿರುವ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಮತ್ತು ಕೆ ಎಲ್​ ರಾಹುಲ್​ ಅನುಪಸ್ಥಿತಿಯಲ್ಲಿ ಹಾರ್ದಿಕ್​ ತಂಡ ಮುನ್ನಡೆಸುತ್ತಿದ್ದಾರೆ. ಬ್ಲೂ ಬಾಯ್ಸ್​ ಹೆಚ್ಚಾಗಿ ಈ ಮೂರು ಆಟಗಾರರ ಮೇಲೆ ಅವಲಂಬಿತರಾಗಿರುವು ಸಹ ತಂಡದ ಮೈನಸ್​ ರೀತಿ ಕಾಣುತ್ತದೆ. ಹೀಗಾಗಿ ಹಾರ್ದಿಕ್​ ಹೊಸ ಪಡೆಯನ್ನೇ ಇಟ್ಟುಕೊಂಡು ಗೆಲುವು ಸಾಧಿಸುವ ಅಗತ್ಯಇದೆ. ಈ ನಾಯಕತ್ವ ಹಾರ್ದಿಕ್​ಗೆ ಪರೀಕ್ಷೆ ಕೂಡ ಹೌದು. ಸರಣಿಯ ಯಶಸ್ಸು ರೋಹಿತ್​ ಶರ್ಮಾಗೆ ಏಕದಿನ ಮತ್ತು ಟೆಸ್ಟ್​ನ ನಾಯಕತ್ವ ಕೊಟ್ಟು ಟಿ 20ಗೆ ಪರ್ಯಾಯ ನಾಯಕತ್ವ ಹುಡುಕುತ್ತಿದ್ದ ಬಿಸಿಸಿಐಗೆ ನೆರವಾಗಲಿದೆ.

ಆರಂಭಿಕರ ಹುಡುಕಾಟ: ನ್ಯೂಜಿಲೆಂಡ್‌ ಎದುರಿನ ಸರಣಿಯಲ್ಲಿ ಆರಂಭಿಕರಾಗಿ ಪಂತ್​ ಮತ್ತು ಇಶನ್​ ಕಿಶನ್​ ಕಾಣಿಸಿ ಕೊಂಡಿದ್ದರು. ಈ ಬಾರಿ ಪಂತ್​ ಕಾರು ಅಪಘಾತದಿಂದಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಪಂತ್​ರನ್ನು ಈ ಸರಣಿಯಿಂದ ಹೊರಗಿಡಲಾಗಿತ್ತು. ಹೀಗಾಗಿ ಹೊಸ ಆರಂಭಿಕ ಜೋಡಿಯನ್ನು ಮಾಡ ಬೇಕಿದೆ. ಕಿಶನ್ ಜೊತೆಗೆ ರುತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಕಣಕ್ಕಿಳಿಯುವ ನೀರೀಕ್ಷೆ ಇದೆ.

ದೀಪಕ್ ಹೂಡಾ ಅವರಿಗೂ ಅರಂಭಿಕ ಆಟದ ಅನುಭವ ಇರುವುದರಿಂದ ಅವರನ್ನೂ ಆಯ್ಕೆ ಮಾಡಿಕೊಳ್ಳುವ ಅವಕಾಶ ಹಾರ್ದಿಕ್​ ಮುಂದಿದೆ. ಹಾಗೇ ಶುಭಮನ್ ಗಿಲ್ ಕೂಡು ಆರಂಭಿಕ ಆಟಗಾರರ ಸ್ಥಾನದಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ.

ಕಿಶನ್​, ಸೂರ್ಯ ಮತ್ತು ಗಾಯಕ್ವಾಡ್ ಮೇಲೆ ನಿರೀಕ್ಷೆ: ಟಿ20 ಟಾಪ್​ ರ್‍ಯಾಂಕ್​ ಹೊಂದಿರುವ ಮತ್ತು ಹೋದ ವರ್ಷ ಭರ್ಜರಿ ಬ್ಯಾಟಿಂಗ್​ ಮಾಡಿದ್ದ ಸೂರ್ಯ ಕುಮಾರ್​ ಯಾದವ್​ ಮೇಲೆ ಉಪನಾಯಕನ ಜವಾಬ್ದಾರಿ ಇದ್ದು, ನಿರೀಕ್ಷೆಯೂ ಹೆಚ್ಚಿದೆ. ಇನ್ನು, ಇತ್ತೀಚಿಗೆ ವಿಜಯ ಹಜಾರೆ ಏಕದಿನ ಟೂರ್ನಿಯಲ್ಲಿ ಸರಣಿ ಶತಕ ದಾಖಲಿಸ ಗಾಯಕ್ವಾಡ್ ಹೆಚ್ಚಿನ ಭರವಸೆ ಇಡಲಾಗಿದೆ. ಹಾಗೇ ಬಾಂಗ್ಲಾ ಪ್ರವಾಸದಲ್ಲಿ ದ್ವಿಶತಕ ಸಿಡಿಸಿದ ಕಿಶನ್​ ಮೇಲೆಯೂ ನಿರೀಕ್ಷೆಗಳಿವೆ.

ಅಲ್ಲದೇ ನಾಯಕ ಹಾರ್ದಿಕ್​ ಬ್ಯಾಟಿಂಗ್​ ಮತ್ತು ಬೌಲಿಂಗ್​ನ ಆಲ್​ರೌಡಂರ್​ ಆಟಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಕ್ರಿಡಾಭಿಮಾನಿಗಳು ಹೇಳಲಾಗುತ್ತದ್ದ ವೇಳೆ ಸಿಕ್ಕಿರುವ ಅವಕಾಶ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದನೋಡಬೇಕಿದೆ.

ಬೌಲಿಂಗ್​ ಹೊಣೆ ಅರ್ಷದೀಪ್​ಗೆ: ವಿಶ್ವಕಪ್​ನಲ್ಲಿ ಪದಾರ್ಪಣೆ ಮಾಡಿದ ಅರ್ಷದೀಪ್​ ಸಿಂಗ್​ಗೆ ಬೌಲಿಂಗ್​ ವಿಭಾಗದ ಜವಾಬ್ದಾರಿ ನೀಡಲಾಗಿದೆ. ಉಮ್ರಾನ್​ ಮಲಿಕ್​, ಶಿವಂ ಮಾವಿ, ಮುಖೇಶ್​ ಕುಮಾರ್​, ಹರ್ಷಲ್​ ಪಟೇಲ್​ ಇದ್ದು, ಸ್ಪಿನ್​ ವಿಭಾಗವನ್ನು ಅನುಭವಿ ಯಜುವೇಂದ್ರ ಚಹಾಲ್​ ವಹಿಸಿಕೊಂಡಿದ್ದಾರೆ.

ಅತೀ ಹೆಚ್ಚು ಟಿ20 ಆಡಿದ ತಂಡ: 2022ರಲ್ಲಿ ಭಾರತ ತಂಡ ಬರೋಬ್ಬರಿ 40 ಟಿ20 ಪಂದ್ಯಗಳನ್ನು ಭಾರತ ಆಡಿದೆ. ಇದರಲ್ಲಿ ಪ್ರಯೋಗಾತ್ಮಕವಾಗಿ ಬಹುತೇಕ 31 ಆಟಗಾರರನ್ನು ಬಳಸಿದೆ. 9 ದ್ವಿಪಕ್ಷೀಯ ಸರಣಿಗಳನ್ನು ಆಡಿದ್ದು ಅದರಲ್ಲಿ 8ನ್ನು ಗೆದ್ದುಕೊಂಡಿದೆ. ಆದರೆ ಹೋದ ವರ್ಷ ನಡೆದ ಎರಡು ದೊಡ್ಡ ಟೂರ್ನಿಗಳಾದ ಏಷ್ಯಾ ಕಪ್​ ಮತ್ತು ವಿಶ್ವಕಪ್​ನಲ್ಲಿ ಫೈನಲ್​ ಪ್ರವೇಶಿಸುವಲ್ಲಿ ವಿಫಲವಾಯಿತು.

ಸವಾಲ್​ಗೆ ಸಿದ್ಧವಾಗಿರುವ ಲಂಕಾ ಪಡೆ: ಟಿ20 ವಿಶ್ವಕಪ್​ ನಂತರ ಸಿಂಹಳೀಯರು ಹೆಚ್ಚು ಚುಟುಕು ಪಂದ್ಯಗಳಲ್ಲೇ ಭಾಗವಸಿ ಉತ್ತಮ ಲಯದಲ್ಲಿದ್ದಾರೆ. ಡಿಸೆಂಬರ್​ನಲ್ಲಿ ಲಂಕಾದಲ್ಲಿ ಆಯೋಜನೆ ಆಗಿದ್ದ ಲಂಕಾ ಪ್ರೀಮಿಯರ್​ ಲೀಗ್​ನಲ್ಲಿ ಬಹುತೇಕ ಆಟಗಾರು ಭಾಗವಹಿಸಿದ್ದಾರೆ. ದಸುನ್ ಶನಕ ನಾಯಕತ್ವದಲ್ಲಿ ಲಂಕಾ ತಂಡ ಬಹುತೇಕ ಸಜ್ಜಾಗಿದೆ. ಲಂಕಾಕ್ಕೆ ವನಿಂದು ಹಸರಂಗ, ಡಿ ಸಿಲ್ವಾ, ಪಾತುಮ್ ನಿಸ್ಸಂಕ, ಕುಶಾಲ್ ಮೆಂಡಿಸ್ ಮತ್ತು ಮಹೇಶ್ ತೀಕ್ಷಣ ಸ್ಪಿನ್​ ಅಸ್ತ್ರ ಹೂಡಲು ಮುಂದಾಗಿದ್ದಾರೆ.

ವಾಂಖೆಡೆ ಪಿಚ್​ ರಿಪೋರ್ಟ್​: ವಾಂಖೆಡೆ ಪಿಚ್‌ನಲ್ಲಿ ಇದುವರೆಗೆ 7 ಟಿ20 ಪಂದ್ಯಗಳು ನಡೆದಿದ್ದು, ಈ ಪೈಕಿ ನಾಲ್ಕನ್ನು ಭಾರತ ಗೆದ್ದಿದೆ. 2 ಪಂದ್ಯ ಸೋತು ಒಂದು ಡ್ರಾ ಮಾಡಿಕೊಂಡಿದೆ. ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 2 ಪಂದ್ಯಗಳನ್ನು ಗೆದ್ದಿದ್ದರೆ, ನಂತರ ಬ್ಯಾಟಿಂಗ್ ಮಾಡಿ ರನ್ ಬೆನ್ನಟ್ಟಿದ ತಂಡ 5 ಬಾರಿ ಗೆಲುವು ಸಾಧಿಸಿದೆ. ಪಿಚ್​ ಸ್ಪಿನ್ ಮತ್ತು ವೇಗದ ಬೌಲರ್‌ಗಳಿಗೆ ನೆರವಾಗಲಿದೆ. ಬ್ಯಾಟ್ಸ್‌ಮನ್‌ಗಳು ಸಹ ಇಲ್ಲಿ ರನ್ ಗಳಿಸಿದ್ದಾರೆ. ಟಾಸ್​ ಕೂಡ ಮಹತ್ವ ಪಡೆಯಲಿದೆ.

ಸಂಭಾವ್ಯ ಭಾರತ ತಂಡ: ಇಶಾನ್ ಕಿಶನ್ (ವಿಕೇಟ್​ ಕೀಪರ್​), ರುತುರಾಜ್ ಗಾಯಕ್ವಾಡ್/ಶುಭಮನ್ ಗಿಲ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ (ನಾಯಕ), ವಾಷಿಂಗ್ಟನ್ ಸುಂದರ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್, ಅರ್ಷದೀಪ್​ ಸಿಂಗ್

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೇಟ್​ ಕೀಪರ್​), ಭಾನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಲಹಿರು ಕುಮಾರ, ಪ್ರಮೋದ್ ಮದುಶನ್/ದಿಲ್ಶನ್ ಮಧುಶಂಕ

ಪಂದ್ಯದ ಸಮಯ: ಮೊದಲ ಟಿ20 ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ 1 ವಿವಿಧ ಭಾಷೆಗಳು, ಡಿಸ್ನಿ ಪ್ಲೆಸ್​ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ: ನಾಳೆ ಶ್ರೀಲಂಕಾ ಭಾರತ ಟಿ20 ಪಂದ್ಯ: ಸರಣಿಯಲ್ಲಿ ಹಾರ್ದಿಕ್​ ಪಾಂಡ್ಯ ನಾಯಕತ್ವ ಪರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.