ವಿಶಾಖಪಟ್ಟಣ(ಆಂಧ್ರಪ್ರದೇಶ): ಬೌಲರ್ಗಳಿಂದಲೇ ಕಳೆದೆರಡು ಪಂದ್ಯಗಳನ್ನು ಸೋತಿದ್ದ ಭಾರತ ತಂಡ ಸರಣಿ ಜೀವಂತವಾಗಿಡಲು ಗೆಲ್ಲಲೇಬೇಕಿದ್ದ ಮೂರನೇ ಪಂದ್ಯದಲ್ಲಿ ಅದೇ ಬೌಲರ್ಗಳ ಧೀರೋತ್ತ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ವಿರುದ್ಧ 48 ರನ್‌ಗಳ ಅಧಿಕಾರಯುತ ಗೆಲುವು ಸಾಧಿಸಿತು.
2 ಪಂದ್ಯಗಳಲ್ಲಿ ಸೋತು ಸರಣಿ ಸೋಲಿನ ಭೀತಿಯಲ್ಲಿದ್ದ ಭಾರತ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸದೆಬಡಿಯುವ ಮೂಲಕ ಸರಣಿ ಗೆಲ್ಲುವ ಆಸೆಯನ್ನು ಜೀವಂತವಾಗಿಟ್ಟಿದೆ. ಮೊದಲು ಬ್ಯಾಟ್ ಮಾಡಿದ್ದ ಭಾರತ 20 ಓವರ್ಗಳಲ್ಲಿ 179 ರನ್ ಗಳಿಸಿತ್ತು. 180 ರನ್‌ಗಳ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 19.1 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 131 ರನ್ ಗಳಿಸಿತು. ಈ ಪಂದ್ಯದಲ್ಲಿ ಭಾರತ ಜಯಿಸಿದ್ದರೂ ಸರಣಿ 2-1 ರಲ್ಲಿ ಹಿನ್ನಡೆಯಲ್ಲಿದೆ.
-
#TeamIndia win the 3rd T20I by 48 runs and keep the series alive.
— BCCI (@BCCI) June 14, 2022 " class="align-text-top noRightClick twitterSection" data="
Scorecard - https://t.co/mcqjkCj3Jg #INDvSA @Paytm pic.twitter.com/ZSDSbGgaEE
">#TeamIndia win the 3rd T20I by 48 runs and keep the series alive.
— BCCI (@BCCI) June 14, 2022
Scorecard - https://t.co/mcqjkCj3Jg #INDvSA @Paytm pic.twitter.com/ZSDSbGgaEE#TeamIndia win the 3rd T20I by 48 runs and keep the series alive.
— BCCI (@BCCI) June 14, 2022
Scorecard - https://t.co/mcqjkCj3Jg #INDvSA @Paytm pic.twitter.com/ZSDSbGgaEE
ಬೌಲರ್ಗಳ ಕರಾಮತ್ತು: ಕಳೆದ ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ ಹೊರತುಪಡಿಸಿ ಉಳಿದ ಬೌಲರ್ಗಳು ವಿಕೆಟ್ ಪಡೆಯಲು ವಿಫಲರಾಗಿದ್ದರು. ಇದರಿಂದ ಬೌಲಿಂಗ್ ಪಡೆ ಭಾರಿ ಟೀಕೆಗೆ ಒಳಗಾಗಿತ್ತು. ಈ ಪಂದ್ಯದಲ್ಲಿ ಎಲ್ಲ ಟೀಕೆಗಳನ್ನು ಮೀರಿ ಮೈಕೊಡವಿ ಎದ್ದಂತೆ ಪ್ರದರ್ಶನ ನೀಡಿದ ಹರ್ಷಲ್ ಪಟೇಲ್ 4 ವಿಕೆಟ್ ಪಡೆದರೆ, ಯಜುವೇಂದ್ರ ಚಹಲ್ 3 ವಿಕೆಟ್ ಉರುಳಿಸಿ ಹರಿಣಗಳ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಸರಣಿಯಲ್ಲಿ ಕರಾರುವಾಕ್ ದಾಳಿ ನಡೆಸುತ್ತಿರುವ ಭುವನೇಶ್ವರ್ 4 ಓವರ್ಗಳಲ್ಲಿ ಕೇವಲ 24 ರನ್ ನೀಡಿ 1 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಕೂಡ 1 ವಿಕೆಟ್ ಪಡೆದು ತಂಡಕ್ಕೆ ನೆರವಾದರು.
ಹಿಗ್ಗಿ ಕುಗ್ಗಿದ ಹರಿಣಗಳು: ಸರಣಿಯಲ್ಲಿ ಭಾರತೀಯ ಬೌಲರ್ಗಳ ಮೇಲೆ ಸವಾರಿ ನಡೆಸಿದ್ದ ಆಫ್ರಿಕಾ ಆಟಗಾರರು ರಟ್ಟೆ ಅರಳಿಸಲು ತಿಣುಕಾಡಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ತಂಡವನ್ನು ಗೆಲ್ಲಿಸಿದ್ದ ಹೆನ್ರಿಚ್ ಕ್ಲಾಸಿನ್ ಈ ಮ್ಯಾಚ್ನಲ್ಲಿ ಗಳಿಸಿದ 29 ರನ್ಗಳೇ ತಂಡದ ಅತ್ಯಧಿಕ ಮೊತ್ತವಾಗಿದೆ. ಉಳಿದಂತೆ ರೀಜ್ ಹೆಂಡ್ರಿಕ್ಸ್ 23, ಡ್ವೇನ್ ಪ್ರಿಟೋರಿಯಸ್ 20, ವೇಯ್ನ್ ಪಾರ್ನೆಲ್ 22 ರನ್ ಗಳಿಸಿದ್ದು ಬಿಟ್ಟರೆ, ಯಾವೊಬ್ಬ ಬ್ಯಾಟರ್ ಕೂಡ ಭಾರತ ಬೌಲರ್ಗಳನ್ನು ಎದುರಿಸಲಿಲ್ಲ.
ಭಾರತದ ಇನಿಂಗ್ಸ್: ಇದಕ್ಕೂ ಮೊದಲು ಬ್ಯಾಟಿಂಗ್ನಲ್ಲಿ ಮಿಂಚಿದ ಋತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಮಿಂಚಿನ ಆರಂಭ ನೀಡಿದ್ದಲ್ಲದೇ, ಇಬ್ಬರೂ ಅರ್ಧಶತಕ ಬಾರಿಸಿದ್ದರು. ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಗಾಯಕ್ವಾಡ್ 35 ಎಸೆತಗಳಲ್ಲಿ 2 ಸಿಕ್ಸರ್ 7 ಬೌಂಡರಿ ಸಮೇತ 57 ರನ್ ಚಚ್ಚಿದರು. ಗಾಯಕ್ವಾಡ್ಗೆ ಉತ್ತಮ ಸಾಥ್ ನೀಡಿದ ಇಶಾನ್ ಕಿಶನ್ ಕೂಡ 35 ಎಸೆತಗಳಲ್ಲಿ 54 ರನ್ ಬಾರಿಸಿದರು. 5 ಬೌಂಡರಿ 2 ಸಿಕ್ಸರ್ ಇನಿಂಗ್ಸ್ನಲ್ಲಿತ್ತು. ಇವರಿಬ್ಬರೂ ಮೊದಲ ವಿಕೆಟ್ಗೆ 97 ರನ್ ಕಲೆ ಹಾಕಿದರು.
ಗಾಯಕ್ವಾಡ್ ಔಟಾದ ಬಳಿಕ ಬಂದ ಶ್ರೇಯಸ್ ಅಯ್ಯರ್ (14) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ನಾಯಕ ರಿಷಬ್ ಪಂತ್(6) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಬಳಿಕ ದಿನೇಶ್ ಕಾರ್ತಿಕ್ (6) ಪಂತ್ ಹಾದಿ ತುಳಿದರು.
ಐಪಿಎಲ್ನಲ್ಲಿ ಮಿಂಚಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಹರಿಣಗಳ ಪಡೆಯ ಬೌಲರ್ಗಳನ್ನು ಕೆಲ ಹೊತ್ತು ಕಾಡಿದರು. 21 ಎಸೆತಗಳಲ್ಲಿ 31 ರನ್ ಬಾರಿಸಿದರು. ಇವರ ಇನಿಂಗ್ಸ್ನಲ್ಲಿ 4 ಆಕರ್ಷಕ ಬೌಂಡರಿಗಳಿದ್ದವು. ದಕ್ಷಿಣ ಆಫ್ರಿಕಾ ಪರ ಡ್ವೇನ್ ಪ್ರಿಟೋರಿಯಸ್ 2 ವಿಕೆಟ್ ಕಿತ್ತರೆ, ಕಗಿಸೋ ರಬಾಡಾ, ತಬ್ರೇಜ್ ಶಂಶಿ, ಕೇಶವ್ ಮಹಾರಾಜ್ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ: ಐಪಿಎಲ್ ಪ್ರಸಾರ: ಮತ್ತೆ ಸ್ಟಾರ್ ತೆಕ್ಕೆಗೆ ಟಿವಿ ಹಕ್ಕು, ವಯಾಕಾಮ್ಗೆ ಡಿಜಿಟಲ್ ರೈಟ್ಸ್, ಬಿಸಿಸಿಐಗೆ ಆದಾಯ ಎಷ್ಟು ಗೊತ್ತಾ?