ವಿಶಾಖಪಟ್ಟಣ(ಆಂಧ್ರಪ್ರದೇಶ): ಋತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ರ ಅರ್ಧಶತಕಗಳ ಬಲದಿಂದ ವಿಶಾಖಪಟ್ಟಣದ ಡಾ.ವೈ.ಎಸ್.ರಾಜಶೇಖರ್ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ-20 ಪಂದ್ಯದಲ್ಲಿ ಭಾರತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ಗಳ ಸವಾಲಿನ ಮೊತ್ತ ಕಲೆಹಾಕಿದೆ.
ಮೂರನೇ ಪಂದ್ಯದಲ್ಲೂ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬ ಬವುಮಾ ಬೌಲಿಂಗ್ ಆಯ್ಕೆ ಮಾಡಿಕೊಂಡು, ಭಾರತಕ್ಕೆ ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದರು. ಇನಿಂಗ್ಸ್ ಆರಂಭಿಸಿದ ಯುವ ಆಟಗಾರರಾದ ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಮಿಂಚಿನ ಆರಂಭ ನೀಡಿದರು.
-
Innings Break! #TeamIndia post 179/5 on the board on the back of fifties from @Ruutu1331 & @ishankishan51 and a cameo from @hardikpandya7! 👏 👏
— BCCI (@BCCI) June 14, 2022 " class="align-text-top noRightClick twitterSection" data="
Over to our bowlers now. 👍 👍
Scorecard ▶️ https://t.co/mcqjkCj3Jg#INDvSA | @Paytm pic.twitter.com/nMQqlO7nBX
">Innings Break! #TeamIndia post 179/5 on the board on the back of fifties from @Ruutu1331 & @ishankishan51 and a cameo from @hardikpandya7! 👏 👏
— BCCI (@BCCI) June 14, 2022
Over to our bowlers now. 👍 👍
Scorecard ▶️ https://t.co/mcqjkCj3Jg#INDvSA | @Paytm pic.twitter.com/nMQqlO7nBXInnings Break! #TeamIndia post 179/5 on the board on the back of fifties from @Ruutu1331 & @ishankishan51 and a cameo from @hardikpandya7! 👏 👏
— BCCI (@BCCI) June 14, 2022
Over to our bowlers now. 👍 👍
Scorecard ▶️ https://t.co/mcqjkCj3Jg#INDvSA | @Paytm pic.twitter.com/nMQqlO7nBX
ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಗಾಯಕ್ವಾಡ್ 35 ಎಸೆತಗಳಲ್ಲಿ 2 ಸಿಕ್ಸರ್ 7 ಬೌಂಡರಿ ಸಮೇತ 57 ರನ್ ಚಚ್ಚಿದರು. ಗಾಯಕ್ವಾಡ್ಗೆ ಉತ್ತಮ ಸಾಥ್ ನೀಡಿದ ಇಶಾನ್ ಕಿಶನ್ ಕೂಡ 35 ಎಸೆತಗಳಲ್ಲಿ 54 ರನ್ ಬಾರಿಸಿದರು. 5 ಬೌಂಡರಿ 2 ಸಿಕ್ಸರ್ ಇನಿಂಗ್ಸ್ನಲ್ಲಿತ್ತು. ಇವರಿಬ್ಬರೂ ಮೊದಲ ವಿಕೆಟ್ಗೆ 97 ರನ್ ಕಲೆ ಹಾಕಿದರು.
ಗಾಯಕ್ವಾಡ್ ಔಟಾದ ಬಳಿಕ ಬಂದ ಶ್ರೇಯಸ್ ಅಯ್ಯರ್ (14) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ನಾಯಕ ರಿಷಬ್ ಪಂತ್(6) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಬಳಿಕ ದಿನೇಶ್ ಕಾರ್ತಿಕ್ (6) ಪಂತ್ ಹಾದಿ ತುಳಿದರು.
ಐಪಿಎಲ್ನಲ್ಲಿ ಮಿಂಚಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಹರಿಣಗಳ ಪಡೆಯ ಬೌಲರ್ಗಳನ್ನು ಕೆಲ ಹೊತ್ತು ಕಾಡಿದರು. 21 ಎಸೆತಗಳಲ್ಲಿ 31 ರನ್ ಬಾರಿಸಿದರು. ಇವರ ಇನಿಂಗ್ಸ್ನಲ್ಲಿ 4 ಆಕರ್ಷಕ ಬೌಂಡರಿಗಳಿದ್ದವು. ದಕ್ಷಿಣ ಆಫ್ರಿಕಾ ಪರ ಡ್ವೇನ್ ಪ್ರಿಟೋರಿಯಸ್ 2 ವಿಕೆಟ್ ಕಿತ್ತರೆ, ಕಗಿಸೋ ರಬಾಡಾ, ತಬ್ರೇಜ್ ಶಂಶಿ, ಕೇಶವ್ ಮಹಾರಾಜ್ ತಲಾ 1 ವಿಕೆಟ್ ಪಡೆದರು.