ETV Bharat / sports

ಟಾಸ್​ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್​ ಆಯ್ಕೆ: ಶಾರ್ದೂಲ್ ಬದಲಿಗೆ ಮುಖೇಶ್ - Virat Kohli

ದಕ್ಷಿಣ ಆಫ್ರಿಕಾದ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯ ಕೇಪ್​​ ಟೌನ್​ನ ನ್ಯೂಲ್ಯಾಂಡ್​ನಲ್ಲಿ ನಡೆಯುತ್ತಿದೆ.

India vs South Africa 2nd Test
India vs South Africa 2nd Test
author img

By ETV Bharat Karnataka Team

Published : Jan 3, 2024, 1:16 PM IST

ಕೇಪ್​ ಟೌನ್​ (ದಕ್ಷಿಣ ಆಫ್ರಿಕಾ): ಹರಿಣಗಳ ವಿರುದ್ಧದ ಮೊದಲ ಟೆಸ್ಟ್​ ಪಂದ್ಯವನ್ನು ಕಳೆದುಕೊಂಡಿರುವ ಭಾರತ ಸರಣಿ ಗೆಲುವಿನ ಕಸನನ್ನು ಕೈಚೆಲ್ಲಿ, ಸರಣಿ ಸಮಬಲಕ್ಕಾಗಿ ಇಲ್ಲಿನ ನ್ಯೂಲ್ಯಾಂಡ್​ನಲ್ಲಿ ಹೋರಾಟ ನಡೆಸಲಿದೆ. ಟಾಸ್​ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ.

ಉಭಯ ತಂಡಗಳಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ದಕ್ಷಿಣ ಆಫ್ರಿಕಾದ ನಾಯಕ ತೆಂಬಾ ಬವುಮಾ ಮತ್ತು ಜೆರಾಲ್ಡ್ ಕೊಯೆಟ್ಜಿ ಬದಲಾಗಿ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಲುಂಗಿ ಎನ್​ಗಿಡಿ ಆಯ್ಕೆ ಆಗಿದ್ದಾರೆ. ಅಲ್ಲದೇ ಕೇಶವ್​ ಮಹಾರಾಜ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತದಲ್ಲಿ ಅಶ್ವಿನ್​ ಬದಲಾಗಿ ಜಡೇಜಾ ಹಾಗೂ ಶಾರ್ದೂಲ್​ ಠಾಕೂರ್​ ಬದಲಾಗಿ ಮುಖೇಶ್​ ಕುಮಾರ್​ ಆಡುತ್ತಿದ್ದಾರೆ. ನಾಲ್ವರು ಪ್ರಮುಖ ವೇಗಿಗಳಿಗೆ ರೋಹಿತ್​ ಸ್ಥಾನ ನೀಡಿದ್ದಾರೆ.

ಎಲ್ಗರ್​ಗೆ ವಿದಾಯದ ಪಂದ್ಯ: ದಕ್ಷಿಣ ಆಫ್ರಿಕಾದ ಡೀನ್​ ಎಲ್ಗರ್​ ಭಾರತದ ವಿರುದ್ಧದ ಸರಣಿಯ ನಂತರ ರೆಡ್​ ಬಾಲ್​ ಕ್ರಿಕೆಟ್​ಗೆ ವಿದಾಯ ಹೇಳುವುದಾಗಿ ತಿಳಿಸಿದ್ದರು. ಹೀಗಾಗಿ ಎಲ್ಗರ್​ಗೆ ಇದು ಕೊನೆಯ ಸರಣಿ ಮತ್ತು ಪಂದ್ಯವಾಗಿದೆ. ತೆಂಬಾ ಬವುಮಾ ಗಾಯಗೊಂಡಿರುವುದರಿಂದ ಈ ಪಂದ್ಯದ ನಾಯಕತ್ವವೂ ಎಲ್ಗರ್​ಗೆ ಒಲಿದಿದೆ. ಅಂತಿಮ ಟೆಸ್ಟ್​ನ್ನು ನಾಯಕನಾಗಿ ಗೆಲ್ಲುವ ಗುರಿಯನ್ನು ಡೀನ್​ ಎಲ್ಗರ್​ ಹೊಂದಿದ್ದಾರೆ.

ನ್ಯೂಲ್ಯಾಂಡ್​ನಲ್ಲಿ ಗೆಲ್ಲುವ ಗುರಿ: ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲುವು ಸಾಧಿಸಿಲ್ಲ. ಅಲ್ಲದೇ ವಿಶ್ವದ ಅತ್ಯಂತ ರಮಣೀಯ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲೂ ಭಾರತದ ತಂಡ ಇದುವರೆಗೆ ಆಡಿರುವ ಟೆಸ್ಟ್​ ಗೆದ್ದಿಲ್ಲ. ಇಲ್ಲಿ ಈ ಹಿಂದೆ ಹರಿಣಗಳ ಜೊತೆಯಲ್ಲಿ ಭಾರತ ಆರು ಟೆಸ್ಟ್​ಗಳನ್ನು ಆಡಿದ್ದು, ಎಲ್ಲದರಲ್ಲೂ ಸೋಲುಂಡಿದೆ. ಈ ಪಂದ್ಯವನ್ನು ಗೆದ್ದು ಸರಣಿ ಸಮಬಲದ ಜೊತೆಗೆ ಮೈದಾನದಲ್ಲಿನ ಕಳಪೆ ಇತಿಹಾಸವನ್ನು ತಿದ್ದಲು ರೋಹಿತ್​ ಪಡೆ ಲೆಕ್ಕಾಚಾರ ಹಾಕುತ್ತಿದೆ.

ಸೆಂಚುರಿಯನ್​ನಲ್ಲಿ ಸೋಲು: ಸೂಪರ್‌ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಭಾರತ ಕೆಟ್ಟ ಬ್ಯಾಟಿಂಗ್ ಪ್ರದರ್ಶನದಿಂದ ಸೋಲನುಭವಿಸಿತು. ಹರಿಣಗಳ ಬೌಲಿಂಗ್​ ವಿರುದ್ಧ ಕೆ.ಎಲ್​ ರಾಹುಲ್​ (101) ಮತ್ತು ವಿರಾಟ್​ ಕೊಹ್ಲಿ(76) ಮಾತ್ರ ದೊಡ್ಡ ಇನ್ನಿಂಗ್ಸ್​ ಕಟ್ಟಿದರು. ಉಳಿದಂತೆ ಎಲ್ಲಾ ಬ್ಯಾಟರ್​ಗಳು ಬೌನ್ಸಿ ಪಿಚ್​ನಲ್ಲಿ ವೈಫಲ್ಯತೆ ಎದುರಿಸಿದರು.

ತಂಡಗಳು ಇಂತಿವೆ: ಭಾರತ: ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೆಟ್​ ಕೀಪರ್​), ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್​ ಕೃಷ್ಣ, ಮುಖೇಶ್ ಕುಮಾರ್

ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ಐಡೆನ್ ಮಾರ್ಕ್ರಾಮ್, ಟೋನಿ ಡಿ ಜೊರ್ಜಿ, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಬೆಡಿಂಗ್ಹ್ಯಾಮ್, ಕೈಲ್ ವೆರ್ರೆನ್ (ವಿಕೆಟ್​ ಕೀಪರ್​), ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ನಾಂದ್ರೆ ಬರ್ಗರ್, ಲುಂಗಿ ಎನ್​ಗಿಡಿ

ಇದನ್ನೂ ಓದಿ: ಅಘ್ಘನ್​ ಸರಣಿಗೆ ಆಯ್ಕೆ ಆಗ್ತಾರಾ ವಿರಾಟ್, ರೋಹಿತ್​?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.