ಜೋಹಾನ್ಸ್ಬರ್ಗ್ : ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆತಿಥೇಯ ತಂಡಕ್ಕೆ ತಿರುಗೇಟು ನೀಡಿದೆ. ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ಹರಿಣಗಳ ತಂಡ ಭೋಜನ ವಿರಾಮದ ವೇಳೆಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು 102 ರನ್ಗಳಿಕೆ ಮಾಡಿದ್ದು, ಇನ್ನು 100ರನ್ಗಳ ಹಿನ್ನೆಡೆಯಲ್ಲಿದೆ.
-
Lunch on day two in Johannesburg 🍲
— ICC (@ICC) January 4, 2022 " class="align-text-top noRightClick twitterSection" data="
Shardul Thakur's triple strike puts India in charge.
Watch #SAvIND live on https://t.co/CPDKNx77KV (in select regions) 📺#WTC23 | https://t.co/WrcdXe7WLU pic.twitter.com/FDMB1kTD3p
">Lunch on day two in Johannesburg 🍲
— ICC (@ICC) January 4, 2022
Shardul Thakur's triple strike puts India in charge.
Watch #SAvIND live on https://t.co/CPDKNx77KV (in select regions) 📺#WTC23 | https://t.co/WrcdXe7WLU pic.twitter.com/FDMB1kTD3pLunch on day two in Johannesburg 🍲
— ICC (@ICC) January 4, 2022
Shardul Thakur's triple strike puts India in charge.
Watch #SAvIND live on https://t.co/CPDKNx77KV (in select regions) 📺#WTC23 | https://t.co/WrcdXe7WLU pic.twitter.com/FDMB1kTD3p
ನಿನ್ನೆ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಕ್ಯಾಪ್ಟನ್ ರಾಹುಲ್ ಅವರ 50 ರನ್ ಹಾಗೂ ಅಶ್ವಿನ್ 46 ರನ್ಗಳ ನೆರವಿನಿಂದ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 202ರನ್ಗಳಿಗೆ ಆಲೌಟ್ ಆಯಿತು.
ಇದಕ್ಕೆ ಪ್ರತಿಯಾಗಿ ನಿನ್ನೆ 1 ವಿಕೆಟ್ ನಷ್ಟಕ್ಕೆ 35ರನ್ಗಳಿಕೆ ಮಾಡಿದ್ದ ಆಫ್ರಿಕಾ ಇವತ್ತಿಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿತು. ಇಂದು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಆರಂಭದಲ್ಲಿ ಉತ್ತಮ ರನ್ಗಳಿಕೆ ಮಾಡಿತು.
ಇದನ್ನೂ ಓದಿರಿ: ಕೋವಿಡ್ 20 ಸಾವಿರದ ಗಡಿ ದಾಟಿದರೆ ಮುಂಬೈನಲ್ಲಿ ಲಾಕ್ಡೌನ್ ಜಾರಿ: ಮೇಯರ್
ಶಾಕ್ ನೀಡಿದ ಶಾರ್ದೂಲ್
ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ದಾಳಿಯನ್ನ ಸುಲಭವಾಗಿ ಎದುರಿಸಿದ ದಕ್ಷಿಣ ಆಫ್ರಿಕಾದ ಕ್ಯಾಪ್ಟನ್ ಎಲ್ಗರ್ ಹಾಗೂ ಪೀಟರ್ಸನ್ ಉತ್ತಮ ರನ್ ಕಲೆ ಹಾಕುವ ಮುನ್ಸೂಚನೆ ನೀಡಿದರು.
ಆದರೆ, 28ರನ್ಗಳಿಕೆ ಮಾಡಿದ್ದ ವೇಳೆ ಎಲ್ಗರ್ ವಿಕೆಟ್ ಪಡೆದುಕೊಳ್ಳುವಲ್ಲಿ ಶಾರ್ದೂಲ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಅರ್ಧಶತಕ ಸಿಡಿಸಿದ ಪೀಟರ್ಸನ್(68) ಹಾಗೂ 1 ರನ್ಗಳಿಕೆ ಮಾಡಿದ ದುಸೆನ್ ವಿಕೆಟ್ ಕಿತ್ತು ಭಾರತಕ್ಕೆ ಮೇಲುಗೈ ತಂದುಕೊಟ್ಟರು.
ಈ ಮೂಲಕ ರಾಹುಲ್ ಪಡೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಿದೆ. ತಂಡದ ಭೋಜನ ವಿರಾಮದ ವೇಳೆಗೆ 4 ವಿಕೆಟ್ನಷ್ಟಕ್ಕೆ 102ರನ್ಗಳಿಕೆ ಮಾಡಿದ್ದು, ಇನ್ನು 100ರನ್ಗಳ ಹಿನ್ನೆಡೆಯಲಿದೆ.