ಜೋಹಾನ್ಸ್ಬರ್ಗ್(ದಕ್ಷಿಣ ಆಫ್ರಿಕಾ): ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿ ದಿಢೀರ್ ಕುಸಿತ ಕಂಡಿದೆ. ಭೋಜನ ವಿರಾಮದ ವೇಳೆಗೆ 6 ವಿಕೆಟ್ ಕಳೆದುಕೊಂಡು 188 ರನ್ ಗಳಿಕೆ ಮಾಡಿದ್ದು, 161ರನ್ಗಳ ಮುನ್ನಡೆ ಪಡೆಯಿತು.
-
That's Lunch on Day 3 of the 2nd #SAvIND Test!
— BCCI (@BCCI) January 5, 2022 " class="align-text-top noRightClick twitterSection" data="
103 runs for #TeamIndia in the first session
4 wickets for South Africa
We will be back for the second session shortly.
Scorecard ▶️ https://t.co/b3aaGXmBg9 pic.twitter.com/BDUIS1oqxJ
">That's Lunch on Day 3 of the 2nd #SAvIND Test!
— BCCI (@BCCI) January 5, 2022
103 runs for #TeamIndia in the first session
4 wickets for South Africa
We will be back for the second session shortly.
Scorecard ▶️ https://t.co/b3aaGXmBg9 pic.twitter.com/BDUIS1oqxJThat's Lunch on Day 3 of the 2nd #SAvIND Test!
— BCCI (@BCCI) January 5, 2022
103 runs for #TeamIndia in the first session
4 wickets for South Africa
We will be back for the second session shortly.
Scorecard ▶️ https://t.co/b3aaGXmBg9 pic.twitter.com/BDUIS1oqxJ
ನಿನ್ನೆ 85 ರನ್ಗಳಿಸುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದ್ದ ಭಾರತ ಇಂದು ಬ್ಯಾಟಿಂಗ್ ಮುಂದುವರೆಸಿತು. 35 ರನ್ಗಳಿಕೆ ಮಾಡಿದ್ದ ಪೂಜಾರಾ ಹಾಗೂ 11 ರನ್ ಗಳಿಕೆ ಮಾಡಿದ್ದ ರಹಾನೆ ಇಂದು ಬ್ಯಾಟಿಂಗ್ ಮುಂದುವರೆಸಿದರು. ಈ ಜೋಡಿ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಬೌಲರ್ಗಳನ್ನು ಸುಲಭವಾಗಿ ಎದುರಿಸಿ, ಶತಕದಾಟದ ಜೊತೆಯಾಟ ಆಡಿದರು.
ರಬಾಡಾಗೆ ಬಲಿಯಾದ ಪೂಜಾರಾ-ರಹಾನೆ:
53 ರನ್ಗಳಿಕೆ ಮಾಡಿ ಬ್ಯಾಟ್ ಮಾಡ್ತಿದ್ದ ವೇಳೆ ಚೇತೇಶ್ವರ್ ಪೂಜಾರಾ ವೇಗಿ ರಬಾಡಾ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರೆ, 58 ರನ್ಗಳಿಕೆ ಮಾಡಿದ್ದ ರಹಾನೆ ಕೂಡ ಅದೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಆ ಬಳಿಕ ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ರಬಾಡಾ ಓವರ್ನಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
16 ರನ್ ಗಳಿಸಿ ಬ್ಯಾಟ್ ಮಾಡ್ತಿದ್ದ ಅಶ್ವಿನ್ ವಿಕೆಟ್ ಪಡೆದುಕೊಳ್ಳುವಲ್ಲಿ ಲುಂಗಿ ಎಗ್ಡಿ ಯಶಸ್ವಿಯಾಗಿದ್ದು, ಹರಿಣಗಳ ತಂಡಕ್ಕೆ ಮೇಲುಗೈ ತಂದುಕೊಟ್ಟರು.
ಇದೀಗ ಹನುಮ ವಿಹಾರಿ (6) ಹಾಗೂ ಶಾರ್ದೂಲ್ ಠಾಕೂರ್(4) ಬ್ಯಾಟಿಂಗ್ ಮಾಡ್ತಿದ್ದಾರೆ.
ಆಫ್ರಿಕಾ ತಂಡದ ಪರ ಎರಡನೇ ಇನ್ನಿಂಗ್ಸ್ನಲ್ಲಿ ರಬಾಡಾ 3 ವಿಕೆಟ್, ಒಲಿವಿರ್, ನಿಗ್ಡಿ ಹಾಗೂ ಜಾನ್ಸನ್ ತಲಾ 1 ವಿಕೆಟ್ ಪಡೆದುಕೊಂಡಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 202ರನ್ಗಳಿಗೆ ಆಲೌಟ್ ಆಗಿದ್ದು, ಇದಕ್ಕೆ ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ 229 ರನ್ಗಳಿಸಿತು.