ಮುಂಬೈ, ಮಹಾರಾಷ್ಟ್ರ: 16ನೇ ಆವೃತ್ತಿಯ ಏಷ್ಯಾಕಪ್ ಪಂದ್ಯಾವಳಿ ನಡೆಯುತ್ತಿದ್ದು, ಭಾರತ ಕ್ರಿಕೆಟ್ ತಂಡ ಏಷ್ಯಾಕಪ್‌ನ ಒಟ್ಟು 14 ಆವೃತ್ತಿಗಳಲ್ಲಿ ಭಾಗವಹಿಸಿದೆ. ಇವುಗಳಲ್ಲಿ 12 ಆವೃತ್ತಿಗಳನ್ನು ODI ಮಾದರಿಯಲ್ಲಿ ಮತ್ತು ಎರಡು ಆವೃತ್ತಿಗಳನ್ನು T20 ಮಾದರಿಯಲ್ಲಿ ಆಡಿದೆ. ಭಾರತ ತಂಡ ಏಷ್ಯಾಕಪ್ ಗೆದ್ದ ಅತ್ಯಂತ ಯಶಸ್ವಿ ತಂಡ ಎಂದು ಪರಿಗಣಿಸಲಾಗಿದೆ (India vs Pakistan Records). 1984 ರಿಂದ 2018 ರವರೆಗೆ ಏಷ್ಯಾ ಕಪ್‌ನ 6 ODI ಪ್ರಶಸ್ತಿಗಳನ್ನು ಭಾರತ ಗೆದ್ದುಕೊಂಡಿದೆ. ಟಿ-20 ಪಂದ್ಯದಲ್ಲೂ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ಭಾರತ ಕ್ರಿಕೆಟ್ ತಂಡ ಒಟ್ಟು 7 ಏಷ್ಯಾಕಪ್ ಗೆದ್ದಂತಾಗಿದೆ. ಇಂದು ಏಷ್ಯಾಕಪ್‌ನಲ್ಲಿ ಭಾರತ ತಂಡದ ಮೊದಲ ಪಂದ್ಯ ಎರಡು ಬಾರಿ ಏಷ್ಯಾಕಪ್ ಗೆದ್ದಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ನಡೆಯಲಿದೆ.
-
🏆 Asia Cup, Match 3️⃣ #AsiaCup2023 #INDvPAK#ViratKohli𓃵 #BabarAzam𓃵#RohitSharma𓃵
— Aakash Sharma 𝕏 (@Being_Skysharma) September 1, 2023 " class="align-text-top noRightClick twitterSection" data="
The match you all have been waiting for, 🇮🇳 India vs 🇵🇰 Pakistan.
India and Pakistan will square off in an ODI game after 4 years on September 2nd, but according the the weather report 🌦rain… pic.twitter.com/3isPvjmLJS
">🏆 Asia Cup, Match 3️⃣ #AsiaCup2023 #INDvPAK#ViratKohli𓃵 #BabarAzam𓃵#RohitSharma𓃵
— Aakash Sharma 𝕏 (@Being_Skysharma) September 1, 2023
The match you all have been waiting for, 🇮🇳 India vs 🇵🇰 Pakistan.
India and Pakistan will square off in an ODI game after 4 years on September 2nd, but according the the weather report 🌦rain… pic.twitter.com/3isPvjmLJS🏆 Asia Cup, Match 3️⃣ #AsiaCup2023 #INDvPAK#ViratKohli𓃵 #BabarAzam𓃵#RohitSharma𓃵
— Aakash Sharma 𝕏 (@Being_Skysharma) September 1, 2023
The match you all have been waiting for, 🇮🇳 India vs 🇵🇰 Pakistan.
India and Pakistan will square off in an ODI game after 4 years on September 2nd, but according the the weather report 🌦rain… pic.twitter.com/3isPvjmLJS
ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲ ಪಂದ್ಯಗಳಲ್ಲಿ ಪಾಕಿಸ್ತಾನವು ಮೇಲುಗೈ ಸಾಧಿಸಿರಬಹುದು. ಆದರೆ, ಏಷ್ಯಾ ಕಪ್‌ನಲ್ಲಿ ಭಾರತವು ಪಾಕಿಸ್ತಾನದ ಮೇಲೆ ಪ್ರಾಬಲ್ಯ ಸಾಧಿಸಿದೆ. ಹಾಗಾಗಿಯೇ ಕ್ರಿಕೆಟ್ ಅಭಿಮಾನಿಗಳು ಮತ್ತೊಮ್ಮೆ ಭಾರತ ಕ್ರಿಕೆಟ್ ತಂಡವನ್ನು ಬಲಿಷ್ಠ ಎನ್ನುತ್ತಿದ್ದಾರೆ. ಆದರೆ, ಉಭಯ ತಂಡಗಳು ವಿಶ್ವಕಪ್ ತಯಾರಿಯನ್ನು ಗಮನದಲ್ಲಿಟ್ಟುಕೊಂಡು ಈ ಪಂದ್ಯವನ್ನು ಬಹಳ ಎಚ್ಚರಿಕೆಯಿಂದ ಆಡಲು ಸಜ್ಜಾಗಿದ್ದಾರೆ. ಉಭಯ ತಂಡಗಳ ನಡುವಿನ ಪಂದ್ಯವು ತುಂಬಾ ಕಠಿಣವಾಗಿರಲಿದೆ. ಈ ಪಂದ್ಯದ ಫಲಿತಾಂಶವು ಏಷ್ಯಾಕಪ್ ಮತ್ತು ವಿಶ್ವಕಪ್ ಬಗೆಗಿನ ಊಹಾಪೋಹಗಳಿಗೆ ಕಾರಣವಾಗುವ ಸಾಧ್ಯತೆಯಿದೆ.
ಏಷ್ಯಾಕಪ್ ಅನ್ನು ODI ಮಾದರಿಯಲ್ಲಿ ಆಡಿದಾಗಲೆಲ್ಲ ಭಾರತ ತಂಡವೇ ಮೇಲುಗೈ ಸಾಧಿಸಿದೆ. ಇಲ್ಲಿಯವರೆಗೆ ಆಡಿರುವ ಒಟ್ಟು 13 ಪಂದ್ಯಗಳಲ್ಲಿ ಭಾರತ ತಂಡ 7 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 5 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಅನಿರ್ದಿಷ್ಟವಾಗಿ ಉಳಿದಿದೆ.
ಅಂಕಿ - ಅಂಶಗಳಲ್ಲಿ ನೋಡಿದರೆ, 1984ರಲ್ಲಿ ಶಾರ್ಜಾದಲ್ಲಿ ಆಡಿದ ಮೊದಲ ಪಂದ್ಯವನ್ನು ಭಾರತ ಕ್ರಿಕೆಟ್ ತಂಡ 54 ರನ್‌ಗಳಿಂದ ಗೆದ್ದಿತ್ತು. ಇದಾದ ಬಳಿಕ 1988ರಲ್ಲಿ ಢಾಕಾದಲ್ಲಿ ನಡೆದ ಎರಡನೇ ಪಂದ್ಯವನ್ನೂ ಭಾರತ 4 ವಿಕೆಟ್‌ಗಳಿಂದ ಗೆದ್ದಿತ್ತು. 1995ರಲ್ಲಿ ಶಾರ್ಜಾದಲ್ಲಿ ನಡೆದ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ 97 ರನ್‌ಗಳ ಬೃಹತ್ ಜಯ ಗಳಿಸಿದರೆ, 1997ರಲ್ಲಿ ಕೊಲಂಬೊದಲ್ಲಿ ನಡೆದ ಪಂದ್ಯ ಅತಂತ್ರವಾಗಿತ್ತು.
ಇದಲ್ಲದೇ 2000ದಲ್ಲಿ ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಮತ್ತೊಮ್ಮೆ 44 ರನ್‌ಗಳಿಂದ ಜಯ ಸಾಧಿಸಿತ್ತು. ನಂತರ 2004ರಲ್ಲಿ ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ 59 ರನ್‌ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇದಾದ ಬಳಿಕ 2008ರಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಎರಡೂ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿದ್ದವು. ಕರಾಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಜಯ ಸಾಧಿಸಿದರೆ, ಪಾಕಿಸ್ತಾನ 2ನೇ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.
ಇದಲ್ಲದೇ 2010ರಲ್ಲಿ ಡಂಬುಲಾದಲ್ಲಿ ನಡೆದ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ 3 ವಿಕೆಟ್‌ಗಳ ಜಯ ಸಾಧಿಸಿತ್ತು. 2012 ರಲ್ಲಿ ಮಿರ್‌ಪುರದಲ್ಲಿ ನಡೆದ ಪಂದ್ಯವೂ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಇದರ ನಂತರ 2014 ರಲ್ಲಿ ನಿಕಟ ಸ್ಪರ್ಧೆ ಏರ್ಪಟ್ಟಿತು. ಅಂತಿಮವಾಗಿ ಪಾಕಿಸ್ತಾನವು ಒಂದು ವಿಕೆಟ್‌ನಿಂದ ಗೆದ್ದಿತು. 2018ರಲ್ಲಿ ದುಬೈನಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡದಿಂದ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ 9 ವಿಕೆಟ್‌ಗಳ ಜಯ ಸಾಧಿಸಿತ್ತು.
-
India vs Pakistan match#INDvPAK #INDIA #Pakistan #AsiaCup #AsiaCup2023 pic.twitter.com/BLCZgocDNw
— Gungun (@Gungun64203506) September 1, 2023 " class="align-text-top noRightClick twitterSection" data="
">India vs Pakistan match#INDvPAK #INDIA #Pakistan #AsiaCup #AsiaCup2023 pic.twitter.com/BLCZgocDNw
— Gungun (@Gungun64203506) September 1, 2023India vs Pakistan match#INDvPAK #INDIA #Pakistan #AsiaCup #AsiaCup2023 pic.twitter.com/BLCZgocDNw
— Gungun (@Gungun64203506) September 1, 2023
ಈ ಬಾರಿಯ ಏಷ್ಯಾಕಪ್ ಅನ್ನು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಜಂಟಿಯಾಗಿ ಹೈಬ್ರಿಡ್ ಮಾದರಿಯಲ್ಲಿ ಆಡಲಾಗುತ್ತಿದ್ದು, ಶ್ರೀಲಂಕಾದಲ್ಲಿ ಭಾರತ-ಪಾಕಿಸ್ತಾನ ಹಣಾಹಣಿ ನಡೆಯಲಿದೆ. ಶ್ರೀಲಂಕಾದಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಉಭಯ ತಂಡಗಳು 3 ಬಾರಿ ಮುಖಾಮುಖಿಯಾಗಿವೆ. ಇಲ್ಲಿ ಪೈಪೋಟಿ ಸಮಾನವಾಗಿದೆ. ಎರಡೂ ತಂಡಗಳು ತಲಾ ಒಂದು ಬಾರಿ ಗೆದ್ದಿದ್ದರೆ, ಒಂದು ಪಂದ್ಯ ಮಳೆಯಿಂದಾಗಿ ಅನಿರ್ದಿಷ್ಟವಾಗಿ ಅಂತ್ಯಗೊಂಡಿದೆ. ರದ್ದಾದ ಪಂದ್ಯವನ್ನು 20 ಜುಲೈ 1997 ರಂದು ಕೊಲಂಬೊ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿತ್ತು, ಅದನ್ನು ಜುಲೈ 21 ರಂದು ಮರುದಿನಕ್ಕೆ ಮುಂದೂಡಲಾಯಿತು. ಆದರೆ, ಈ ದಿನವೂ ಮಳೆಯಿಂದಾಗಿ ಪಂದ್ಯವನ್ನು ಆಡಲು ಸಾಧ್ಯವಾಗದ ಹಿನ್ನೆಲೆ ರದ್ದುಗೊಳಿಸಬೇಕಾಯಿತು.
2010ರಲ್ಲಿ ಶ್ರೀಲಂಕಾದಲ್ಲಿ ಡಂಬುಲ್ಲಾದಲ್ಲಿ ಉಭಯ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾದಾಗ ಭಾರತ ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ 3 ವಿಕೆಟ್‌ಗಳಿಂದ ಗೆದ್ದಿತ್ತು. ಇದಕ್ಕೂ ಮುನ್ನ 2004ರಲ್ಲಿ ಕೊಲಂಬೊ ಮೈದಾನದಲ್ಲಿ ಉಭಯ ತಂಡಗಳ ಮೊದಲ ಪಂದ್ಯ ನಡೆದಿದ್ದು, ನಂತರ ಪಾಕಿಸ್ತಾನ 59 ರನ್‌ಗಳಿಂದ ಗೆದ್ದಿತ್ತು. ಎರಡೂ ತಂಡಗಳು ಕ್ಯಾಂಡಿಯ ಪಲ್ಲೆಕೆಲೆ ಮೈದಾನದಲ್ಲಿ ಮೊದಲ ಬಾರಿಗೆ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈಗ ಇಲ್ಲಿ ಫಲಿತಾಂಶವು ಸರಣಿಯ ಸಂಭವನೀಯ ವಿಜೇತರ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಈ ಪಂದ್ಯ ವೀಕ್ಷಿಸಲು ಪಲ್ಲೆಕಲೆ ಮೈದಾನಕ್ಕೆ ಹೋಗುವ ಅಭಿಮಾನಿಗಳು ಕ್ಯಾಂಡಿಯ ಮೈದಾನದ ಬಾಕ್ಸ್ ಆಫೀಸ್‌ನಿಂದ ಟಿಕೆಟ್‌ಗಳನ್ನು ಖರೀದಿಸುವ ಮೂಲಕ ಕ್ರೀಡಾಂಗಣಕ್ಕೆ ಎಂಟ್ರಿ ಕೊಡಬಹುದಾಗಿದೆ.
ಓದಿ: ಏಷ್ಯಾ ಕಪ್ 2023: ಇಂದು ಭಾರತ Vs ಪಾಕಿಸ್ತಾನ ರೋಚಕ ಹಣಾಹಣಿಗೆ ವೇದಿಕೆ ಸಿದ್ಧ..