ಕೊಲಂಬೊ (ಶ್ರೀಲಂಕಾ): ಲೀಗ್ ಹಂತದಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ ಆದ ಕಾರಣ ಫಲಿತಾಂಶ ರಹಿತ ಮ್ಯಾಚ್ ಅದಾಗಿತ್ತು. ವಾರದ ಅಂತರದಲ್ಲಿ ಮತ್ತೆ ಸಾಂಪ್ರದಾಯಿಕ ಎದುರಾಳಿಗಳು ಮೈದಾನದಲ್ಲಿ ಮುಖಾಮುಖಿ ಆಗಿದ್ದು, ಇದಕ್ಕೂ ಮಳೆ ಕಾಡಿದೆ. ನಾಳೆ ಮೀಸಲು ದಿನ ಇರುವುದರಿಂದ ಚಿಂತೆ ಇಲ್ಲವಾದರೂ, ಸಾಧ್ಯವಾದಷ್ಟೂ ಇಂದೇ ಫಲಿತಾಂಶ ಕಾಣುವಂತೆ ಡಿಎಲ್ಎಸ್ ನಿಯಮದನ್ವಯ ಆಡಿಸಲಾಗುವುದು.
ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದ ಹಿನ್ನೆಲೆ ಮೈದಾನ ಸಂಪೂರ್ಣ ತೇವವಾಗಿದೆ. ಇದರಿಂದಾಗಿ ಮೈದಾನದಲ್ಲಿ ಪಂದ್ಯಾರಂಭಕ್ಕೆ ತಡವಾಗುವ ಸಾಧ್ಯತೆ ಇದೆ. ಪಂದ್ಯವನ್ನು ಇಂದು ರಾತ್ರಿ 10:30 ಒಳಗೆ ನಡೆಸಲು ಸಾಧ್ಯವಾದರೆ ಡಿಎಲ್ಎಸ್ ನಿಯಮದಂತೆ ಪಾಕಿಸ್ತಾನಕ್ಕೆ 20 ಓವರ್ ಆಡಿಸಲಾಗುವುದು. ಅದರಂತೆ ಪಾಕಿಸ್ತಾನ 180 ರನ್ ಗುರಿಯನ್ನು ಭೇದಿಸಬೇಕಿದೆ. 8 ಗಂಟೆ ವೇಳೆಗೆ ಅಂಪೈರ್ಗಳು ಮೈದಾನದ ತೇವಾಂಶವನ್ನು ಪರಿಶೀಲಿಸಲಿದ್ದು, ಈ ವೇಳೆ ಆಡಿಸಲು ಸಾಧ್ಯತೆಗಳಿದ್ದಲ್ಲಿ ಡಿಎಲ್ಎಸ್ ನಿಯಮ ಅನ್ವಯ ಆಗಲಿದೆ.
-
Rain has helted play in Colombo! Hopefully, the skies will clear up soon! #AsiaCup2023 #PAKvIND
— AsianCricketCouncil (@ACCMedia1) September 10, 2023 " class="align-text-top noRightClick twitterSection" data="
">Rain has helted play in Colombo! Hopefully, the skies will clear up soon! #AsiaCup2023 #PAKvIND
— AsianCricketCouncil (@ACCMedia1) September 10, 2023Rain has helted play in Colombo! Hopefully, the skies will clear up soon! #AsiaCup2023 #PAKvIND
— AsianCricketCouncil (@ACCMedia1) September 10, 2023
ಪಂದ್ಯ: ಆರಂಭಿಕ ಜೋಡಿ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ಭರ್ಜರಿ ಆರಂಭವನ್ನು ಭಾರತ ಕಂಡಿತ್ತು. ಮಳೆ ಮಧ್ಯಪ್ರವೇಶಿಸುವ ವೇಳೆಗೆ ಭಾರತ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಆದಾಗ್ಯೂ, ತಂಡಗಳು ಡ್ರೆಸ್ಸಿಂಗ್ ರೂಮ್‌ಗೆ ಮರಳುವ ಮೊದಲು, ರೋಹಿತ್ ಮತ್ತು ಶುಬ್‌ಮನ್ 121 ರನ್‌ಗಳ ಪಾಲುದಾರಿಕೆಯಲ್ಲಿ ಪಾಕಿಸ್ತಾನದ ಬೌಲರ್‌ಗಳ ಮೇಲೆ ಪ್ರಹಾರ ನಡೆಸಿದ್ದರು.
ಮೊದಲ ಓವರ್ನಲ್ಲಿ ಸಿಕ್ಸ್ ಮೂಲಕ ಖಾತೆ ತೆರೆದ ರೋಹಿತ್ ಶರ್ಮಾ ನಂತರ ಲಯ ಕಂಡುಕೊಳ್ಳಲು ಸ್ವಲ್ಪ ಪರದಾಡಿದರು. ಆದರೆ ಮೊದಲ ಪವರ್ ಪ್ಲೇ ಮುಗಿಯುತ್ತಿದ್ದಂತೆ ಸ್ಪಿನ್ನರ್ಗಳ ಮೇಲೆ ಭರ್ಜರಿ ಬ್ಯಾಟಿಂಗ್ ಮಾಡಿದರು. ಇದಕ್ಕೂ ಮುನ್ನ ಆರಂಭಿಕ ಆಟಗಾರ ಶುಭಮನ್ ಗಿಲ್ ಪಾಕ್ ವೇಗಿಗಳನ್ನು ದಂಡಿಸಿದ್ದರು. ಬೌಂಡರಿಗಳ ಮೂಲಕವೇ ರನ್ ಕಲೆ ಹಾಕಿದ ಗಿಲ್ 10 ಬೌಂಡರಿಯಿಂದ ಅರ್ಧಶತಕ ಪೂರ್ಣ ಮಾಡಿಕೊಂಡರು. ಅವರ ಬೆನ್ನಲ್ಲೇ ಶರ್ಮಾ ಸಹ 4 ಸಿಕ್ಸ್ ಮತ್ತು 5 ಬೌಂಡರಿಯ ಸಹಾಯದಿಂದ ಅರ್ಧಶತಕ ಮಾಡಿಕೊಂಡರು.
121 ರನ್ನ ಜೊತೆಯಾಟದೊಂದಿಗೆ ಬಲಿಷ್ಠ ಆರಂಭ ಕಂಡಿದ್ದ ಭಾರತಕ್ಕೆ ಶಾಬಾದ್ ಖಾನ್ ಕಾಡಿದರು. 56 ರನ್ ಗಳಿಸಿ ಆಡುತ್ತಿದ್ದ ರೋಹಿತ್ ವಿಕೆಟ್ ಪಡೆದರು. ಅವರ ಬೆನ್ನಲ್ಲೇ 58 ರನ್ ಗಳಿಸದ ಗಿಲ್ ಸಹ ಶಾಹೀನ್ ಅಫ್ರಿದಿಗೆ ವಿಕೆಟ್ ಕೊಟ್ಟರು. ಮಳೆ ಬರುವ ವೇಳೆಗೆ ವಿರಾಟ್ ಕೊಹ್ಲಿ (8) ಮತ್ತು ಕೆಎಲ್ ರಾಹುಲ್ (17) ಕ್ರೀಸ್ನಲ್ಲಿದ್ದರು.
ಆರಂಭಿಕ ಬ್ಯಾಟರ್ಗಳು ಅಬ್ಬರದ ಇನ್ನಿಂಗ್ಸ್ ಕಟ್ಟಿದ್ದರಿಂದ ಪಂದ್ಯವನ್ನು 20 ಓವರ್ಗೆ ಮೊಟಕು ಗೊಳಿಸಿದರೂ ಸ್ಪರ್ಧಾತ್ಮಕ ಗುರಿಯನ್ನು ಪಾಕಿಸ್ತಾನ ಎದುರಿಸಬೇಕಿದೆ.
ಇದನ್ನೂ ಓದಿ: ಪಾಕ್ - ಭಾರತ ಸೂಪರ್ ಫೋರ್ ಪಂದ್ಯಕ್ಕೂ ಕಾಡಿದ ವರುಣ.. ಮಳೆಗೂ ಮುನ್ನ ಭಾರತ 147/2