ರಾಯ್‌ಪುರ (ಛತ್ತೀಸ್‌ಗಢ): ಇಲ್ಲಿಯ ಶಹೀದ್ ವೀರನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇಂದು (ಶನಿವಾರ) ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಹೀನಾಯ ಸೋಲನುಭವಿಸಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಕಿವೀಸ್ ನೀಡಿದ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ಕೇವಲ 20.1 ಓವರ್ಗಳಿಗೆ 2 ವಿಕೆಟ್ ಕಳೆದುಕೊಂಡು 111 ರನ್ಗಳಿಸುವ ಮೂಲಕ 8 ವಿಕೆಟ್ಗಳ ಜಯ ದಾಖಲಿಸಿತು. ಈ ಮೂಲಕ ಭಾರತ 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಇನ್ನು 1 ಪಂದ್ಯ ಬಾಕಿ ಇರುವಂತೆಯೇ ಜಯದ ಮಾಲೆಯನ್ನು ಧರಿಸಿದೆ. ಇತ್ತೀಚೆಗೆ ನಡೆದ ಮೊದಲ ಪಂದ್ಯದಲ್ಲಿ ಭಾರತ ಬ್ಯಾಟರ್ಗಳು ರನ್ ಮಳೆಯನ್ನೇ ಹರಿಸಿದ್ದರು. ಆದರೂ, ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಇಂದಿನ ಪಂದ್ಯವನ್ನು ಸಲೀಸಾಗಿ ಗೆಲ್ಲುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿತು.
-
.@ShubmanGill finishes things off in style! #TeamIndia complete a comprehensive 8️⃣-wicket victory in Raipur and clinch the #INDvNZ ODI series 2️⃣-0️⃣ with more game to go 🙌🏻
— BCCI (@BCCI) January 21, 2023 " class="align-text-top noRightClick twitterSection" data="
Scorecard ▶️ https://t.co/tdhWDoSwrZ @mastercardindia pic.twitter.com/QXY20LWlyw
">.@ShubmanGill finishes things off in style! #TeamIndia complete a comprehensive 8️⃣-wicket victory in Raipur and clinch the #INDvNZ ODI series 2️⃣-0️⃣ with more game to go 🙌🏻
— BCCI (@BCCI) January 21, 2023
Scorecard ▶️ https://t.co/tdhWDoSwrZ @mastercardindia pic.twitter.com/QXY20LWlyw.@ShubmanGill finishes things off in style! #TeamIndia complete a comprehensive 8️⃣-wicket victory in Raipur and clinch the #INDvNZ ODI series 2️⃣-0️⃣ with more game to go 🙌🏻
— BCCI (@BCCI) January 21, 2023
Scorecard ▶️ https://t.co/tdhWDoSwrZ @mastercardindia pic.twitter.com/QXY20LWlyw
ಭಾರತದ ಪರ ಆರಂಭಿಕ ಆಟಗಾರ ರೋಹಿತ್ ಶರ್ಮಾ 50 ಎಸೆತದಲ್ಲಿ 7 ಬೌಂಡರಿ ಮತ್ತು 2 ಸಿಕ್ಸ್ ಒಳಗೊಂಡಂತೆ 51 ರನ್ ಗಳಿಸಿ ಗೆಲವಿನ ಹಾದಿಯನ್ನು ಸುಗಮಗೊಳಿಸಿದರು. ರೋಹಿತ್ ವಿಕೆಟ್ ಒಪ್ಪಿಸಿದ ಬಳಿಕ ಕ್ರೀಸ್ಗೆ ಇಳಿದ ವಿರಾಟ್ ಕೊಹ್ಲಿ (11) ಯುವ ಆಟಗಾರ ಶುಭ್ಮನ್ ಗಿಲ್ಗೆ ಜೊತೆಯಾದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಶುಭ್ಮನ್ ಗಿಲ್ ಔಟ್ ಆಗದೇ 40 (53) ಮತ್ತು ಇಶಾನ್ ಕಿಶನ್ 8 (9) ರನ್ ಗಳಿಸುವ ಮೂಲಕ ತಂಡದ ಗೆಲುವನ್ನು ಸಲೀಸಾಗಿ ಡದಕ್ಕೆ ತಂದರು. ನ್ಯೂಜಿಲೆಂಡ್ ಪರ ಹೆನ್ರಿ ಶಿಪ್ಲಿ ಹಾಗೂ ಮಿಚೆಲ್ ಸ್ಯಾಂಟ್ನರ್ ತಲಾ 1 ವಿಕೆಟ್ ಕಿತ್ತರು.
ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ನಿರ್ಧರಿಸಿದ ನಾಯಕ ರೋಹಿತ್ ಶರ್ಮಾ, ಮೊದಲ ಪಂದ್ಯದ ಬಳಗವನ್ನೇ ಮುಂದುವರಿಸಿದ್ದರು. ಟಾಮ್ ಲ್ಯಾಥಮ್ ನೇತೃತ್ವದ ನ್ಯೂಜಿಲೆಂಡ್ ಆಟಗಾರರನ್ನು ಆರಂಭದಿಂದಲೂ ಇನ್ನಿಲ್ಲದಂತೆ ಕಾಡಿದ ಭಾರತದ ವೇಗಿಗಳು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶ ಕಂಡರು. 34.2 ಓವರ್‌ಗಳಲ್ಲಿ ಕೇವಲ 108 ರನ್‌ಗಳನ್ನು ನೀಡಿ ಸರ್ವಪತನ ಕಂಡ ಕಿವೀಸ್ ತಂಡ, ಭಾರತಕ್ಕೆ 109 ರನ್‌ಗಳ ಗುರಿ ನೀಡಿತ್ತು. ವೇಗಿ ಮೊಹಮ್ಮದ್ ಶಮಿ ಭಾರತದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದು, ತಮ್ಮ 6 ಓವರ್‌ಗಳಲ್ಲಿ ಕೇವಲ 18 ರನ್ ನೀಡಿ ಮೂರು ವಿಕೆಟ್ ಪಡೆದು ಎದುರಾಳಿ ತಂಡಕ್ಕೆ ಮುಳುವಾದರು. ಶುರುವಿನಿಂದಲೂ ಹಿನ್ನಡೆ ಅನುಭವಿಸುತ್ತಿದ್ದ ಕಿವೀಸ್, ಕೊನೆವರೆಗೂ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.
-
Innings Break!
— BCCI (@BCCI) January 21, 2023 " class="align-text-top noRightClick twitterSection" data="
A brilliant bowling performance from #TeamIndia 👏 👏
3⃣ wickets for @MdShami11
2⃣ wickets each for @hardikpandya7 & @Sundarwashi5
1⃣ wicket each for @mdsirajofficial, @imkuldeep18 & @imShard
Scorecard ▶️ https://t.co/tdhWDoSwrZ #INDvNZ | @mastercardindia pic.twitter.com/0NHFrDbIQT
">Innings Break!
— BCCI (@BCCI) January 21, 2023
A brilliant bowling performance from #TeamIndia 👏 👏
3⃣ wickets for @MdShami11
2⃣ wickets each for @hardikpandya7 & @Sundarwashi5
1⃣ wicket each for @mdsirajofficial, @imkuldeep18 & @imShard
Scorecard ▶️ https://t.co/tdhWDoSwrZ #INDvNZ | @mastercardindia pic.twitter.com/0NHFrDbIQTInnings Break!
— BCCI (@BCCI) January 21, 2023
A brilliant bowling performance from #TeamIndia 👏 👏
3⃣ wickets for @MdShami11
2⃣ wickets each for @hardikpandya7 & @Sundarwashi5
1⃣ wicket each for @mdsirajofficial, @imkuldeep18 & @imShard
Scorecard ▶️ https://t.co/tdhWDoSwrZ #INDvNZ | @mastercardindia pic.twitter.com/0NHFrDbIQT
ಹಾರ್ದಿಕ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ತಲಾ ಎರಡು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಭಾರತದ ವೇಗಿಗಳ ದಾಳಿಗೆ ನ್ಯೂಜಿಲೆಂಡ್ ಆಟಗಾರರು ರನ್ ಗಳಿಸಲು ಹರಸಾಹಸಪಡಬೇಕಾಯಿತು. ಉತ್ತಮ ಲಯಕ್ಕೆ ಯಾರೂ ಮರಳದ ಹಿನ್ನೆಲೆ ಕಿವೀಸ್ ಬ್ಯಾಟಿಂಗ್ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಪ್ರಮುಖ ಆಟಗಾರರು ಅನ್ನಿಸಿಕೊಂಡವರ್ಯಾರು ಎರಡಂಕಿಯೂ ಮೀರಲಿಲ್ಲ.
ಗ್ಲೆನ್ ಫಿಲಿಪ್ಸ್ 36 ರನ್ಗಳೇ ನ್ಯೂಜಿಲೆಂಡ್ ಪರ ಅತಿ ಹೆಚ್ಚು. ಆರಂಭಿಕ ಆಟಗಾರ ಫಿನ್ ಅಲೆನ್ ಸೊನ್ನೆ ಸುತ್ತಿದರೆ, ಡ್ವೇನ್ ಕಾನ್ವೇ 7, ಹೆನ್ರಿ ನಿಕೋಲ್ಸ್ 2, ಡೇರಿಲ್ ಮಿಚೆಲ್ 1, ನಾಯಕ ಟಾಮ್ ಲ್ಯಾಥಮ್ 1, ಮೈಕೆಲ್ ಬ್ರೇಸ್‌ವೆಲ್ 22, ಮಿಚೆಲ್ ಸ್ಯಾಂಟ್ನರ್ 27, ಹೆನ್ರಿ ಶಿಪ್ಲಿ 2 ಹಾಗೂ ಲೋಕಿ ಫರ್ಗುಸನ್ 1 ರನ್ ಕಾಣಿಕೆ ನೀಡಿದರು. ಮೂರು ವಿಕಿಟ್ ಪಡೆದ ಮೊಹಮ್ಮದ್ ಶಮಿ ಇಂದಿನ ಪಂದ್ಯ ಶ್ರೇಷ್ಠ ಆಟಗಾರರಾದರು. ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ ಜನವರಿ 24 ರಂದು ಇಂದೋರ್ನಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್‌ಗಳು: ನ್ಯೂಜಿಲೆಂಡ್ 34.3 ಓವರ್‌ಗಳಲ್ಲಿ 108 (ಗ್ಲೆನ್ ಫಿಲಿಪ್ಸ್ 36; ಮೊಹಮ್ಮದ್ ಶಮಿ 3-18) ಭಾರತಕ್ಕೆ 20.1 ಓವರ್‌ಗಳಲ್ಲಿ 111/2 (ರೋಹಿತ್ ಶರ್ಮಾ 51; ಮಿಚೆಲ್ ಸ್ಯಾಂಟ್ನರ್ 1-28) ಎಂಟು ವಿಕೆಟ್ಗಳಿಂದ ಭಾರತಕ್ಕೆ ಭರ್ಜರಿ ಜಯ.
ಇದನ್ನೂ ಓದಿ: ಡ್ರೆಸ್ಸಿಂಗ್ ರೂಮ್ ಮಾಹಿತಿ ಹಂಚಿಕೊಂಡ ಸ್ಪಿನ್ನರ್ ಯಜುವೇಂದ್ರ ಚಹಲ್: ವಿಡಿಯೋ