ಕೊಲಂಬೊ (ಶ್ರೀಲಂಕಾ): ಯುವ ಆಟಗಾರ ಶುಭಮನ್ ಗಿಲ್ ಶತಕದ ಹೊರತಾಗಿಯೂ ಭಾರತ ತಂಡ ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ ಮುಗ್ಗಿಸಿದೆ. ಪ್ರಿನ್ಸ್ ಗಿಲ್ ಶತಕವು ತಂಡದ ಜಯಕ್ಕೆ ಕೊಡುಗೆ ಆಗಲಿಲ್ಲ, ಅವರ ಆಟ ವ್ಯರ್ಥ ಪ್ರಯತ್ನದಂತಾಯಿತು. ಭಾರತ 49.5 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 259 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಬಾಂಗ್ಲಾ ಆರು ರನ್ಗಳ ಗೆಲುವು ದಾಖಲಿಸಿತು.
ಏಷ್ಯಾ ಕಪ್ ಟೂರ್ನಿಯ ಆರನೇ ಸೂಪರ್ 4 ಪಂದ್ಯದಲ್ಲಿ ಐದು ಬದಲಾವಣೆಗಳೊಂದಿಗೆ ಮೈದಾನಕ್ಕಿಳಿದ ಟೀಂ ಇಂಡಿಯಾ ಪ್ರಯೋಗದ ಬಾಂಗ್ಲಾದೇಶದ ಮೇಲೆ ಯಶಸ್ವಿ ಆಗಲಿಲ್ಲ. ಬಾಂಗ್ಲಾ ಕೊಟ್ಟಿದ್ದ 266 ರನ್ ಬೆನ್ನುತ್ತಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ನಿಂದ ಆರಂಭಿಕ ಆಘಾತ ಉಂಟಾಯಿತು. ಎರಡು ಬಾಲ್ ಎದುರಿಸಿದ ರೋಹಿತ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಏಕದಿನ ಕ್ರಿಕೆಟ್ಗೆ ಇಂದು ಪಾದಾರ್ಪಣೆ ಮಾಡಿದ ತಿಲಕ್ ವರ್ಮಾ ಕೇವಲ 5 ರನ್ ಗಳಿಸಿ ನಿರಾಸೆ ಮೂಡಿಸಿದರು.
-
What a win! 👏
— ICC (@ICC) September 15, 2023 " class="align-text-top noRightClick twitterSection" data="
Bangladesh end their #AsiaCup2023 campaign on a high by beating finalists India in the final Super 4 game 💪#INDvBAN | https://t.co/ZOsknWbjNs pic.twitter.com/LKJJ7hdJ4b
">What a win! 👏
— ICC (@ICC) September 15, 2023
Bangladesh end their #AsiaCup2023 campaign on a high by beating finalists India in the final Super 4 game 💪#INDvBAN | https://t.co/ZOsknWbjNs pic.twitter.com/LKJJ7hdJ4bWhat a win! 👏
— ICC (@ICC) September 15, 2023
Bangladesh end their #AsiaCup2023 campaign on a high by beating finalists India in the final Super 4 game 💪#INDvBAN | https://t.co/ZOsknWbjNs pic.twitter.com/LKJJ7hdJ4b
ಮೂರನೇ ವಿಕೆಟ್ಗೆ ಕೆ ಎಲ್ ರಾಹುಲ್ ಹಾಗೂ ಆರಂಭಿಕ ಆಟಗಾರ ಶುಭಮನ್ ಗಿಲ್ 57 ರನ್ಗಳ ಜೊತೆಯಾಟದೊಂದಿಗೆ ತಂಡ ಚೇತರಿಸಿಕೊಂಡಿತು. ಆದರೆ, 19 ರನ್ ಗಳಿಸಿ ಆಡುತ್ತಿದ ರಾಹುಲ್ ಅವರು ಮೆಹದಿ ಹಸನ್ ಬೌಲಿಂಗ್ನಲ್ಲಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಇಶಾನ್ ಕಿಶನ್ ಕೂಡ 5 ರನ್ಗೆ ಎಲ್ಬಿ ಬಲೆಗೆ ಬಿದ್ದರು. 5ನೇ ವಿಕೆಟ್ಗೆ ಸೂರ್ಯಕುಮಾರ್ ಯಾದವ್ ಗಿಲ್ಗೆ ಜೊತೆಯಾದರು. ಆದರೆ ಟಿ20ಯ ಟಾಪ್ ಬ್ಯಾಟರ್ ಸೂರ್ಯ (26) ಏಕದಿನ ಕ್ರಿಕೆಟ್ನಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಮತ್ತೆ ವಿಫಲರಾದರು. ಮತ್ತೊಂದಡೆ, ರವೀಂದ್ರ ಜಡೇಜಾ ಕೂಡ ಕೇವಲ 7 ರನ್ಗೆ ವಿಕೆಟ್ ಒಪ್ಪಿಸಿದರು.
ಗಿಲ್ ಶತಕ: ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಗಿಲ್ ತಾಳ್ಮೆಯಿಂದ ರನ್ ಕಲೆಹಾಕಿದರು. ಎದರುರಾಳಿ ತಂಡದ ಬೌಲರ್ಗಳನ್ನು ಸೂಕ್ಷ್ಮವಾಗಿ ಗಮನಿಸಿ ಬ್ಯಾಟಿಂಗ್ ಮಾಡಿದ ಗಿಲ್ ಸಿಕ್ಕ ಅವಕಾಶದಲ್ಲಿ ಬೌಂಡರಿಗಳ ಸಿಡಿಸುತ್ತಾ ರನ್ಗಳನ್ನು ಕಲೆ ಹಾಕಿದರು. 24ರ ಹರೆಯದ ಆಟಗಾರ 117 ಎಸೆತಗಳಲ್ಲಿ ನೂರರ ಗಡಿ ದಾಟಿದರು. ಈ ಮೂಲಕ ಗಿಲ್ ತಮ್ಮ 5ನೇ ಏಕದಿನ ಶತಕ ಪೂರೈಸಿದರು.
ಆದರೆ, ಗಿಲ್ ನಿರ್ಗಮನವಾಗುತ್ತಿದ್ದಂತೆ ಪಂದ್ಯ ಗತಿಯೇ ಬದಲಾಯಿತು. 133 ಬಾಲ್ಗಳಲ್ಲಿ ಎಂಟು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 121 ರನ್ಗಳನ್ನು ಗಿಲ್ ಬಾರಿಸಿದರು. ಕೊನೆಯಲ್ಲಿ ಅಕ್ಷರ್ ಪಟೇಲ್ (42) ತಂಡವನ್ನು ಗೆಲ್ಲಿಸುವ ಪ್ರಯತ್ನ ಮಾಡಿದರಾದರೂ ಸಾಧ್ಯವಾಗಲಿಲ್ಲ. ಅಂತಿಮವಾಗಿ ಇನ್ನೂ ಒಂದು ಎಸೆತ ಬಾಕಿ ಇರಬೇಕಾದರೆ ಸರ್ವಪತನ ಕಂಡು ಬಾಂಗ್ಲಾ ಎದುರು ಸೋಲಿಗೆ ಶರಣಾಯಿತು. ಬಾಂಗ್ಲಾ ಪರ ಮುಸ್ತಫಿಜುರ್ ರೆಹಮಾನ್ ಮೂರು ವಿಕೆಟ್, ಮೆಹಂದಿ ಹಸನ್ ಮತ್ತು ತಂಜಿಮ್ ಹಸನ್ ಸಾಕಿಬ್ ಎರಡು ಹಾಗೂ ಶಕೀಬ್ ಅಲ್ ಹಸನ್, ಮಹಿದಿ ಹಾಸನ ಮಿರಜ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್ ಸೆಮಿ ಫೈನಲ್, ಫೈನಲ್ ನೋಡುವ ಆಸೆಯೇ?: ಟಿಕೆಟ್ ಲಭ್ಯತೆ ಕುರಿತು ಇಲ್ಲಿದೆ ಮಾಹಿತಿ