ಅಹಮದಾಬಾದ್: ಆಸಿಸ್ ಮೊದಲ ಇನ್ನಿಂಗ್ಸ್ನಲ್ಲಿ ನೀಡಿದ್ದ ಬೃಹತ್ ಮೊತ್ತಕ್ಕೆ ಭಾರತ ಸರಿಯಾದ ಉತ್ತರ ನೀಡುತ್ತಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ 289 ರನ್ ಗಳಿಸಿದೆ. ಶುಭಮನ್ ಗಿಲ್ 128 ಮತ್ತು ವಿರಾಟ್ 59* ರನ್ ಭಾರತಕ್ಕೆ 250+ ರನ್ ದಾಟಲು ಬೆನ್ನೆಲುಬಾಗಿದೆ. ಮೂರನೇ ದಿನದಾಟದ ಅಂತ್ಯದ ವೇಳೆಗೆ ಭಾರತ ಮೂರು ವಿಕೆಟ್ ಕಳೆದುಕೊಂಡಿದ್ದು 191ರನ್ಗಳ ಹಿನ್ನಡೆಯಲ್ಲಿದೆ.
ಭಾರತ ಇಂದು ಮೂರು ಅವಧಿಯಲ್ಲಿ ಒಂದೊಂದು ವಿಕೆಟ್ ಕಳೆದುಕೊಂಡಿತು. ಮೊದಲ ಅವಧಿಯಲ್ಲಿ ರೋಹಿತ್, ಟೀ ಬ್ರೇಕ್ ಮುನ್ನ ಪೂಜಾರ ಔಟ್ ಆಗಿದ್ದಾರೆ. ಕೊನೆಯ ಸೆಷನ್ನಲ್ಲಿ ಶತಕ ಗಳಿಸಿದ್ದ ಗಿಲ್ ಔಟ್ ಆದರು. ಗಿಲ್ ನಂತರ ಬಡ್ತಿ ಪಡೆದು ರವೀಂದ್ರ ಜಡೇಜಾ (16) ಮತ್ತು ಮೂರನೇ ವಿಕೆಟ್ ಆಗಿ ಬಂದ ವಿರಾಟ್ ಕೊಹ್ಲಿ (59*) ಕ್ರೀಸ್ನಲ್ಲಿದ್ದಾರೆ.
-
Stumps on Day 3⃣ of the Fourth #INDvAUS Test!
— BCCI (@BCCI) March 11, 2023 " class="align-text-top noRightClick twitterSection" data="
Brilliant batting display by #TeamIndia 🇮🇳 as we move to 289/3 at the end of day's play.
We will be back with Day 4 action tomorrow, with India trailing by 191 runs.
Scorecard ▶️ https://t.co/8DPghkx0DE@mastercardindia pic.twitter.com/itAO7Wb1un
">Stumps on Day 3⃣ of the Fourth #INDvAUS Test!
— BCCI (@BCCI) March 11, 2023
Brilliant batting display by #TeamIndia 🇮🇳 as we move to 289/3 at the end of day's play.
We will be back with Day 4 action tomorrow, with India trailing by 191 runs.
Scorecard ▶️ https://t.co/8DPghkx0DE@mastercardindia pic.twitter.com/itAO7Wb1unStumps on Day 3⃣ of the Fourth #INDvAUS Test!
— BCCI (@BCCI) March 11, 2023
Brilliant batting display by #TeamIndia 🇮🇳 as we move to 289/3 at the end of day's play.
We will be back with Day 4 action tomorrow, with India trailing by 191 runs.
Scorecard ▶️ https://t.co/8DPghkx0DE@mastercardindia pic.twitter.com/itAO7Wb1un
ತವರಿನಲ್ಲಿ ನಾಲ್ಕು ಸಾವಿರ ರನ್ ದಾಖಲೆ: ವಿರಾಟ್ ಕೊಹ್ಲಿ ತವರಿನಲ್ಲಿ 4000 ರನ್ ದಾಖಲಿಸಿದರು. ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯ ವಿರಾಟ್ ಕೊಹ್ಲಿ ಅವರ ತವರಿನ 50ನೇ ಪಂದ್ಯವಾಗಿದೆ. 50 ನೇ ಪಂದ್ಯದಲ್ಲಿ 4 ಸಾವಿರ ರನ್ ಗಡಿ ಮುಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ (7,216), ರಾಹುಲ್ ದ್ರಾವಿಡ್ (5,598), ಸುನಿಲ್ ಗವಾಸ್ಕರ್ (5,067) ಮತ್ತು ವೀರೇಂದ್ರ ಸೆಹ್ವಾಗ್ (4,656) ನಂತರ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಕೊಹ್ಲಿ ತವರಿನಲ್ಲಿ 4,000 ಟೆಸ್ಟ್ ರನ್‌ಗಳನ್ನು ತಲುಪಿದ ಐದನೇ ಭಾರತೀಯ ಬ್ಯಾಟರ್ ಆಗಿದ್ದಾರೆ. 77 ಇನ್ನಿಂಗ್ಸ್ನಲ್ಲಿ ಈ ಸಾಧನೆಯನ್ನು ವಿರಾಟ್ ಮಾಡಿದ್ದಾರೆ. ಈ ಮೂಲಕ ಗವಾಸ್ಕರ್ (87) ಮತ್ತು ದ್ರಾವಿಡ್ (88) ಅವರನ್ನು ಹಿಂದಿಕ್ಕಿದ್ದಾರೆ. ತವರಿನಲ್ಲಿ ಈ ವರೆಗೆ ಕೊಹ್ಲಿ 13 ಟೆಸ್ಟ್ ಶತಕಗಳನ್ನು ದಾಖಲಿಸಿದ್ದಾರೆ.
-
Milestone 🚨 - 𝟒𝟎𝟎𝟎 𝐓𝐞𝐬𝐭 𝐫𝐮𝐧𝐬 𝐚𝐭 𝐡𝐨𝐦𝐞 𝐚𝐧𝐝 𝐠𝐨𝐢𝐧𝐠 𝐬𝐭𝐫𝐨𝐧𝐠 🫡🫡#INDvAUS #TeamIndia | @imVkohli pic.twitter.com/W6lPx7savd
— BCCI (@BCCI) March 11, 2023 " class="align-text-top noRightClick twitterSection" data="
">Milestone 🚨 - 𝟒𝟎𝟎𝟎 𝐓𝐞𝐬𝐭 𝐫𝐮𝐧𝐬 𝐚𝐭 𝐡𝐨𝐦𝐞 𝐚𝐧𝐝 𝐠𝐨𝐢𝐧𝐠 𝐬𝐭𝐫𝐨𝐧𝐠 🫡🫡#INDvAUS #TeamIndia | @imVkohli pic.twitter.com/W6lPx7savd
— BCCI (@BCCI) March 11, 2023Milestone 🚨 - 𝟒𝟎𝟎𝟎 𝐓𝐞𝐬𝐭 𝐫𝐮𝐧𝐬 𝐚𝐭 𝐡𝐨𝐦𝐞 𝐚𝐧𝐝 𝐠𝐨𝐢𝐧𝐠 𝐬𝐭𝐫𝐨𝐧𝐠 🫡🫡#INDvAUS #TeamIndia | @imVkohli pic.twitter.com/W6lPx7savd
— BCCI (@BCCI) March 11, 2023
ಆರಂಭಿಕ ಆಟಗಾರ ಶುಭಮನ್ ಗಿಲ್ ತನ್ನ ವೈಯಕ್ತಿಕ ಎರಡನೇ ಟೆಸ್ಟ್ ಶತಕವನ್ನು ದಾಖಲು ಮಾಡಿದ್ದಾರೆ. ಮೊದಲ ಅವಧಿಯಲ್ಲಿ ರೋಹಿತ್ ವಿಕೆಟ್ ನಂತರ ಬಂದ ಚೇತೇಶ್ವರ ಪೂಜಾರ ಗಿಲ್ ಜೊತೆ ಸೇರಿ 113 ರನ್ಗಳ ಜೊತೆಯಾಟ ಮಾಡಿ ಔಟ್ ಆದರು. ಪೂಜಾರ ವಿಕೆಟ್ ಬೆನ್ನಲ್ಲೇ ಟೀ ಬ್ರೇಕ್ ಘೋಷಣೆ ಮಾಡಿದರು, ಈ ವೇಳೆಗೆ ಭಾರತ 187ಕ್ಕೆ ಎರಡು ವಿಕೆಟ್ ಕಳೆದುಕೊಂಡಿತು.
ನಿನ್ನೆ ಎರಡನೇ ದಿನದಾಟದ ಅಂತ್ಯಕ್ಕೆ ರೋಹಿತ್ ಶರ್ಮಾ 17 ಮತ್ತು ಗಿಲ್ 18 ರನ್ ಗಳಿಸಿದ್ದರು. ಭಾರತ ಯಾವುದೇ ವಿಕೆಟ್ ನಷ್ಟ ಇಲ್ಲದೇ 444 ರನ್ಗಳ ಹಿನ್ನಡೆಯಲ್ಲಿತ್ತು. ಇಂದು ಮುಂಜಾನೆ ಬ್ಯಾಟಿಂಗ್ ಆರಂಭಿಸಿದ ಗಿಲ್ ಮತ್ತು ರೋಹಿತ್ (35) ಜೋಡಿಯನ್ನು ಮ್ಯಾಥ್ಯೂ ಕುಹ್ನೆಮನ್ ಅಗಲಿಸಿದರು. ನಂತರ ಬಂದ ಚೇತೇಶ್ವರ ಪೂಜಾರ ತಮ್ಮ 102ನೇ ಪಂದ್ಯದಲ್ಲಿ 50 ರನ್ಗೆ 8 ರನ್ನ ಸೇರಿಸುವಷ್ಟರಲ್ಲೇ ಎಡವಿದರು. 42 ರನ್ ಗಳಿಸಿ ಆಡುತ್ತಿದ್ದ ಪೂಜಾರ ವಿಕೆಟ್ ಅನ್ನು ಮಾರ್ಫಿ ಪಡೆದರು.
-
Tea on Day 3 of the 4th Test@ShubmanGill (103*) and Pujara (42) stitch a fine 113 run partnership in the second session on Day 3.
— BCCI (@BCCI) March 11, 2023 " class="align-text-top noRightClick twitterSection" data="
Scorecard - https://t.co/8DPghkwsO6 #INDvAUS @mastercardindia pic.twitter.com/bsTIEWfVRz
">Tea on Day 3 of the 4th Test@ShubmanGill (103*) and Pujara (42) stitch a fine 113 run partnership in the second session on Day 3.
— BCCI (@BCCI) March 11, 2023
Scorecard - https://t.co/8DPghkwsO6 #INDvAUS @mastercardindia pic.twitter.com/bsTIEWfVRzTea on Day 3 of the 4th Test@ShubmanGill (103*) and Pujara (42) stitch a fine 113 run partnership in the second session on Day 3.
— BCCI (@BCCI) March 11, 2023
Scorecard - https://t.co/8DPghkwsO6 #INDvAUS @mastercardindia pic.twitter.com/bsTIEWfVRz
17 ಸಾವಿರ ರನ್ ಪೂರೈಸಿದ ರೋಹಿತ್: ಭಾರತ ತಂಡದ ನಾಯಕ ರೋಹಿತ್ ಶರ್ಮಾ 21 ರನ್ ಗಳಿಸುತ್ತಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 17,000 ರನ್ ಗಳಿಸಿದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಭಾರತದ 7 ನೇ ಆಟಗಾರ ಮತ್ತು ಒಟ್ಟಾರೆ 28 ನೇ ಆಟಗಾರರಾಗಿದ್ದಾರೆ. ರೋಹಿತ್ ಶರ್ಮಾ ಮೊದಲು, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ವೀರೇಂದ್ರ ಸೆಹ್ವಾಗ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಎರಡನೇ ದಿನದಾಟದ ಹೈಲೈಟ್ಸ್: ಸರಣಿ ನಿರ್ಣಾಯಕ ನಾಲ್ಕನೇ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಭಾರತವು ಆಸ್ಟ್ರೇಲಿಯಾವನ್ನು 480 ರನ್‌ಗಳಿಗೆ ಆಲೌಟ್ ಮಾಡಿತು. ಭಾರತದ ಪರ ರವಿಚಂದ್ರನ್ ಅಶ್ವಿನ್ (6/91) ವಿಕೆಟ್‌ಗಳನ್ನು ಪಡೆದಿದ್ದು, ಎರಡನೇ ದಿನದಂದು ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಆದರು.
ಮತ್ತೊಂದೆಡೆ ದ್ವಿಶತಕದ ಗಡಿ ತಲುಪುತ್ತಿದ್ದ ಆಸ್ಟ್ರೇಲಿಯಾದ ಬ್ಯಾಟರ್ ಉಸ್ಮಾನ್ ಖವಾಜಾ ಅವರ ಆಟಕ್ಕೆ ಅಕ್ಷರ್ ಪಟೇಲ್ ಬ್ರೇಕ್ ಹಾಕಿದರು. 180 ರನ್‌ಗಳನ್ನು ಕಲೆಹಾಕಿದ್ದ ಉಸ್ಮಾನ್ ಖವಾಜಾ ಅಕ್ಷರ್ ಪಾಟೇಲ್ ಎಸೆತಕ್ಕೆ ಎಲ್ಬಿಡಬ್ಲೂ ಬಲೆಗೆ ಬಿದ್ದು ಪೆವಿಲಿಯನ್ ಸೇರುವ ಮೂಲಕ ದ್ವಿಶತಕದಿಂದ ವಂಚಿತರಾದರು.
ಮೊದಲ ದಿನ ಎರಡು ವಿಕೆಟ್‌ಗಳನ್ನು ಪಡೆದಿರುವ ಶಮಿ ಎರಡನೇ ದಿನದಾಟದಲ್ಲಿ ವಿಕೆಟ್‌ಗಳನ್ನು ಪಡೆಯಲು ವಿಫಲರಾದರು. ಮೊದಲನೇ ದಿನದಾಟದ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 255 ರನ್‌ಗಳಾಗಿದ್ದವು. ಎರಡನೇ ದಿನದಾಟವನ್ನು ಪುನಾರಂಭ ಮಾಡಿದ ಖವಾಜಾ ಮತ್ತು ಕ್ಯಾಮರೂನ್ ಗ್ರೀನ್ ಜೋಡಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಎರಡನೇ ದಿನದಾಟದಲ್ಲೆ ಕ್ಯಾಮರೂನ್ ಗ್ರೀನ್ ತಮ್ಮ ಶತಕವನ್ನೂ ಪೂರೈಸಿದರು. 114 ರನ್‌ಗಳನ್ನು ಕಲೆ ಹಾಕಿದ್ದ ಗ್ರೀನ್ ಅಶ್ವೀನ್ ಎಸೆದ ಬೌಲ್ಗೆ ಶ್ರೀಕರ್ ಭಾರತ್ಗೆ ಕ್ಯಾಚ್ ನೀಡಿ ಹೊರನಡೆದರು. ಖವಾಜಾ ಮತ್ತು ಗ್ರೀನ್ ಜೋಡಿ ಎರಡನೇ ದಿನದಾಟದಲ್ಲಿ 123 ರನ್ ಕಲೆ ಹಾಕಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಸಫಲರಾದರು. ಉಳಿದಂತೆ ಅಲೆಕ್ಸ್ ಕ್ಯಾರಿ (0), ಸ್ಟಾರ್ಕ್ (6), ಲಿಯಾನ್ (34), ಮುರ್ಫಿ (41) ರನ್ ಕಲೆಹಾಕಿದರು.
ಇದನ್ನೂ ಓದಿ: ಯುಪಿ ನಾಯಕಿಯ ಅಮೋಘ 96 ರನ್ಗಳ ಆಟ: ಆರ್ಸಿಬಿಗೆ ಸತತ 4ನೇ ಸೋಲು