ETV Bharat / sports

ಕಡೇ ಓವರ್​ನಲ್ಲಿ ಅರ್ಶದೀಪ್​ ಮಾರಕ ಬೌಲಿಂಗ್​ ದಾಳಿ: 6 ರನ್​ಗಳ ರೋಚಕ ಜಯ ದಾಖಲಿಸಿದ ಭಾರತ​ - ಅರ್ಶದೀಪ್​ ಮಾರಕ ದಾಳಿ

India vs Australia 5th T20I: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಭಾರತ 6 ರನ್​ಗಳಿಂದ ಜಯಿಸಿದೆ.

India vs Australia, 5th T20I  India won by 6 runs

author img

By ETV Bharat Karnataka Team

Published : Dec 3, 2023, 10:36 PM IST

Updated : Dec 3, 2023, 10:51 PM IST

ಬೆಂಗಳೂರು: ಕೊನೆಯ ಓವರ್​​ನಲ್ಲಿ 10 ರನ್​ ಬೇಕಾಗಿದ್ದಾಗ ದಾಳಿಗೆ ಬಂದ ಅರ್ಶದೀಪ್​ ಸಿಂಗ್ ಕ್ರೀಸ್​ನಲ್ಲಿದ್ದ ಆಸೀಸ್​ ನಾಯಕ ಮ್ಯಾಥ್ಯೂ ವೇಡ್ ವಿಕೆಟ್​ ಮತ್ತು ಕೇವಲ ನಾಲ್ಕು ರನ್​ ಬಿಟ್ಟುಕೊಟ್ಟರು. ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟಿ20 ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಭಾರತ ಈ ಪಂದ್ಯವನ್ನು 6 ರನ್​ಗಳಿಂದ ಗೆದ್ದು ಸರಣಿಯನ್ನು 4-1 ರಿಂದ ವಶಪಡಿಸಿಕೊಂಡಿದೆ. 20 ಓವರ್​ಗಳನ್ನು ಆಡಿದ ಆಸೀಸ್​ 8 ವಿಕೆಟ್​ ನಷ್ಟಕ್ಕೆ 154 ರನ್ ​ಗಳಿಸಲಷ್ಟೇ ಶಕ್ತವಾಯಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ಭಾರತ ಶ್ರೇಯಸ್​ ಅಯ್ಯರ್​ (53) ಅರ್ಧಶತಕ, ಯಶಸ್ವಿ ಜೈಸ್ವಾಲ್​ (21), ಅಕ್ಷರ್​ ಪಟೇಲ್​ (31) ಮತ್ತು ಜಿತೇಶ್​ ಶರ್ಮಾ (24) ಅವರ ಇನ್ನಿಂಗ್ಸ್​ನ ಸಹಾಯದಿಂದ ನಿಗದಿತ ಓವರ್​ ಅಂತ್ಯಕ್ಕೆ 8 ವಿಕೆಟ್​ ನಷ್ಟಕ್ಕೆ 160 ರನ್​ ಕಲೆಹಾಕಿತ್ತು. ಸರಣಿ ಸೋಲು ಕಂಡಿರುವ ವೇಡ್​ ಪಡೆಯ ಗೆಲುವಿಗೆ 161 ರನ್​ಗಳ ಅವಶ್ಯಕತೆ ಇತ್ತು.

ಈ ಗುರಿಯನ್ನು ಬೆನ್ನತ್ತಿದ ಆಸೀಸ್​ ಮೊದಲ ಓವರ್​ನಲ್ಲಿ ತನ್ನ ಬ್ಯಾಟಿಂಗ್​ ಪ್ರಾಬಲ್ಯವನ್ನು ಮೆರೆಯಿತು. ಆರ್ಶದೀಪ್​ ಸಿಂಗ್​ ಅವರ ಮೊದಲ ಓವರ್​ನಲ್ಲಿ 14 ರನ್​ ಕಬಳಿಸಿದ ಆಸೀಸ್​ ಆಟಗಾರರು ಮೇಲುಗೈ ಸಾಧಿಸಲು ಪ್ರಯತ್ನಿಸಿದರು. ಎರಡನೇ ಓವರ್​ನಲ್ಲಿ ನಿಯಂತ್ರಣ ಸಾಧಿಸಿದ ಮುಖೇಶ್​ ಕುಮಾರ್​ ನಾಲ್ಕನೇ ಓವರ್​ನಲ್ಲಿ ವಿಕೆಟ್​ ಪಡೆಯುವಲ್ಲಿ ಯಶಸ್ವಿ ಆದರು. 4 ರನ್​ ಗಳಿಸಿದ್ದ ಜೋಶ್ ಫಿಲಿಪ್ ಮುಖೇಶ್​ ದಾಳಿಗೆ ಬಲಿಯಾದರು.

5ನೇ ಓವರ್​ನಲ್ಲಿ ದಾಳಿಗೆ ಇಳಿದ ರವಿ ಬಿಷ್ಣೋಯಿ ಅಬ್ಬರಿಸಿದ್ದ ಇನ್ನೋರ್ವ ಆರಂಭಿಕ ಆಟಗಾರ ಟ್ರಾವಿಸ್ ಹೆಡ್​ (28) ಔಟ್​ ಆದರು. ನಂತರ ಬಂದ ಟ್ರಾವಿಸ್ ಹೆಡ್ (6) ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಮತ್ತೊಮ್ಮೆ ಎಡವಿದರು. ಆದರೆ ಮೂರನೇ ವಿಕೆಟ್​ಗೆ ಬಂದಿದ್ದ ಬೆನ್ ಮೆಕ್‌ಡರ್ಮಾಟ್ ಜೊತೆಗೆ ಟಿಮ್ ಡೇವಿಡ್ ಜೊತೆಯಾಟ ಬೆಳೆಸಿ ವಿಕೆಟ್​ ನಿಲ್ಲಿಸಿದರು. ಈ ಜೋಡಿ 4 ವಿಕೆಟ್​ಗೆ 47 ರನ್​ಗಳ ಪಾಲುದಾರಿಕೆ ಹಂಚಿಕೊಂಡಿತು ಇದರಿಂದಾಗಿ ಭಾರತಕ್ಕೆ ಗೆಲುವಿನ ಹಾದಿ ಕಠಿಣವಾಯಿತು. 17 ರನ್​ಗಳ ಸಾಥ್ ನೀಡಿದ್ದ ಟಿಮ್ ಡೇವಿಡ್ ಅಕ್ಷರ್​​ ಪಟೇಲ್​ ಸ್ಪಿನ್​ಗೆ ಬಲಿಯಾದರು.

ಬೆನ್ ಮೆಕ್‌ಡರ್ಮಾಟ್ (54) ಅವರ ಅರ್ಧಶತಕದ ಇನ್ನಿಂಗ್ಸ್​ ಗೆಲುವನವರೆಗೆ ಸಾಗಲಿಲ್ಲ. ಮ್ಯಾಥ್ಯೂ ಶಾರ್ಟ್ ಮತ್ತು ಮ್ಯಾಥ್ಯೂ ವೇಡ್ ಕೊನೆಯಲ್ಲಿ ಗೆಲುವಿಗಾಗಿ ಹೋರಾಟ ನಡೆಸಿದರು. ಕೊನೆಯ ಓವರ್​ಗಳಲ್ಲಿ ಗೆಲುವಿನ ಸನಿಹದಲ್ಲಿದ್ದ ಆಸೀಸ್​ಗೆ ನಾಯಕ ವೇಡ್​ ಜಯ ತಂದುಕೊಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಕಡೆ ಓವರ್​ನಲ್ಲಿ ಹುಸಿಯಾಯಿತು.

ಕೊನೆಯ ಓವರ್​ನಲ್ಲಿ ಅರ್ಶದೀಪ್​ ಮಿಂಚು: ಮೊದಲ ಮೂರು ಓವರ್​ ಮಾಡಿ ದುಬಾರಿ ಆಗಿದ್ದ ಅರ್ಶದೀಪ್​ ಕಡೆಯ ಓವರ್​ ಮಾಡಲು ಬಂದಿದ್ದರು. 6 ಬಾಲ್​ಗೆ 10 ರನ್​ನ ಅವಶ್ಯಕತೆ ಇತ್ತು. ಕ್ರೀಸ್​ನಲ್ಲಿ ಎದರಾಳಿ ನಾಯಕ ವೇಡ್​ ಇದ್ದರು. ಓವರ್​ನ ಮೊದಲೆರಡು ಬಾಲ್ ಡಾಟ್​ ಮಾಡಿದ ಅರ್ಶದೀಪ್​, ಎದುರಾಳಿಗೆ ಒತ್ತಡ ಹೆಚ್ಚಿಸಿದರು. ಇದರಿಂದ ದೊಡ್ಡ ಹೊಡೆತಕ್ಕೆ ಮುಂದಾದ ವೇಡ್​ ಮೂರನೇ ಬಾಲ್​ನಲ್ಲಿ ಕ್ಯಾಚ್​ ಕೊಟ್ಟು ಪೆವಿಲಿಯನ್​ ಹಾದಿ ಹಿಡಿದರು. ನಂತರ ನಾಥನ್ ಎಲ್ಲಿಸ್ ಮತ್ತು ಜೇಸನ್ ಬೆಹ್ರೆಂಡಾರ್ಫ್​ಗೆ ಮೂರು ಒಂದೊಂದು ಓಟವನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

ಇದರಿಂದ ಆಸ್ಟ್ರೇಲಿಯಾ 20 ಓವರ್​ಗೆ 8 ವಿಕೆಟ್​ ಕಳೆದುಕೊಂಡು 154 ರನ್​ ಗಳಿಸಿತು. ಭಾರತ 6 ರನ್​ಗಳಿಂದ ಗೆಲುವು ದಾಖಲಿಸಿತು. ಭಾರತದ ಪರ ಮುಖೇಶ್​ ಕುಮಾರ್​ 3, ಅರ್ಶದೀಪ್​ ಸಿಂಗ್​ ಮತ್ತು ರವಿ ಬಿಷ್ಣೋಯ್​ ತಲಾ ಎರಡು ವಿಕೆಟ್​ ಪಡೆದರು. ಅಕ್ಷರ್​ ಒಂದು ವಿಕೆಟ್​ ಪಡೆಯುವಲ್ಲಿ ಯಶಸ್ವಿ ಆದರು.

ಇದನ್ನೂ ಓದಿ: ಬೆಂಗಳೂರು ಟಿ20: ಅಯ್ಯರ್ ಅರ್ಧಶತಕದ ಇನ್ನಿಂಗ್ಸ್​; ಆಸೀಸ್​ಗೆ 161 ರನ್​ಗಳ ಸಾಧಾರಣ ಗುರಿ​

Last Updated : Dec 3, 2023, 10:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.