ಅಹಮದಾಬಾದ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಎಂದೇ ಬಿಂಬಿತವಾಗಿದ್ದ ಬಾರ್ಡರ್ - ಗವಾಸ್ಕರ್ ಟ್ರೋಫಿಯ ಅಂತಿಮ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿದೆ. ಕಳೆದ ಮೂರು ಪಂದ್ಯಗಳು 2.5 ದಿನದಲ್ಲಿ ಫಲಿತಾಂಶ ಕಂಡಿದ್ದವು. ಈ ಪಂದ್ಯ ಐದು ದಿನ ನಡೆದರು ಸಮಗೊಂಡಿದೆ. ಇದರಿಂದ ಸರಣಿ 2-1 ರಲ್ಲಿ ಭಾರತ ತನ್ನ ವಶಕ್ಕೆ ತೆಗೆದುಕೊಂಡಿದೆ.
-
Milestone 🚨 - Congratulations @akshar2026 who is now the fastest Indian bowler to take 50 wickets in terms of balls bowled (2205).
— BCCI (@BCCI) March 13, 2023 " class="align-text-top noRightClick twitterSection" data="
Travis Head is his 50th Test victim.#INDvAUS #TeamIndia pic.twitter.com/yAwGwVYmbo
">Milestone 🚨 - Congratulations @akshar2026 who is now the fastest Indian bowler to take 50 wickets in terms of balls bowled (2205).
— BCCI (@BCCI) March 13, 2023
Travis Head is his 50th Test victim.#INDvAUS #TeamIndia pic.twitter.com/yAwGwVYmboMilestone 🚨 - Congratulations @akshar2026 who is now the fastest Indian bowler to take 50 wickets in terms of balls bowled (2205).
— BCCI (@BCCI) March 13, 2023
Travis Head is his 50th Test victim.#INDvAUS #TeamIndia pic.twitter.com/yAwGwVYmbo
ಕೊನೆಯ ದಿನದಾಟದಲ್ಲಿ ಟ್ರಾವೆಸ್ ಹೆಡ್ ಮತ್ತು ಲಾಬುಶೇನ್ ನೆಲಕಚ್ಚಿ ಆಡಿ ಪಂದ್ಯವನ್ನು ಡ್ರಾ ಮಾಡಿದರು. ಆಸಿಸ್ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ತಮ್ಮ ಟೆಸ್ಟ್ ಶತಕಕ್ಕೆ 10 ರನ್‌ನಿಂದ ವಂಚಿತರಾದರು. ಎಡಗೈ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ ತಮ್ಮ 50 ನೇ ಟೆಸ್ಟ್ ವಿಕೆಟ್ ಪಡೆದರು. ಆಸ್ಟ್ರೇಲಿಯಾ 64 ಓವರ್‌ಗಳಲ್ಲಿ 158/2 ತಲುಪಿ, ಭಾರತಕ್ಕಿಂತ 67 ರನ್ ಮುನ್ನಡೆ ಸಾಧಿಸಿತು. ಕಳೆದ 10 ವರ್ಷಗಳಲ್ಲಿ ಭಾರತ ತವರಿನಲ್ಲಿ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸದೇ ಇರುವುದು ಇದೇ ಮೊದಲು.
ಇಂದಿನ ದಿನ ಆಸ್ಟ್ರೇಲಿಯನ್ ಆಟಗಾರರು ಡ್ರಾ ಮಾಡುವ ಚಿತ್ತದಲ್ಲೇ ಕ್ರೀಸಿಗಿಳಿದಿದ್ದರು. ಮೊದಲ ಸೆಷನ್ ಆರಂಭವಾದಾಗ ನೈಟ್ ವಾಚ್ಮೆನ್ ಆಗಿ ಬಂದಿದ್ದ ಮ್ಯಾಥ್ಯೂ ಕುಹ್ನೆಮನ್ 6 ರನ್ಗೆ ಅಶ್ವಿನ್ಗೆ ಔಟ್ ಆದರು. ನಂತರ ಬಂದ ಲಬುಶೇನ್ ಟ್ರಾವೆಸ್ ಹೆಡ್ ಜೊತೆಗೆ ಇನ್ನಿಂಗ್ಸ್ ಕಟ್ಟಿದರು. ಇಬ್ಬರು ಅಜಮಾಸು 130 ರನ್ ಗಳ ಜೊತೆಯಾಟವಾಡಿದರು.
-
Runs galore here in Ahmedabad with the final Test resulting in a Draw!
— BCCI (@BCCI) March 13, 2023 " class="align-text-top noRightClick twitterSection" data="
A series to remember for both teams 👍👍#TeamIndia | #INDvAUS pic.twitter.com/f0auEbsMP4
">Runs galore here in Ahmedabad with the final Test resulting in a Draw!
— BCCI (@BCCI) March 13, 2023
A series to remember for both teams 👍👍#TeamIndia | #INDvAUS pic.twitter.com/f0auEbsMP4Runs galore here in Ahmedabad with the final Test resulting in a Draw!
— BCCI (@BCCI) March 13, 2023
A series to remember for both teams 👍👍#TeamIndia | #INDvAUS pic.twitter.com/f0auEbsMP4
ಭೋಜನ ವಿರಾಮದ ವೇಳೆಗೆ ಆಸಿಸ್ 73ಕ್ಕೆ 1 ವಿಕೆಟ್ ಮಾತ್ರ ಕಳೆದುಕೊಂಡಿತ್ತು. ಭಾರತ ಸಾಧಿಸಿದ್ದ ಮುನ್ನಡೆಯಿಂದ ಆಸಿಸ್ 18ರನ್ಗಳ ಹಿನ್ನಡೆ ಅನುಭವಿಸಿತ್ತು. ಊಟದ ನಂತರ ಶತಕದ ಅಂಚಿನಲ್ಲಿದ್ದ ಹೆಡ್ ಅವರನ್ನು ಅಕ್ಷರ್ ಪಟೇಲ್ ಪೆವಿಲಿಯನ್ಗೆ ಅಟ್ಟಿದರು. ಈ ಮೂಲಕ ಅಕ್ಷರ್ ತವರಿನಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿದರು. ಟೀ ಸೆಷನ್ ವೇಳೆಗೆ ಭಾರತಕ್ಕಿಂತ 67 ರನ್ ಆಸ್ಟ್ರೇಲಿಯಾ ಮುನ್ನಡೆ ಸಾಧಿಸಿತ್ತು. ಪಂದ್ಯ ಫಲಿತಾಂಶ ಹಿತವಾಗುವ ಕಾರಣ ಡ್ರಾ ಎಂದು ಘೋಷಣೆ ಮಾಡಲಾಯಿತು.
ಅತೀ ವೇಗದ 50 ವಿಕೆಟ್: ಅಕ್ಷರ್ ಪಟೇಲ್ ಟೆಸ್ಟ್ನಲ್ಲಿ 2205 ಬಾಲ್ಗಳಿಂದ 50 ವಿಕೆಟ್ ಪಡೆದರು. ಅತಿ ಕಡಿಮೆ ಬಾಲ್ನಲ್ಲಿ ಈ ದಾಖಲೆ ಮಾಡಿದ ಭಾರತೀಯ ಬೌಲರ್ ಎಂಬ ಖ್ಯಾತಿ ಗಳಿಸಿದರು. ಈ ದಾಖಲೆಯಲ್ಲಿ ಜಸ್ಪಿತ್ ಬೂಮ್ರಾ (2465 ಬಾಲ್) ಅವರ ದಾಖಲೆಯನ್ನು ಮುರಿದಿದ್ದಾರೆ.
ಹೈಲೈಟ್ಸ್: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಬೃಹತ್ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಕಾಂಗರೂ ಪಡೆ ಖವಾಜಾ (180) ಮತ್ತು ಕ್ಯಾಮೆರಾನ್ ಗ್ರೀನ್ (114) ಅವರ ಶತಕದಿಂದ 480 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಭಾರತ ಗಿಲ್ 128, ವಿರಾಟ್ ಕೊಹ್ಲಿ 186 ಮತ್ತು ಅಕ್ಷರ್ ಪಟೇಲ್ 79 ರನ್ನ ಸಹಾಯದಿಂದ 571 ರನ್ ಗಳಿಸಿ, 91 ರನ್ ಮುನ್ನಡೆ ಸಾಧಿಸಿತ್ತು. ನಾಲ್ಕನೇ ದಿನದಾಟದ ಕೊನೆಯ 6 ಓವರ್ ಬಾಕಿ ಇರುವಂತೆ ಭಾರತ ಆಲ್ಔಟ್ ಆಗಿತ್ತು. ಕೊನೆಯ ದಿನವಾದ ಇಂದು ಆಸಿಸ್ ಆಟಗಾರರು ಪಂದ್ಯವನ್ನು ಡ್ರಾ ಮಾಡಿದರು.
ಸಂಕ್ಷಿಪ್ತ ಸ್ಕೋರ್‌ಗಳು: ಆಸ್ಟ್ರೇಲಿಯಾ 167.2 ಓವರ್‌ಗಳಲ್ಲಿ 480 ಮತ್ತು 64 ಓವರ್‌ಗಳಲ್ಲಿ 158/2 (ಟ್ರಾವಿಸ್ ಹೆಡ್ 90, ಮಾರ್ನಸ್ ಲಲಬುಶೇನ್ಔಟಾಗದೆ 56; ಅಕ್ಷರ್ ಪಟೇಲ್ 1/31, ರವಿಚಂದ್ರನ್ ಅಶ್ವಿನ್ 1/54) ಭಾರತವನ್ನು 178.5 ಓವರ್‌ಗಳಲ್ಲಿ 571 ರನ್ .
ಟೆಸ್ಟ್ನಲ್ಲಿ 28ನೇ ಶತಕ ದಾಖಲಿಸಿ ವಿರಾಟ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ.
ಇದನ್ನು ಓದಿ: ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಿದ ಭಾರತ