ಅಹಮದಾಬಾದ್: ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಗೆಲುವು ಸಾಧಿಸಿದ್ದು, ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಆಸಿಸ್ ವಿರುದ್ಧ ಬಾರ್ಡರ್ - ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯದ ಫಲಿತಾಂಶಕ್ಕೂ ಮುನ್ನವೇ ಕಿವೀಸ್ ವಿರುದ್ಧದ ಲಂಕಾ ಸೋಲಿನಿಂದ ಡಬ್ಲ್ಯೂಟಿಸಿ(WTC) ಫೈನಲ್ ಟಿಕೆಟ್ ಖಾತ್ರಿಯಾಗಿದೆ.
ನ್ಯೂಜಿಲೆಂಡ್ ಮತ್ತು ಲಂಕಾ ನಡುವಣ 5ನೇ ದಿನದ ಹಣಾಹಣಿ ರೋಚಕವಾಗಿ ಇಂದು ಅಂತ್ಯ ಕಂಡಿತು. ಮಳೆಯಿಂದ ಪಂದ್ಯ ತಡವಾಗಿ ಆರಂಭವಾದರೂ ಕಿವೀಸ್ ಬ್ಯಾಟರ್‌ಗಳು ಇಂದು 256 ರನ್ ಗಳಿಸಿ ಗೆಲುವಿನ ನಗೆ ಬೀರಿದರು. ಇದರಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸುವ ಲಂಕಾ ಕನಸು ಭಗ್ನವಾಯಿತು. ಇತ್ತ ಭಾರತಕ್ಕೆ ಪ್ರವೇಶ ಸಿಕ್ಕಿತು.
-
India have qualified for the World Test Championship final!
— ICC (@ICC) March 13, 2023 " class="align-text-top noRightClick twitterSection" data="
They'll take on Australia at The Oval for the #WTC23 mace!
More: https://t.co/75Ojgct97X pic.twitter.com/ghOOL4oVZB
">India have qualified for the World Test Championship final!
— ICC (@ICC) March 13, 2023
They'll take on Australia at The Oval for the #WTC23 mace!
More: https://t.co/75Ojgct97X pic.twitter.com/ghOOL4oVZBIndia have qualified for the World Test Championship final!
— ICC (@ICC) March 13, 2023
They'll take on Australia at The Oval for the #WTC23 mace!
More: https://t.co/75Ojgct97X pic.twitter.com/ghOOL4oVZB
ಇನ್ನು, ಭಾರತ-ಆಸಿಸ್ ನಡುವಣ ಅಂತಿಮ ಟೆಸ್ಟ್ ಡ್ರಾದತ್ತ ಸಾಗುತ್ತಿದೆ. ನಾಲ್ಕನೇ ದಿನದ ಕೊನೆಯ ಆಸಿಸ್ ಎರಡನೇ ಇನ್ನಿಂಗ್ಸ್ ಆರಂಭಿಸಿತ್ತು. 6 ಓವರ್ ಆಡಿದ ಆಸಿಸ್ 3 ರನ್ ಗಳಿಸಿತ್ತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 88 ರನ್ನ ಹಿನ್ನಡೆಯಲ್ಲಿತ್ತು. ನಾಲ್ಕನೇ ದಿನ ವಿರಾಟ್ ಅವರ 186 ಹಾಗೂ ಅಕ್ಷರ್ ಅಬ್ಬರದ 79 ರನ್ ಸಹಾಯದಿಂದ ತಂಡ 571 ರನ್ ಗಳಿಸಿ, 91 ರನ್ ಮುನ್ನಡೆ ಪಡೆದು ಕೊಂಡು ಆಲ್ ಔಟ್ ಆಗಿತ್ತು.
ಕೊನೆಯ ದಿನದ ಮೊದಲ ಅವಧಿಯ ಅಂತ್ಯಕ್ಕೆ ಆಸ್ಟ್ರೇಲಿಯಾ 1 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿ, 18 ರನ್ ಹಿನ್ನಡೆಯಲ್ಲಿತ್ತು. ಲಾಬುಶೇನ್ 22 ಮತ್ತು ಟ್ರಾವೆಸ್ ಹೆಡ್ 45 ರನ್ ಗಳಿಸಿದ್ದರು. ನಿನ್ನೆ ನೈಟ್ ವಾಚ್ಮೆನ್ ಆಗಿ ಕಣಕ್ಕಿಳಿದಿದ್ದ ಮ್ಯಾಥ್ಯೂ ಕುಹ್ನೆಮನ್ 6 ರನ್ ಗಳಿಸಿ ಅಶ್ವಿನ್ಗೆ ವಿಕೆಟ್ ಒಪ್ಪಿಸಿದ್ದಾರೆ.
WTCಯಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿ: ಪಂದ್ಯದ ಎರಡು ಸೆಷನ್ ಮಾತ್ರ ಬಾಕಿ ಇದ್ದು, ಭಾರತ ಒಂದು ಸೆಷನ್ ಆಡಲಿರುವ ಕಾರಣ ಪಂದ್ಯ ಡ್ರಾ ಆಗುವ ಸಾಧ್ಯತೆ ಹೆಚ್ಚಿದೆ. ಹೋಳ್ಕರ್ ಕ್ರೀಡಾಂಗಣದಲ್ಲಿ ಭಾರತವನ್ನು ಸೋಲಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್‌ಗೆ ಆಸ್ಟ್ರೇಲಿಯಾ ಪ್ರವೇಶ ಪಡೆದಿತ್ತು. ಎದುರಾಳಿ ತಂಡದ ಸ್ಥಾನಕ್ಕಾಗಿ ಭಾರತ ಮತ್ತು ಲಂಕಾ ನಡುವೆ ಪೈಪೋಟಿ ಇತ್ತು. ಭಾರತಕ್ಕೆ ಅಂತಿಮ ಪಂದ್ಯ ಗೆಲ್ಲಲೇ ಬೇಕಿತ್ತು. ಇಲ್ಲವೇ ನ್ಯೂಜಿಲ್ಯಾಂಡ್ನಲ್ಲಿ ಲಂಕಾ ಸೋಲು ಕಾಣಬೇಕಿತ್ತು. ಆದರೆ, ವಿಲಿಯಮ್ಸನ್ ಪಡೆ ತವರಿನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಭಾರತದ ಪಂದ್ಯದ ರಿಸಲ್ಟ್ ಮುನ್ನವೇ ಫೈನಲ್ ಪಕ್ಕಾ ಆಗಿದ್ದು, ಜೂನ್ 7 ರಂದು ಓವಲ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ.
ಈವರೆಗೆ ಪಂದ್ಯ..: ಶುಭಮನ್ 128, ವಿರಾಟ್ ಕೊಹ್ಲಿ 186 ಮತ್ತು ಅಕ್ಷರ್ ಪಟೇಲ್ 73 ರನ್ ಸಹಾಯದಿಂದ ಭಾರತ ಪ್ರಥಮ ಇನ್ನಿಂಗ್ಸ್ನಲ್ಲಿ 571 ರನ್ ದಾಖಲಿಸಿದೆ. ಆಸಿಸ್ ಪರ ಮೊದಲ ಇನ್ನಿಂಗ್ಸ್ನಲ್ಲಿ ಉಸ್ಮಾನ್ ಖವಾಜಾ 180 ಮತ್ತು ಕ್ಯಾಮರಾನ್ ಗ್ರೀನ್ 114 ರನ್ ಸಹಾಯದಿಂದ 480 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಕಾಂಗರೂ ಪಡೆ ಊಟದ ನಂತರ 9 ರನ್ ಲೀಡ್ ಪಡೆದುಕೊಂಡಿದೆ.
ಇದನ್ನೂ ಓದಿ: ಅಹಮದಾಬಾದ್ ಟೆಸ್ಟ್: ಆಸಿಸ್ ವಿರುದ್ಧ 'ವಿರಾಟ' ರನ್, ಭಾರತಕ್ಕೆ 88 ಮುನ್ನಡೆ