ರಾಯಪುರ (ಛತ್ತೀಸ್‌ಗಢ): ವಿಶ್ವಕಪ್ ಟ್ರೋಫಿ ಗೆದ್ದು ಬೀಗಿದ ಆಸ್ಟ್ರೇಲಿಯಾ ಪಡೆ ಐಪಿಎಲ್ ಸ್ಟಾರ್ ಆಟಗಾರರ ತಂಡದ ಮುಂದೆ ಮಂಡಿಯೂರಿದ್ದು, ಒಂದು ಪಂದ್ಯ ಬಾಕಿ ಇರುವಂತೆ ಸರಣಿಯನ್ನು 3-1ರಿಂದ ಕಳೆದುಕೊಂಡಿದೆ. ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯವನ್ನು ಭಾರತ 20 ರನ್ಗಳಿಂದ ಗೆದ್ದು ಸರಣಿ ತನ್ನದಾಗಿಸಿಕೊಂಡಿದೆ.
-
A special win in Raipur 👏#TeamIndia now has the most wins in Men's T20Is 🙌#INDvAUS | @IDFCFIRSTBank pic.twitter.com/edxRgJ38EG
— BCCI (@BCCI) December 1, 2023 " class="align-text-top noRightClick twitterSection" data="
">A special win in Raipur 👏#TeamIndia now has the most wins in Men's T20Is 🙌#INDvAUS | @IDFCFIRSTBank pic.twitter.com/edxRgJ38EG
— BCCI (@BCCI) December 1, 2023A special win in Raipur 👏#TeamIndia now has the most wins in Men's T20Is 🙌#INDvAUS | @IDFCFIRSTBank pic.twitter.com/edxRgJ38EG
— BCCI (@BCCI) December 1, 2023
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ರಿಂಕು ಸಿಂಗ್ (46), ಯಶಸ್ವಿ ಜೈಸ್ವಾಲ್ (37), ಜಿತೇಶ್ ಶರ್ಮಾ (35) ಮತ್ತು ರುತುರಾಜ್ ಗಾಯಕ್ವಾಡ್ (32) ಅವರ ಬ್ಯಾಟಿಂಗ್ ನೆರವಿನಿಂದ ನಿಗದಿತ ಓವರ್ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 175 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತು.
ಗುರಿ ಬೆನ್ನಟ್ಟಿದ ಆಸೀಸ್ ಪಡೆ ಉತ್ತಮ ಆರಂಭವನ್ನೇನೋ ಪಡೆಯಿತು. ಆದರೆ ಭಾರತೀಯ ಸ್ಪಿನ್ ದಾಳಿಯ ಮುಂದೆ ಮಂಕಾಯಿತು. ನಾಯಕ ಸೂರ್ಯಕುಮಾರ್ ಯಾದವ್ ಪವರ್ ಪ್ಲೇ ವೇಳೆಯೇ ಸ್ಪಿನ್ನರ್ಗಳಿಗೆ ಬೌಲಿಂಗ್ ನೀಡಿ ಪ್ರಯೋಗಕ್ಕೆ ಮುಂದಾದರು ಮತ್ತು ಯಶಸ್ಸು ಕಂಡರು. 4ನೇ ಓವರ್ಗೆ ದಾಳಿಗೆ ಬಂದ ರವಿ ಬಿಷ್ಣೋಯ್ ಆರಂಭಿಕ ಜೋಶ್ ಫಿಲಿಪ್ ವಿಕೆಟ್ ಉರಿಳಿಸಿದರು. ಅಲ್ಲದೇ ಆ ಓವರ್ನಲ್ಲಿ ಕೇವಲ 2 ರನ್ ಬಿಟ್ಟುಕೊಟ್ಟು ನಿಯಂತ್ರಣ ಸಾಧಿಸಿದರು. 5ನೇ ಓವರ್ ಮಾಡಿದ ಅಕ್ಷರ್ 3 ರನ್ ಕೊಟ್ಟರೆ, ಪವರ್ ಪ್ಲೇಯ ಕೊನೆ ಓವರ್ ಮಾಡಿದ ರವಿ 7 ರನ್ ಕೊಟ್ಟು ಬಿರುಸಿನಿಂದ ಆಡುತ್ತಿದ್ದ ಆಸೀಸ್ ವೇಗಕ್ಕೆ ಕಡಿವಾಣ ಹಾಕಿದರು.
-
For his economical match-winning three-wicket haul, Axar Patel is adjudged the Player of the Match 👏👏
— BCCI (@BCCI) December 1, 2023 " class="align-text-top noRightClick twitterSection" data="
Scorecard ▶️ https://t.co/iGmZmBsSDt#TeamIndia | #INDvAUS | @IDFCFIRSTBank pic.twitter.com/jOJ2uuIByu
">For his economical match-winning three-wicket haul, Axar Patel is adjudged the Player of the Match 👏👏
— BCCI (@BCCI) December 1, 2023
Scorecard ▶️ https://t.co/iGmZmBsSDt#TeamIndia | #INDvAUS | @IDFCFIRSTBank pic.twitter.com/jOJ2uuIByuFor his economical match-winning three-wicket haul, Axar Patel is adjudged the Player of the Match 👏👏
— BCCI (@BCCI) December 1, 2023
Scorecard ▶️ https://t.co/iGmZmBsSDt#TeamIndia | #INDvAUS | @IDFCFIRSTBank pic.twitter.com/jOJ2uuIByu
ಟ್ರಾವಿಸ್ ಹೆಡ್ (31), ಬೆನ್ ಮೆಕ್‌ಡರ್ಮಾಟ್ (19) ಮತ್ತು ಆರನ್ ಹಾರ್ಡಿ (8) ವಿಕೆಟ್ನ್ನು ಅಕ್ಷರ್ ಪಡೆದರು. ಮಧ್ಯಮ ಕ್ರಮಾಂಕದ ಟಿಮ್ ಡೇವಿಡ್ (19) ಮತ್ತು ಮ್ಯಾಥ್ಯೂ ಶಾರ್ಟ್ (22) ಅವರನ್ನು ದೀಪಕ್ ಚಾಹರ್ ಕಿತ್ತರು. ಬೆನ್ ದ್ವಾರ್ಶುಯಿಸ್ ವಿಕೆಟ್ ಅವೇಶ್ ಖಾನ್ ಪಾಲಾಯಿತು. ನಾಯಕ ಮ್ಯಾಥ್ಯೂ ವೇಡ್ ಅವರ 36 ರನ್ಗಳ ಪರಿಶ್ರಮ ಜಯಕ್ಕೆ ಸಹಾಯ ಮಾಡಲಿಲ್ಲ.
ಭಾರತದ ಪರ ಮೂರು ವಿಕೆಟ್ ಕಿತ್ತು ಆಸೀಸ್ಗೆ ಒತ್ತಡ ಉಂಟುಮಾಡಿದ ಅಕ್ಷರ್ ಪಟೇಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಡಿಸೆಂಬರ್ 3ರಂದು ಬೆಂಗಳೂರಿನಲ್ಲಿ ಕೊನೆಯ ಔಪಚಾರಿಕ ಪಂದ್ಯ ನಡೆಯಲಿದೆ.
ಇದನ್ನೂ ಓದಿ: "ಆ ಫೋಟೋದಲ್ಲಿ ಯಾವುದೇ ಅಗೌರವ ಇಲ್ಲ" ವಿಶ್ವಕಪ್ ಮೇಲೆ ಕಾಲಿಟ್ಟ ನಡೆ ಸಮರ್ಥಿಸಿಕೊಂಡ ಮಿಚೆಲ್ ಮಾರ್ಷ್