ರಾಯಪುರ (ಛತ್ತೀಸ್‌ಗಢ): ರಿಂಕು ಸಿಂಗ್, ಯಶಸ್ವಿ ಜೈಸ್ವಾಲ್, ಜಿತೇಶ್ ಶರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ಅವರ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾದ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 174 ರನ್ಗಳ ಗುರಿ ನೀಡಿದೆ. ಇಲ್ಲಿನ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಆಸೀಸ್ ಬೌಲಿಂಗ್ ಮಾಡುವ ನಿರ್ಣಯ ಮಾಡಿತು. ಈಗ ಸರಣಿ ಸಮಬಲ ಸಾಧಿಸಲು ಹೆಡ್ ಪಡೆ 175 ರನ್ ಕಲೆಹಾಕಬೇಕಿದೆ.
ಕಳೆದ ಮೂರು ಪಂದ್ಯಗಳಲ್ಲಿ ಆರಂಭ ಮಾಡಿದಂತೆ ಯಶಸ್ವಿ ಜೈಸ್ವಾಲ್ ಇಂದಿನ ಇನ್ನಿಂಗ್ಸ್ನ್ನು ಕಟ್ಟಿದ್ದರು. ಮೊದಲ ಓವರ್ ಮೇಡನ್ ಮಾಡಿದ ಆಸ್ಟ್ರೇಲಿಯಾ ಬಿಗು ಬೌಲಿಂಗ್ ದಾಳಿ ಮಾಡುವ ಸೂಚನೆ ನೀಡಿತು. ಆದರೆ ಎರಡನೇ ಓವರ್ನಿಂದ ಜೈಸ್ವಾಲ್ ತಮ್ಮ ಲಯಕ್ಕೆ ಮರಳಿದರು. ಮೊದಲ ಪವರ್ ಪ್ಲೇ ಅಂತ್ಯಕ್ಕೆ ಹೆಚ್ಚಿನ ಬಾಲ್ ಎದುರಿಸಿದ್ದ ಯಶಸ್ವಿ ಜೈಸ್ವಾಲ್ 28 ಬಾಲ್ನಲ್ಲಿ 6 ಬೌಂಡರಿ ಮತ್ತು 1 ಸಿಕ್ಸ್ನ ಸಹಾಯದಿಂದ 37 ರನ್ ಕಲೆಹಾಕಿ ಔಟ್ ಆದರು. 6 ಓವರ್ ಅಂತ್ಯಕ್ಕೆ ಟೀಮ್ ಇಂಡಿಯಾ 50 ರನ್ ಕಲೆಹಾಕಿತ್ತು.
-
Innings break!
— BCCI (@BCCI) December 1, 2023 " class="align-text-top noRightClick twitterSection" data="
Rinku Singh top-scores with 46 as #TeamIndia set a 🎯 of 175 👌
Second innings coming up shortly ⏳
Scorecard ▶️ https://t.co/iGmZmBsSDt#TeamIndia | #INDvAUS | @IDFCFIRSTBank pic.twitter.com/4q17vMLbBi
">Innings break!
— BCCI (@BCCI) December 1, 2023
Rinku Singh top-scores with 46 as #TeamIndia set a 🎯 of 175 👌
Second innings coming up shortly ⏳
Scorecard ▶️ https://t.co/iGmZmBsSDt#TeamIndia | #INDvAUS | @IDFCFIRSTBank pic.twitter.com/4q17vMLbBiInnings break!
— BCCI (@BCCI) December 1, 2023
Rinku Singh top-scores with 46 as #TeamIndia set a 🎯 of 175 👌
Second innings coming up shortly ⏳
Scorecard ▶️ https://t.co/iGmZmBsSDt#TeamIndia | #INDvAUS | @IDFCFIRSTBank pic.twitter.com/4q17vMLbBi
ಅಯ್ಯರ್, ಸೂರ್ಯ ವಿಫಲ: ಮೊದಲ ವಿಕೆಟ್ ಉರುಳಿದ ಬೆನ್ನಲ್ಲೇ ಮತ್ತಿಬ್ಬರು ಬ್ಯಾಟರ್ಗಳು ರನ್ ಗಳಿಸದೇ ಪೆವಿಲಿಯನ್ ಹಾದಿ ಹಿಡಿದರು. ನಾಲ್ಕನೇ ಪಂದ್ಯಕ್ಕೆ ಉಪನಾಯಕನಾಗಿ ತಂಡ ಸೇರಿಕೊಂಡು ಮೂನೇ ಸ್ಥಾನದಲ್ಲಿ ಬ್ಯಾಟಿಂಗ್ಗೆ ಇಳಿದ ಶ್ರೇಯಸ್ ಅಯ್ಯರ್ 7 ಬಾಲ್ ಎದುರಿಸಿ 8 ರನ್ ಹಾಗೇ ನಾಯಕ ಸೂರ್ಯಕುಮಾರ್ ಯಾದವ್ 2ಬಾಲ್ಗೆ 1 ರನ್ ಗಳಿಸಿ ಔಟ್ ಆದರು. ಇಬ್ಬರು ನಿರೀಕ್ಷೆ ಹುಸಿ ಮಾಡಿದರು. 8ನೇ ಓವರ್ಗೆ 63ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ರಿಂಕು - ಜಿತೇಶ್ ಆಸರೆ: ಕೆಳ ಕ್ರಮಾಂಕದಲ್ಲಿ ಕಳೆದ ಕೆಲ ಪಂದ್ಯಗಳಲ್ಲಿ ತಂಡಕ್ಕೆ ಆಸರೆ ಆಗುತ್ತಿರುವ ರಿಂಕು ಸಿಂಗ್ ಇಂದು ಸಹ ನೆರವಾದರು. 4ನೇ ವಿಕೆಟ್ಗೆ ಗಾಯಕ್ವಾಡ್ ಜೊತೆ ಸೇರಿಕೊಂಡು ಇನ್ನಿಂಗ್ಸ್ ಬೆಳೆಸಿದ ಅವರು, 48 ರನ್ಗಳ ಪಾಲುದಾರಿಕೆ ಮಾಡಿದರು. ವಿಕೆಟ್ ಪತನದ ನಡುವೆ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ ರುತುರಾಜ್ ಗಾಯಕ್ವಾಡ್ 32 ಗಳಿಸಿ ಔಟ್ ಆದರು.
ಗಾಯಕ್ವಾಡ್ ವಿಕೆಟ್ ನಂತರ ಜಿತೇಶ್ ಶರ್ಮಾ ಮತ್ತು ರಿಂಕು ಸಿಂಗ್ 56 ರನ್ಗಳ ಜೊತೆಯಾಟ ತಂಡದ ಮೊತ್ತವನ್ನು 150ರ ಗಡಿ ದಾಟಿಸಿತು. 19 ಬಾಲ್ ಆಡಿದ ಜಿತೇಶ್ 3ಸಿಕ್ಸ್ ಮತ್ತು 1 ಬೌಂಡರಿಯ ಸಹಾಯದಿಂದ ವೇಗವಾಗಿ 35 ರನ್ ಕಲೆಹಾಕಿದರೆ, ರಿಂಕು ಸಿಂಗ್ 29 ಬಾಲ್ನಲ್ಲಿ 4 ಬೌಂಡರಿ, 2 ಸಿಕ್ಸ್ನಿಂದ 46 ರನ್ ಗಳಿಸಿದ್ದರು.
ಕೊನೆಯಲ್ಲಿ ಅಕ್ಷರ್ ಪಟೇಲ್ ಮತ್ತು ದೀಪಕ್ ಚಹಾರ್ ಶೂನ್ಯಕ್ಕೆ ಔಟ್ ಆಗಿ ತಂಡದ ಮೊತ್ತಕ್ಕೆ ಆಸರೆ ಆಗಲಿಲ್ಲ. ರವಿ ಬಿಷ್ಣೋಯ್ ಮತ್ತು ಅವೇಶ್ ಖಾನ್ ಹೋರಾಟವೂ ರನ್ಗೆ ಕೊಡುಗೆ ಆಗಲಿಲ್ಲ. ಇದರಿಂದ 20 ಓವರ್ ಅಂತ್ಯಕ್ಕೆ ಭಾರತ 9 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿತು. ಆಸೀಸ್ ಪರ ಬೆನ್ ದ್ವಾರ್ಶುಯಿಸ್ 3, ಜೇಸನ್ ಬೆಹ್ರೆನ್‌ಡಾರ್ಫ್ ಮತ್ತು ತನ್ವೀರ್ ಸಂಘ ತಲಾ 2 ವಿಕೆಟ್ ಪಡೆದರು.
ಇದನ್ನೂ ಓದಿ:ಕ್ರೀಡಾಂಗಣದ 3 ಕೋಟಿ ವಿದ್ಯುತ್ ಬಿಲ್ ಬಾಕಿ, ಆಸೀಸ್ - ಭಾರತ ಪಂದ್ಯಕ್ಕೆ ಪವರ್ ಕಟ್