ಇಂದೋರ್ (ಮಧ್ಯಪ್ರದೇಶ): ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿದೆ. ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ರೋಹಿತ್ ಶರ್ಮಾ ಪಡೆ ಕೇವಲ 163 ರನ್ಗಳಿಗೆ ಆಲೌಟ್ ಆಗಿದೆ. ಆಸೀಸ್ ತಂಡದ ಗೆಲುವಿಗೆ 76 ರನ್ಗಳ ಗುರಿ ಇದೆ.
ಇಲ್ಲಿನ ಹೋಳ್ಕರ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ನಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 109 ರನ್ಗಳಿಗೆ ಸರ್ವಪತನ ಕಂಡಿತ್ತು. ಮತ್ತೊಂದೆಡೆ, ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ 197 ರನ್ಗಳನ್ನು ಪೇರಿಸಿತ್ತು. ಈಗ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿ 163 ರನ್ಗಳಿಗೆ ಆಲೌಟ್ ಆಗಿ, ಎದುರಾಳಿ ತಂಡಕ್ಕೆ ಸುಲಭ ಟಾರ್ಗೆಟ್ ನೀಡಿದೆ.
-
Stumps on day two 🏏
— ICC (@ICC) March 2, 2023 " class="align-text-top noRightClick twitterSection" data="
Nathan Lyon ran through India's batting lineup and registered a brilliant eight-wicket haul 👌#WTC23 | #INDvAUS | 📝: https://t.co/FFaPxt9fIY pic.twitter.com/PCAUqw8HVS
">Stumps on day two 🏏
— ICC (@ICC) March 2, 2023
Nathan Lyon ran through India's batting lineup and registered a brilliant eight-wicket haul 👌#WTC23 | #INDvAUS | 📝: https://t.co/FFaPxt9fIY pic.twitter.com/PCAUqw8HVSStumps on day two 🏏
— ICC (@ICC) March 2, 2023
Nathan Lyon ran through India's batting lineup and registered a brilliant eight-wicket haul 👌#WTC23 | #INDvAUS | 📝: https://t.co/FFaPxt9fIY pic.twitter.com/PCAUqw8HVS
4 ಪಂದ್ಯಗಳ ಸರಣಿಯಲ್ಲಿ ರೋಹಿತ್ ಪಡೆ ಮೊದಲೆರಡು ಪಂದ್ಯಗಳನ್ನು ಗೆದ್ದು, 2-0 ಅಂತರದಿಂದ ಮುನ್ನಡೆಯಲ್ಲಿದೆ. ಮೂರನೇ ಪಂದ್ಯದ ಮೊದಲ ದಿನವೇ ಅಲ್ಪ ಮೊತ್ತಕ್ಕೆ ಭಾರತ ತಂಡವನ್ನು ಆಸ್ಟ್ರೇಲಿಯಾ ಸ್ಪಿನ್ ಖೆಡ್ಡಾಕ್ಕೆ ಕೆಡವಿತ್ತು. ಎರಡನೇ ದಿನದಲ್ಲಿ ಆಸ್ಟ್ರೇಲಿಯಾ ಕೂಡ ಬೇಗನೇ ಸರ್ವಪತನ ಕಂಡಿತ್ತು. 47 ರನ್ಗಳ ಮುನ್ನಡೆಯೊಂದಿಗೆ ದಿನದಾಟ ಆರಂಭಿಸಿದ ಆಸೀಸ್ ಪಡೆ ಕೊನೆಯ ಆರು ವಿಕೆಟ್ಗಳನ್ನು ಕೇವಲ 11 ರನ್ಗಳಿಗೆ ಕಳೆದುಕೊಂಡು ದಿಢೀರ್ ಕುಸಿತ ಅನುಭವಿಸಿತ್ತು. ಇದರಿಂದ ತಂಡ ಮೊದಲ ಇನಿಂಗ್ಸ್ನಲ್ಲಿ 197 ರನ್ ಗಳಿಸಲು ಮಾತ್ರ ಸಾಧ್ಯವಾಗಿತ್ತು. ರವೀಂದ್ರ ಜಡೇಜಾ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ರವಿಚಂದ್ರನ್ ಅಶ್ವಿನ್ ಹಾಗೂ ಉಮೇಶ್ ಯಾದವ್ ತಲಾ ಮೂರು ವಿಕೆಟ್ಗಳನ್ನು ಪಡೆದು ಕಾಂಗರೂ ಪಡೆ ಕಾಡಿದ್ದರು.
ಪೂಜಾರ ಅರ್ಧಶತಕದ ಆಸರೆ: 88 ರನ್ಗಳ ಹಿನ್ನಡೆಯೊಂದಿಗೆ ತನ್ನ ಎರಡನೇ ಇನ್ನಿಂಗ್ಸ್ಅನ್ನು ಟೀಂ ಇಂಡಿಯಾದ ಆಸೀಸ್ ಬೌಲರ್ಗಳ ದಾಳಿ ತತ್ತರಿಸಿತು. ಆದರೆ, ಚೇತೇಶ್ವರ ಪೂಜಾರ 142 ಎಸೆತಗಳನ್ನು ಎದುರಿಸಿ, ಐದು ಬೌಂಡರಿಗಳು ಮತ್ತು ಒಂದು ಸಿಕ್ಸರ್ನೊಂದಿಗೆ 59 ರನ್ಗಳನ್ನು ಕಲೆ ಹಾಕಿ ತಂಡಕ್ಕೆ ಆಸರೆಯಾದರು. ಅಲ್ಲದೇ, ತಂಡದ ಮೊತ್ತ 150ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
-
Cheteshwar Pujara's gritty knock has kept India in the game 👏 #WTC23 | #INDvAUS | 📝: https://t.co/FFaPxt9fIY pic.twitter.com/s1hoOn5YtR
— ICC (@ICC) March 2, 2023 " class="align-text-top noRightClick twitterSection" data="
">Cheteshwar Pujara's gritty knock has kept India in the game 👏 #WTC23 | #INDvAUS | 📝: https://t.co/FFaPxt9fIY pic.twitter.com/s1hoOn5YtR
— ICC (@ICC) March 2, 2023Cheteshwar Pujara's gritty knock has kept India in the game 👏 #WTC23 | #INDvAUS | 📝: https://t.co/FFaPxt9fIY pic.twitter.com/s1hoOn5YtR
— ICC (@ICC) March 2, 2023
ಇದಕ್ಕೂ ಮುನ್ನ ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುವಲ್ಲಿ ಎಡವಿದರು. ತಂಡದ ಮೊತ್ತ 15 ರನ್ಗಳು ಆಗುವಷ್ಟರಲ್ಲಿ ಗಿಲ್ ನಾಥನ್ ಲಿಯಾನ್ ಬೌಲಿಂಗ್ನಲ್ಲಿ ಬೋಲ್ಡ್ ಆದರು. ಇದರ ನಂತರದಲ್ಲೇ ರೋಹಿತ್ ಅವರನ್ನೂ ನಾಥನ್ ಎಲ್ಬಿ ಬಲೆಗೆ ಕಡೆವಿದರು.
ಮೂರನೇ ಕ್ರಮಾಂಕದಲ್ಲಿ ಬಂದ ಚೇತೇಶ್ವರ ಪೂಜಾರ ಕೊನೆಯವರೆಗೆ ವಿರೋಚಿತ ಆಟ ಪ್ರದರ್ಶಿಸಿದರು. ವಿರಾಟ್ ಕೊಹ್ಲಿ (13), ರವೀಂದ್ರ ಜಡೇಜಾ (7) ಬೇಗನೇ ಔಟಾಗಿ ನಿರಾಶೆ ಮೂಡಿಸಿದರು. ಚೇತೇಶ್ವರ ಪೂಜಾರ ಜೊತೆಗೂಡಿದ ಶ್ರೇಯಸ್ ಅಯ್ಯರ್ (26) ತಂಡಕ್ಕೆ ಚೇತರಿಕೆಯ ನೀಡುವ ಮುನ್ಸೂಚನೆ ನೀಡಿದರು. ಆದರೆ, ತಂಡದ ಮೊತ್ತ 113 ರನ್ಗಳು ಆಗಿದ್ದಾಗ ಶ್ರೇಯಸ್ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಶ್ರಿಕರ್ ಭರತ್ (3), ಆರ್.ಅಶ್ವಿನ್ (16), ಅಕ್ಷರ್ ಪಟೇಲ್ (15 ಅಜೇಯ) ಅವರಿಂದ ಅಲ್ಪ ರನ್ ಕಲೆ ಹಾಕಲು ಮಾತ್ರ ಸಾಧ್ಯವಾಯಿತು. ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಶೂನ್ಯಕ್ಕೆ ಔಟಾದರು.
8 ವಿಕೆಟ್ ಕಬಳಿಸಿದ ನಾಥನ್ ಲಿಯಾನ್: ಆಸ್ಟ್ರೇಲಿಯಾ ತಂಡದ ನಾಥನ್ ಲಿಯಾನ್ ಪರ ಎಂಟು ವಿಕೆಟ್ ಕಬಳಿಸಿ, ಟೀಂ ಇಂಡಿಯಾ ತಂಡವನ್ನು ಕಾಡಿದರು. 23.3 ಓವರ್ಗಳನ್ನು ಎಸೆತ ನಾಥನ್ ಕೇವಲ 64 ರನ್ಗಳನ್ನು ನೀಡಿದರು. ಮಿಚೆಲ್ ಸ್ಟಾರ್ಕ್ ಹಾಗೂ ಮ್ಯಾಥ್ಯೂ ಕುಹ್ನೆಮನ್ ತಲಾ ಒಂದು ವಿಕೆಟ್ ಪಡೆದರು. ಇನ್ನು, ನಾಳೆ ಬೆಳಗ್ಗೆ ಎಂದರೆ ಪಂದ್ಯದ ಮೂರನೇ ದಿನ ಆಸೀಸ್ ತಂಡ ತನ್ನ ಎರಡನೇ ಇನ್ನಿಂಗ್ ಆರಂಭಿಸಲಿದೆ.
ಇದನ್ನೂ ಓದಿ: ಮೂರನೇ ಟೆಸ್ಟ್: 197 ರನ್ಗೆ ಆಸ್ಟ್ರೇಲಿಯಾ ಔಟ್, ಭಾರತಕ್ಕೆ ಮತ್ತೆ ಸ್ಪಿನ್ ಕಾಟ