ETV Bharat / sports

ವಿರಾಟ್​, ಸೂರ್ಯಕುಮಾರ್ ಹೋರಾಟಕ್ಕೆ ಒಲಿದ ಸರಣಿ.. ಭಾರತಕ್ಕೆ 6 ವಿಕೆಟ್​ ಜಯ - ಭಾರತ ಆಸ್ಟ್ರೇಲಿಯಾ ಹೈದರಾಬಾದ್​ ಪಂದ್ಯ

ಸರಣಿ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 186 ರನ್​ಗಳ ಸವಾಲಿನ ಮೊತ್ತವನ್ನು ಭಾರತ, ವಿರಾಟ್​ ಕೊಹ್ಲಿ ಮತ್ತು ಸೂರ್ಯಕುಮಾರ್​ ಯಾದವ್ ಅರ್ಧಶತಕದ ಹೋರಾಟದಿಂದ ಗೆಲುವು ಸಾಧಿಸಿ ಸರಣಿಯನ್ನು 2-1 ರಲ್ಲಿ ಜಯಿಸಿತು.

india-vs-australia-3rd-t20-match
ಭಾರತದ ಗೆಲುವಿಗೆ 187 ರನ್​ ಗುರಿ
author img

By

Published : Sep 25, 2022, 9:04 PM IST

Updated : Sep 25, 2022, 11:00 PM IST

ಹೈದರಾಬಾದ್​: ಸರಣಿ ನಿರ್ಣಾಯಕ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಮತ್ತು ಸೂರ್ಯಕುಮಾರ್​ ಯಾದವ್​ ಹೋರಾಟದಿಂದ ಆಸ್ಟ್ರೇಲಿಯಾ ವಿರುದ್ಧದ 3ನೇ, ಅಂತಿಮ ಟಿ20 ಪಂದ್ಯದಲ್ಲಿ ಭಾರತ 6 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿತು. ಸರಣಿಯನ್ನು 2-1 ಅಂತರದಲ್ಲಿ ಕೈ ವಶ ಮಾಡಿಕೊಂಡಿತು.

ಆಸ್ಟ್ರೇಲಿಯಾ ನೀಡಿದ 186 ರನ್​ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಭಾರತ ಕೆಎಲ್​ ರಾಹುಲ್​ ಮತ್ತು ನಾಯಕ ರೋಹಿತ್​ ಶರ್ಮಾರನ್ನು ಬೇಗನೆ ಕಳೆದುಕೊಂಡಿತು. ಬಳಿಕ ಒಂದಾದ ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ಮತ್ತು ಸೂರ್ಯಕುಮಾರ್​ ಯಾದವ್​ ಗೆಲುವಿನ ಇನಿಂಗ್ಸ್​ ಕಟ್ಟಿದರು.

ಸೂರ್ಯ, ವಿರಾಟ್​ ಅರ್ಧಶತಕ: ಆಸ್ಟ್ರೇಲಿಯಾ ಬೌಲರ್​ಗಳ ಬೆವರಿಳಿಸಿದ ಇಬ್ಬರು ಆಟಗಾರರು 103 ರನ್​ಗಳ ಜೊತೆಯಾಟವಾಡಿದರು. ಕಳೆದೆರಡು ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲವಾಗಿದ್ದ ವಿರಾಟ್​ ಕೊಹ್ಲಿ ಮಹತ್ವದ ಪಂದ್ಯದಲ್ಲಿ ಭರ್ಜರಿ ಬ್ಯಾಟ್​ ಬೀಸಿ 33 ನೇ ಅರ್ಧಶತಕ ಸಿಡಿಸಿದರು. 4 ಸಿಕ್ಸರ್​, 3 ಬೌಂಡರಿ ಸಮೇತ ಕೊಹ್ಲಿ 63 ರನ್​ ಗಳಿಸಿದರು.

ಭರ್ಜರಿ ಫಾರ್ಮ್​ನಲ್ಲಿರುವ ಸೂರ್ಯಕುಮಾರ್​ ಯಾದವ್​ ಆಸ್ಟ್ರೇಲಿಯಾ ಬೌಲರ್​ಗಳ ಬೆಂಡೆತ್ತಿದರು. 5 ಬೌಂಡರಿ, 5 ಸಿಕ್ಸರ್​ ಸಮೇತ 69 ರನ್​ ಗಳಿಸಿದರು. ಸೂರ್ಯಕುಮಾರ್​ ಔಟಾದ ಬಳಿಕ ಕೊನೆಯಲ್ಲಿ ಸಿಡಿದ ಹಾರ್ದಿಕ್​ ಪಾಂಡ್ಯಾ 25 ರನ್​ ಗಳಿಸಿ ತಂಡವನ್ನು ಗೆಲ್ಲಿಸಿದರು.

ವಿರಾಟ್​ ಕೊಹ್ಲಿ ಮೀರಿದ ರೋಹಿತ್​: ಇನ್ನು ಆಸೀಸ್​ ವಿರುದ್ಧದ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಸರಣಿಯನ್ನು 2-1 ರಲ್ಲಿ ಜಯಿಸಿದರೆ, ನಾಯಕ ರೋಹಿತ್​ ಶರ್ಮಾ ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಮೀರಿದರು. ನಾಯಕನಾಗಿ ರೋಹಿತ್​ ಶಮಾ 33 ಗೆಲುವು ಸಾಧಿಸಿದರೆ, ವಿರಾಟ್​ ಕೊಹ್ಲಿ 32 ಪಂದ್ಯಗಳಲ್ಲಿ ಗೆದ್ದಿದ್ದರು. ಭಾರತ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್​ ದೋನಿ 42 ಪಂದ್ಯಗಳಲ್ಲಿ ಗೆದ್ದು ಮೊದಲ ಸ್ಥಾನದಲ್ಲಿದ್ದಾರೆ. ಆಸೀಸ್​ ಪರವಾಗಿ ಡೇನಿಯಲ್​ ಸ್ಯಾಮ್ಸ್​ 2, ಜೋಶ್​ ಹೇಜಲ್​ವುಡ್​, ಪ್ಯಾಟ್​ ಕಮಿನ್ಸ್​ ತಲಾ 1 ವಿಕೆಟ್​ ಪಡೆದರು.

ಆಸ್ಟ್ರೇಲಿಯಾ ಇನಿಂಗ್ಸ್: ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಆಸೀಸ್​ ಪಡೆ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 186 ರನ್​ಗಳ ಸವಾಲಿನ ಮೊತ್ತ ಗಳಿಸಿತ್ತು. ಅಬ್ಬರದ ಬ್ಯಾಟಿಂಗ್ ಮಾಡಿದ ಆಲ್​ರೌಂಡರ್​ ಕ್ಯಾಮರೂನ್​ ಗ್ರೀನ್​​ 21 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್​ ಸಮೇತ 52 ರನ್​ ಗಳಿಸಿದರು. ನಾಯಕ ಆ್ಯರೋನ್​ ಫಿಂಚ್​, ಸ್ಟೀವ್​ ಸ್ಮಿತ್​, ಗ್ಲೆನ್​ ಮ್ಯಾಕ್ಸ್​ವೆಲ್​ ಮತ್ತೊಮ್ಮೆ ವೈಫಲ್ಯ ಕಂಡು ಎರಡಂಕಿ ಮೊತ್ತ ಕೂಡ ದಾಟಲಿಲ್ಲ.

ಮಧ್ಯಮ ಕ್ರಮಾಂಕದಲ್ಲಿ ಜೋಶ್​ ಇಂಗ್ಲಿಸ್​ 24 ರನ್​ ಬಾರಿಸಿದರೆ, ಕಳೆದೆರಡು ಪಂದ್ಯಗಳಲ್ಲಿ ಮಿಂಚಿದ್ದ ಮ್ಯಾಥ್ಯೂ ವೇಡ್​ 1 ರನ್​ಗೆ ಸುಸ್ತಾದರು. ಕೊನೆಯಲ್ಲಿ ಸಿಡಿದ ಟಿಮ್​ ಡೇವಿಡ್​ 54 ರನ್​ ಗಳಿಸಿದರು. 2 ಬೌಂಡರಿ, 4 ಸಿಕ್ಸರ್​ ಸಿಡಿಸಿದರು. ಆಲ್​ರೌಂಡರ್​ ಡೇನಿಯಲ್​ ಸ್ಯಾಮ್ಸ್​ 28 ರನ್​ ಬಾರಿಸಿ ತಂಡಕ್ಕೆ ನೆರವಾದರು.

ಬೂಮ್ರಾ ದುಬಾರಿ, ಅಕ್ಸರ್​ ಮಿಂಚು: ಇನ್ನು ಗಾಯಗೊಂಡು ಕಳೆದ ಪಂದ್ಯದಲ್ಲಿ ಮತ್ತೆ ಕಣಕ್ಕೆ ಇಳಿದಿರುವ ಯಾರ್ಕರ್​ ಸ್ಪೆಷಲಿಸ್ಟ್​ ಜಸ್ಪ್ರೀತ್​ ಬೂಮ್ರಾ ಈ ಪಂದ್ಯದಲ್ಲಿ ದುಬಾರಿಯಾದರು. 4 ಓವರ್​ ಬೌಲ್​ ಮಾಡಿದ ಬೂಮ್ರಾ ಬರೋಬ್ಬರಿ 50 ರನ್​ ಬಿಟ್ಟುಕೊಟ್ಟರು. ಇನ್ನೊಬ್ಬ ಮಂಚೂಣಿ ವೇಗಿ ಭುವನೇಶ್ವರ್​ ಕುಮಾರ್​ 1 ವಿಕೆಟ್​ ಪಡೆದರೂ 39 ರನ್​ ಚಚ್ಚಿಸಿಕೊಂಡರು.

ವೇಗಿಗಳು ಸತತ ವೈಫಲ್ಯ ಅನುಭವಿಸುತ್ತಿದ್ದರೂ ಒಂದೆಡೆ ಸ್ಪಿನ್ನರ್​ ಅಕ್ಸರ್​ ಪಟೇಲ್​ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. 33 ರನ್​ ನೀಡಿ 3 ವಿಕೆಟ್​ ಉರುಳಿಸಿ ಆಸೀಸ್​ ಪಡೆಯನ್ನು ಕಾಡಿದರು. ಕಳೆದ ಪಂದ್ಯದಲ್ಲೂ ಪಟೇಲ್​ 2 ವಿಕೆಟ್​ ಪಡೆದಿದ್ದರು. ಇದಲ್ಲದೇ, ಹರ್ಷಲ್​ ಪಟೇಲ್​, ಯಜುವೇಂದ್ರ ಚಹಲ್​ ತಲಾ ಒಂದು ವಿಕೆಟ್​ ಪಡೆದರು.

ಓದಿ: ದುಲೀಪ್​ ಟ್ರೋಫಿ ಫೈನಲ್​: ಸ್ಲೆಡ್ಜಿಂಗ್​ ವಿವಾದಕ್ಕೆ ಮೈದಾನದಿಂದ ಹೊರನಡೆದ ಯಶಸ್ವಿ ಜೈಸ್ವಾಲ್

Last Updated : Sep 25, 2022, 11:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.