ರಾಜ್ಕೋಟ್ (ಗುಜರಾತ್): ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 66 ರನ್ ಗಳಿಂದ ಸೋಲು ಕಂಡಿದೆ. ಇದರಿಂದ ಐತಿಹಾಸಿಕ ಕ್ಲೀನ್ಸ್ವೀಪ್ ಸಾಧನೆ ವಿಫಲವಾಗಿದ್ದು, ಸರಣಿ 2-1 ರಿಂದ ಭಾರತದ ಕೈಸೇರಿದೆ. ಕಾಂಗರೂ ಪಡೆ ಕೊಟ್ಟಿದ್ದ 353 ರನ್ ಗುರಿ ಬೆನ್ನತ್ತಿದ ಭಾರತೀಯ ತಂಡ 49.4 ಓವರ್ಗೆ 286 ರನ್ಗೆ ಆಲ್ಔಟ್ ಆಯಿತು. ಆಸ್ಟ್ರೇಲಿಯಾದ ಪಾರ್ಟ್ ಟೈಂ ಬೌಲರ್ ಮ್ಯಾಕ್ಸ್ವೆಲ್ ಭಾರತಕ್ಕೆ ಮುಳುವಾದರು.
ವಿಶ್ವಕಪ್ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಕಳೆದೆರಡು ಪಂದ್ಯಗಳಿಗೆ ವಿಶ್ರಾಂತಿ ಕೊಡಲಾಗಿತ್ತು. ಕೊನೆಯ ಪಂದ್ಯಕ್ಕೆ ಈ ಇಬ್ಬರು ಬ್ಯಾಟರ್ ಬಂದ ಕಾರಣ ಇಂದಿನ ತಂಡದಲ್ಲಿ ಬ್ಯಾಟಿಂಗ್ ಬಲವನ್ನು ಕುಗ್ಗಿಸಿ ಬೌಲಿಂಗ್ಗೆ ಹೆಚ್ಚು ಒತ್ತು ಕೊಡಲಾಯಿತು. ಭಾರತದ ಮೂವರು ವೇಗಿಗಳು ಮತ್ತು ಮೂವರು ಸ್ಪಿನ್ನರ್ಗಳು ರಾಜ್ಕೋಟ್ನ ಹೈವೆ ಪಿಚ್ನಲ್ಲಿ ಆಸ್ಟ್ರೇಲಿಯಾವನ್ನು ಕಟ್ಟಿಹಾಕುವಲ್ಲಿ ವಿಫಲವಾದರು. ಇದರಿಂದ ಬೃಹತ್ ಗುರಿ ಭಾರತ ಎದುರಿಸಬೇಕಾಯಿತು.
-
#TeamIndia fought hard but it's Australia who win the third ODI
— BCCI (@BCCI) September 27, 2023 " class="align-text-top noRightClick twitterSection" data="
India clinch the @IDFCFIRSTBank ODI series 2-1 👏👏
Scorecard ▶️ https://t.co/H0AW9UXI5Y#INDvAUS pic.twitter.com/uWv9LSfn04
">#TeamIndia fought hard but it's Australia who win the third ODI
— BCCI (@BCCI) September 27, 2023
India clinch the @IDFCFIRSTBank ODI series 2-1 👏👏
Scorecard ▶️ https://t.co/H0AW9UXI5Y#INDvAUS pic.twitter.com/uWv9LSfn04#TeamIndia fought hard but it's Australia who win the third ODI
— BCCI (@BCCI) September 27, 2023
India clinch the @IDFCFIRSTBank ODI series 2-1 👏👏
Scorecard ▶️ https://t.co/H0AW9UXI5Y#INDvAUS pic.twitter.com/uWv9LSfn04
ವಿಶ್ವಕಪ್ಗೂ ಮೊದಲು ನಡೆಯುತ್ತಿರುವ ಅಂತಾರಾಷ್ಟ್ರೀಯ ಕೊನೆಯ ಏಕದಿನ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಇಳಿಸಲಾಯಿತು. ನಾಯಕ ರೋಹಿತ್ ಮತ್ತು ಸುಂದರ್ ಬೃಹತ್ ಗುರಿಯನ್ನು ಭೇದಿಸಲು ಸರಿಯಾದ ವೇಗದ ಆರಂಭವನ್ನು ಕೊಡಲಿಲ್ಲ. ಬದಲಾಗಿ ಮೊದಲ ಪವರ್ ಪ್ಲೇಯಲ್ಲಿ ಇಬ್ಬರು ವಿಕೆಟ್ ಕಾಯ್ದುಕೊಳ್ಳುವ ಕೆಲಸ ಮಾಡಿದರು. ವಾಷಿಂಗ್ಟನ್ ಸುಂದರ್ ಟೆಸ್ಟ್ನ ನೈಟ್ ವಾಚ್ಮನ್ ರೀತಿ ಬ್ಯಾಟಿಂಗ್ ಮಾಡಿದರು. ಮೊದಲ ವಿಕೆಟ್ಗೆ 74 ರನ್ ಜೊತೆಯಾಟ ಬಂದರೂ ಅದರಲ್ಲಿ ರೋಹಿತ್ ಪಾಲುದಾರಿಕೆ ಹೆಚ್ಚಿತ್ತು. ಮ್ಯಾಕ್ಸ್ವೆಲ್ ಬೌಲಿಂಗ್ನಲ್ಲಿ 30 ಬಾಲ್ ಎದುರಿಸಿ 18 ರನ್ ಗಳಿಸಿ ಆಡುತ್ತಿದ್ದ ಸುಂದರ್ ವಿಕೆಟ್ ಒಪ್ಪಿಸಿದರು.
ವಾಷಿಂಗ್ಟನ್ ನಂತರ ವಿರಾಟ್ ಕೊಹ್ಲಿ ನಾಯಕ ರೋಹಿತ್ ಶರ್ಮಾ ಜೊತೆಗೆ 50ಕ್ಕೂ ಹೆಚ್ಚು ರನ್ನ ಪಾಲುದಾರಿಕೆ ಮಾಡಿದರಾದರೂ ರನ್ನ ವೇಗವನ್ನು ಹೆಚ್ಚಿಸುವಲ್ಲಿ ವಿಫಲರಾದರು. ಇದರಿಂದ ರನ್ರೇಟ್ನ ಅಗತ್ಯತೆ ಹೆಚ್ಚಾಗುತ್ತಾ ಬಂತು. ನಾಯಕ ರೋಹಿತ್ ಶರ್ಮಾ 19 ರನ್ನಿಂದ ಶತಕ ವಂಚಿತರಾದರು. ಇನ್ನಿಂಗ್ಸ್ನಲ್ಲಿ ಅವರು 57 ಬಾಲ್ ಆಡಿ 5 ಬೌಂಡರಿ ಮತ್ತು 6 ಸಿಕ್ಸ್ನಿಂದ 81 ರನ್ ಕಲೆಹಾಕಿ ಮ್ಯಾಕ್ಸ್ವೆಲ್ಗೆ ವಿಕೆಟ್ ಕೊಟ್ಟರು.
-
Lots to like after that performance tonight! ❤️
— Cricket Australia (@CricketAus) September 27, 2023 " class="align-text-top noRightClick twitterSection" data="
A 66-run win caps off our series against India and now we turn our attention to the ODI World Cup! #INDvAUS pic.twitter.com/nC1y5EFPfI
">Lots to like after that performance tonight! ❤️
— Cricket Australia (@CricketAus) September 27, 2023
A 66-run win caps off our series against India and now we turn our attention to the ODI World Cup! #INDvAUS pic.twitter.com/nC1y5EFPfILots to like after that performance tonight! ❤️
— Cricket Australia (@CricketAus) September 27, 2023
A 66-run win caps off our series against India and now we turn our attention to the ODI World Cup! #INDvAUS pic.twitter.com/nC1y5EFPfI
ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಕೊಂಚ ಜೊತೆಯಾಟವನ್ನು ಮಾಡಿದರಾದರೂ ಬಿರುಸಿನ ಬ್ಯಾಟಿಂಗ್ ಕಂಡು ಬರಲಿಲ್ಲ. 61 ಬಾಲ್ ಎದುರಿಸಿ 5 ಬೌಂಡರಿ ಮತ್ತು 1 ಸಿಕ್ಸ್ನಿಂದ 56 ರನ್ ಗಳಿಸಿ ವಿಕೆಟ್ ಪೆವಿಲಿಯನ್ ದಾರಿ ಹಿಡಿದರೆ, ಕಳೆದ ಪಂದ್ಯದಲ್ಲಿ ಅರ್ಧಶತಕ ಗಳಿಸಿ ನಾಯಕರಾಗಿ ಯಶಸ್ವಿಯಾಗಿದ್ದ ರಾಹುಲ್ 26 ರನ್ ಗಳಿಸಿ ವಿಕೆಟ್ ಕೊಟ್ಟರು. ಅವರ ಬೆನ್ನಲ್ಲೇ ಸೂರ್ಯ ಕುಮಾರ್ ಯಾದವ್ 8 ರನ್ಗೆ ಪೆವಿನಿಯನ್ಗೆ ಮರಳಿದರು. ಅಯ್ಯರ್ ತಂಡವನ್ನು ಗೆಲುವಿಗೆ ಕೊಂಡೊಯ್ಯುತ್ತಾರೆ ಎಂಬ ಆಲೋಚನೆಗಳು ಬರುವ ಮುನ್ನವೇ ವಿಕೆಟ್ ಕೊಟ್ಟು ಜವಾಬ್ದಾರಿ ಕಳೆದುಕೊಂಡರು.
ಕೊನೆಯಲ್ಲಿ ಆಲ್ರೌಂಡರ್ ಜಡೇಜ ಪಂದ್ಯವನ್ನು ಗೆಲ್ಲಿಸುವುದು ಕಷ್ಟ ಎಂದು ತಿಳಿದು ರನ್ ಅಂತರ ಕಡಿಮೆ ಮಾಡಲು ಪ್ರಯತ್ನಿಸಿದರು. ಬಾಲಂಗೋಚಿಗಳಾದ ಕುಲ್ದೀಪ್ ಯಾದವ್(2), ಬುಮ್ರಾ (5), ಸಿರಾಜ್ (1) ಜಡೇಜಗೆ ಸಾಥ್ ನೀಡಲಿಲ್ಲ. 286 ರನ್ ಗಳಿಸಿದ್ದ ಭಾರತ 49.4 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 66 ರನ್ಗಳಿಂದ ಸೋಲನುಭವಿಸಿತು.
ಆಸ್ಟ್ರೇಲಿಯಾ ಪರ ಮ್ಯಾಕ್ಸ್ವೆಲ್ 10 ಓವರ್ಗೆ 40 ರನ್ ಕೊಟ್ಟು 4 ವಿಕೆಟ್ ಪಡೆದು ಮಿಂಚಿದರು. ಜೋಶ್ ಹ್ಯಾಜಲ್‌ವುಡ್ 2, ಮಿಚೆಲ್ ಸ್ಟಾರ್ಕ್, ತನ್ವೀರ್ ಸಂಘ, ಕ್ಯಾಮೆರಾನ್ ಗ್ರೀನ್ ಮತ್ತು ಪ್ಯಾಟ್ ಕಮಿನ್ಸ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ಏಷ್ಯನ್ ಗೇಮ್ಸ್, ಮಹಿಳೆಯರ ಹಾಕಿ: 13-0 ಗೋಲುಗಳಿಂದ ಸಿಂಗಾಪುರ ಮಣಿಸಿದ ಭಾರತ!