ETV Bharat / sports

2ನೇ ಟೆಸ್ಟ್ ಗೆದ್ದು ಬೀಗಿದ ಭಾರತ; ಜಡೇಜಾ-ಅಶ್ವಿನ್ ಬಿರುಗಾಳಿಗೆ ಆಸೀಸ್ ಉಡೀಸ್ - ಭಾರತ ಆಸ್ಟ್ರೇಲಿಯಾ ಪಂದ್ಯ

2ನೇ ಟೆಸ್ಟ್​ನ 2ನೇ ಇನಿಂಗ್ಸ್​ನಲ್ಲಿ ಆಸೀಸ್​ ಪಡೆ ಭಾರತದ ಸ್ಪಿನ್​ ದಾಳಿಗೆ ಕಮರಿ ಹೋಯಿತು.

india-vs-australia-2nd-test
ಆಸ್ಟ್ರೇಲಿಯಾ ಪತನ
author img

By

Published : Feb 19, 2023, 11:54 AM IST

Updated : Feb 19, 2023, 2:17 PM IST

ನವದೆಹಲಿ: ಮೊದಲ ಟೆಸ್ಟ್ ಹೀನಾಯ ಸೋಲಿನ ಬಳಿಕ ಸ್ಪಿನ್​ ಪಿಚ್​ ಬಗ್ಗೆ ಚಕಾರ ಎತ್ತಿದ್ದ ಆಸ್ಟ್ರೇಲಿಯಾ, ವೇಗಿಗಳಿಗೆ ನೆರವಾಗುವ ಮೈದಾನದಲ್ಲೂ ಇಂದು ಕಳಪೆ ಆಟ ಮುಂದುವರಿಸಿತು. ಇದರ ಪರಿಣಾಮ ಎದುರಿಸಿದ ಪ್ರವಾಸಿಗರು 2ನೇ ಟೆಸ್ಟ್‌ ಪಂದ್ಯವನ್ನೂ ಕಳೆದುಕೊಂಡರು. ಜಡೇಜಾ, ಆರ್‌.ಅಶ್ವಿನ್, ಶಮಿ ಹಾಗು ಅಕ್ಷರ್‌ ಪಟೇಲ್‌ ನೆರವಿನಿಂದ ಭಾರತ ಎರಡನೇ ಟೆಸ್ಟ್‌ ಪಂದ್ಯವನ್ನು ಗೆದ್ದು ಬೀಗಿತು.

ದ್ವಿತೀಯ ಟೆಸ್ಟ್​ನ 2ನೇ ಇನಿಂಗ್ಸ್​ನಲ್ಲಿ ಕೇವಲ 113 ರನ್​ಗೆ ಸರ್ವಪತನ ಕಂಡಿತು. ರವೀಂದ್ರ ಜಡೇಜಾ ಮತ್ತು ಆರ್​.ಅಶ್ವಿನ್​ರ ಮಾರಕ ಸ್ಪಿನ್​ ದಾಳಿಗೆ ತರಗೆಲೆಯಂತೆ ಉದುರಿದ ಆಸೀಸ್​ ಬ್ಯಾಟರ್​ಗಳು ದಿನದಾಟದ ಮೊದಲ ಅವಧಿಯ 2 ಗಂಟೆಯಲ್ಲೇ ಆಟ ಮುಕ್ತಾಯ ಮಾಡಿದರು.

3ನೇ ದಿನಕ್ಕೆ ವಿಕೆಟ್​ ಕಾಯ್ದುಕೊಂಡಿದ್ದ ಟ್ರೇವಿಸ್​ ಹೆಡ್(39) ಹೆಚ್ಚುವರಿ 4 ರನ್​ ಗಳಿಸಿದಾಗ ಅಶ್ವಿನ್​ ಎಸೆತಕ್ಕೆ ಬಲಿಯಾದರು. 16 ಗಳಿಸಿದ್ದ ಮಾರ್ನಸ್​ ಲಬುಶೇನ್​​ ತುಸು ಹೋರಾಟ ನಡೆಸಿದರು. 35 ರನ್​ ಗಳಿಸಿದ್ದಾಗ ರವೀಂದ್ರ ಜಡೇಜಾ ಬೌಲ್ಡ್​ ಮಾಡಿದರು. ಇದಾದ ಬಳಿಕ ಆಸೀಸ್​ ಬ್ಯಾಟರ್​ಗಳು ಸತತವಾಗಿ ಪೆವಿಲಿಯನ್​ ಪರೇಡ್​ ನಡೆಸಿದರು.

ಒಂದಂಕಿ ದಾಟದ 8 ಬ್ಯಾಟರ್​ಗಳು: ಲಬುಶೇನ್​ ಮತ್ತು ಹೆಡ್​​ ಸೇರಿ 78 ರನ್​ ಗಳಿಸಿದರೆ, ಉಳಿದ 8 ಬ್ಯಾಟರ್​ಗಳು 38 ರನ್​ ಮಾಡಿದರು. ಅದರಲ್ಲಿ ಮೂವರು 0 ಸುತ್ತಿದರೆ, 5 ಜನ ಒಂದಂಕಿಗೆ ಸುಸ್ತಾದರು. ಒಂದು ಹಂತದಲ್ಲಿ 3 ವಿಕೆಟ್​ಗೆ 85 ರನ್​ ಗಳಿಸಿದ್ದ ಕಾಂಗರೂ ಪಡೆ ಉಳಿದ 28 ರನ್​ಗೆ 7 ವಿಕೆಟ್​ ಕಳೆದುಕೊಂಡು ಸರ್ವಪತನ ಕಂಡಿತು.

ಜಡೇಜಾ- ಅಶ್ವಿನ್​ ಸವಾರಿ: ಮೊದಲ ಟೆಸ್ಟ್​ ಹೀರೋ ರವೀಂದ್ರ ಜಡೇಜಾ 2 ನೇ ಟೆಸ್ಟ್​ನಲ್ಲೂ ಆಸೀಸ್​ ಪಡೆಗೆ ವಿಲನ್​ ಆದರು. 2ನೇ ಇನಿಂಗ್ಸ್​ನಲ್ಲಿ 12 ಓವರ್​ ಎಸೆದ ಜಡ್ಡು 7 ವಿಕೆಟ್​ ಗಳಿಸಿದರು. ಅದರಲ್ಲಿ ಐವರು ಬ್ಯಾಟರ್​ಗಳನ್ನು ಬೌಲ್ಡ್​ ಮಾಡಿ ಗಮನ ಸೆಳೆದರು. ಇನ್ನೊಂದೆಡೆ ಹಿರಿಯ ಸ್ಪಿನ್ನರ್​ ಅಶ್ವಿನ್​ 3 ವಿಕೆಟ್​ ಕಿತ್ತು ಇನಿಂಗ್ಸ್​ಗೆ ಮಂಗಳ ಹಾಡಿದರು.

ರವೀಂದ್ರ ಜಡೇಜಾ ಎರಡೂ ಇನಿಂಗ್ಸ್​ಗಳಲ್ಲಿ 10 ವಿಕೆಟ್​​ ಕಿತ್ತ ಸಾಧನೆ ಮಾಡಿದರು. ಅಲ್ಲದೇ ಟೆಸ್ಟ್​ ಕೆರಿಯರ್​ನಲ್ಲಿ ಒಂದೇ ಇನಿಂಗ್ಸ್​ನಲ್ಲಿ 42 ರನ್​ಗೆ 7 ವಿಕೆಟ್​ ಪಡೆದು ತಮ್ಮ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಇದಕ್ಕೂ ಮೊದಲು ಜಡ್ಡು 48 ರನ್​ಗೆ 7 ವಿಕೆಟ್​ ಕಿತ್ತಿದ್ದರು.

ಮತ್ತೆ ರಾಹುಲ್ ವೈಫಲ್ಯ: 2ನೇ ಇನಿಂಗ್ಸ್​ನಲ್ಲಿ 114 ರನ್​ಗಳ ಸಾಧಾರಣ ಗುರಿ ಪಡೆದ ಭಾರತಕ್ಕೆ ಆರಂಭಿಕ ಹಿನ್ನಡೆ ಮುಂದುವರಿಯಿತು. ಉಪನಾಯಕ ಕೆ.ಎಲ್.ರಾಹುಲ್​ ಮತ್ತೆ ವೈಫಲ್ಯ ಕಂಡಿದ್ದು, 1 ರನ್​ಗೆ ನಾಥನ್​ ಲಿಯಾನ್​ಗೆ ವಿಕೆಟ್​ ನೀಡಿದರು.

ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲಿ 5 ವಿಕೆಟ್‌ ಗೊಂಚಲು! ಪಂದ್ಯ ಸೋತರೂ ಮನಸ್ಸು ಗೆದ್ದ ರೇಣುಕಾ ಸಿಂಗ್‌​

Last Updated : Feb 19, 2023, 2:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.