ETV Bharat / sports

IND vs AUS: ಬೃಹತ್​ ಗುರಿ ಬೆನ್ನತ್ತಿದ ಆಸಿಸ್​ಗೆ ಮಳೆ ಅಡ್ಡಿ.. ಆರಂಭದಲ್ಲೇ ಆಸ್ಟ್ರೇಲಿಯಾಗೆ ಕಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ - ಸ್ಟೀವನ್ ಸ್ಮಿತ್

400 ರನ್​ನ ಬೃಹತ್​ ಗುರಿಯನ್ನು ಬೆನ್ನು ಹತ್ತಿದ್ದ ಆಸ್ಟ್ರೇಲಿಯಾಕ್ಕೆ ಪ್ರಸಿದ್ಧ್ ಕೃಷ್ಣ ಆರಂಭದಲ್ಲೇ ಕಾಡಿದರು. ಪಂದ್ಯದ ಎರಡನೇ ಓವರ್​ನಲ್ಲೇ ಮ್ಯಾಥ್ಯೂ ಶಾರ್ಟ್ ಮತ್ತು ನಾಯಕ ಸ್ಟೀವನ್ ಸ್ಮಿತ್ ​ವಿಕೆಟ್​ ಪಡೆದರು.

Etv Bharat
Etv Bharat
author img

By ETV Bharat Karnataka Team

Published : Sep 24, 2023, 8:09 PM IST

ಇಂದೋರ್​(ಮಧ್ಯಪ್ರದೇಶ): ಹೋಳ್ಕರ್​ ಮೈದಾನದಲ್ಲಿ ಭಾರತದ ಬ್ಯಾಟರ್​ಗಳು ರನ್​ ಮಳೆ ಹರಿಸಿ 400 ಗುರಿ ಕೊಟ್ಟಿದ್ದಾರೆ. ಈ ಗುರಿಯನ್ನು ಬೆನ್ನ ಹತ್ತಿದ್ದ ಆಸ್ಟ್ರೇಲಿಯಾಕ್ಕೆ ಮಳೆ ಅಡ್ಡಿ ಪಡಿಸಿದ್ದು ಪಂದ್ಯವನ್ನು ಸ್ಥಗಿತ ಮಾಡಲಾಗಿದೆ. ಸದ್ಯ 9 ಓವರ್​ ನಂತರ ಆಸ್ಟ್ರೇಲಿಯಾ 2 ವಿಕೆಟ್​ ನಷ್ಟಕ್ಕೆ 56 ರನ್​ ಗಳಿಸಿದೆ. ಆರಂಭಿಕ ಆಟಗಾರ ಮ್ಯಾಥ್ಯೂ ಶಾರ್ಟ್ ಮತ್ತು ನಾಯಕ ಸ್ಟೀವನ್ ಸ್ಮಿತ್ ವಿಕೆಟ್​ ಪತನವಾಗಿದ್ದು, ಕ್ರೀಸನ್​ನಲ್ಲಿ ಅನುಭವಿ ಡೇವಿಡ್​ ವಾರ್ನರ್​ ಮತ್ತು ಮಾರ್ನಸ್​ ಲಬುಶೇನ್​ ಇದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿದ್ದ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಬೃಹತ್​ ಗುರಿಯನ್ನು ನೀಡಿದೆ. ಟೀಮ್​ ಇಂಡಿಯಾದ ಆರಂಭಿ ಆಟಗಾರ ಶುಭಮನ್​ ಗಿಲ್​, ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ಶ್ರೇಯಸ್​ ಅಯ್ಯರ್​ ಅಬ್ಬರದ ಶತಕ ಗಳಿಸಿದ್ದರು. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ರಾಹುಲ್​ ಮತ್ತು ಸೂರ್ಯಕುಮಾರ್ ಯಾದವ್​ ಅರ್ಧಶತಕ ಗಳಿಸಿದ ಪರಿಣಾಮ 5 ವಿಕೆಟ್​ ಕಳೆದುಕೊಂಡ ಭಾರತ 50 ಓವರ್​ಗೆ 399 ರನ್​ ಕಲೆಹಾಕಿತ್ತು.

ಈ ಗುರಿಯನ್ನು ಬೆನ್ನು ಹತ್ತಲು ಮೈದಾನಕ್ಕಿಳಿದಿದ್ದ ಆಸ್ಟ್ರೇಲಿಯಾಕ್ಕೆ ಪಂದ್ಯದ ಎರಡನೇ ಓವರ್​ನಲ್ಲೇ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕಾಡಿದರು. ಮೊದಲ ಬಾಲ್​ ಡಾಟ್​ ಮಾಡಿದ ಮ್ಯಾಥ್ಯೂ ಶಾರ್ಟ್, ಎರಡನೇ ಬಾಲ್​ನಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ಎಡವಿದರು ಇದರಿಂದ ಕ್ಯಾಚ್​ ಕೊಟ್ಟು ಪೆವಿಲಿಯನ್​ಗೆ ತೆರಳಿದರು. ನಂತರ ಬಂದ ನಾಯಕ ಸ್ಟೀವನ್ ಸ್ಮಿತ್ ಮೂರನೇ ಬೌನ್ಸ್​ ಬಾಲ್​ನಲ್ಲಿ ಎರಡನೇ ಸ್ಲಿಪ್​ಗೆ ಕ್ಯಾಚ್​ ಕೊಟ್ಟು ಡಕ್​ ಔಟ್​ ಆದರು. ನಂತರ ಬಂದ ಲಬುಶೇನ್​ ಹ್ಯಾಟ್ರಿಕ್​ ವಿಕೆಟ್​ ಕೊಡದೇ ನಾಲ್ಕನೇ ಬಾಲ್​ನಲ್ಲಿ ಒಂದು ರನ್​ ಪಡೆದರು. ಎರಡು ವಿಕೆಟ್​ ಪತನದ ನಂತರ ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲ್ಯಾಬಶೇನ್​ ಜೊತೆಯಾಟ ಮುಂದುವರೆಸಿದ್ದಾರೆ. ವಾರ್ನರ್​ (26) ಮತ್ತು ಮಾರ್ನಸ್​ (17) 47 ರನ್​ನ ಪಾಲುದಾರಿಕೆ ಮಾಡಿ ಕ್ರೀಸ್​ನಲ್ಲಿದ್ದಾರೆ.

ಮುಂದೆ ಆಸಿಸ್​ಗೆ ಜೋಶ್ ಇಂಗ್ಲಿಸ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಸೀನ್ ಅಬಾಟ್, ಆಡಮ್ ಝಂಪಾ, ಜೋಶ್ ಹ್ಯಾಜಲ್ವುಡ್, ಸ್ಪೆನ್ಸರ್ ಜಾನ್ಸನ್​ ಅವರ ಬ್ಯಾಟಿಂಗ್​ ಬಲ ಇದೆ. ಸಧ್ಯ 4 ಓವರ್​ ಮಾಡಿದರುವ ಪ್ರಸಿದ್ಧ್​ ಕೃಷ್ಣ 31 ರನ್​ ಕೊಟ್ಟು 2 ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ: IND vs AUS: ಕಾಂಗರೂ ಪಡೆಯ ವಿರುದ್ಧ ಶ್ರೇಯಸ್​, ಗಿಲ್ ಅಬ್ಬರದ ಶತಕ.. ವಿಶ್ವಕಪ್​ಗೂ ಮುನ್ನ ಭಾರತದ ಭರ್ಜರಿ ಬ್ಯಾಟಿಂಗ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.