ನಾಗ್ಪುರ(ಮಹಾರಾಷ್ಟ್ರ): ಸ್ಪಿನ್ ಪಿಚ್ ವಿರೋಧಿಸಿದ್ದ ಆಸೀಸ್ ನಿರೀಕ್ಷೆಯಂತೆ ಇನಿಂಗ್ಸ್ ಮತ್ತು 132 ರನ್ ಗೆಲುವು ಸಾಧಿಸಿತು. ರವೀಂದ್ರ ಜಡೇಜಾ ದಾಳಿಗೆ ನಲುಗಿ ಮೊದಲ ಇನಿಂಗ್ಸ್ನಲ್ಲಿ 177 ರನ್ಗೆ ಔಟ್ ಆಗಿದ್ದ ಕಾಂಗರೂ, ಪಡೆ ಎರಡನೇ ಇನಿಂಗ್ಸ್ನಲ್ಲಿ ಹಿರಿಯ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್ ಬಿರುಗಾಳಿಗೆ ತರಗೆಲೆಯಂತೆ ಉರುಳಿ ಹೀನಾಯ ಸೋಲೊಪ್ಪಿಕೊಂಡಿತು. ಬಾರ್ಡರ್ ಗವಾಸ್ಕರ್ ಟ್ರೋಫಿಯ ಸರಣಿಯಲ್ಲಿ ಭಾರತ 1-0 ಯಿಂದ ಮುನ್ನಡೆ ಸಾಧಿಸಿತು.
ಎರಡನೇ ಇನ್ನಿಂಗ್ಸ್ ಆರಂಭವಾದ ಸುಮಾರು ಎರಡು ಗಂಟೆಗಳ ಅಂತರದಲ್ಲಿ ಭಾರತೀಯ ಸ್ಪಿನ್ ದಾಳಿಗೆ ಮಣಿದ ಆಸ್ಟ್ರೇಲಿಯಾ 91 ರನ್ಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು. ಭಾರತದಲ್ಲಿ ಸರಣಿ ಆರಂಭಕ್ಕೂ ಮೊದಲೇ ಅಶ್ವಿನ್ ಸ್ಪಿನ್ ದಾಳಿಗೆ ಬಗ್ಗೆ ಕಾಂಗರೂ ಪಡೆ ತಲೆಕೆಡಿಸಿಕೊಂಡಿತ್ತು. ಅದರಂತೆ ಅಶ್ವಿನ್ ಎರಡನೇ ಇನ್ನಿಂಗ್ಸ್ನಲ್ಲಿ 12 ಓವರ್ನಲ್ಲಿ 5 ವಿಕೆಟ್ ಕಿತ್ತರು.
ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಒಂದು ಕಡೆ ವಿಕೆಟ್ ನಿಲ್ಲಿಸಿಕೊಂಡು ಕ್ರೀಸ್ ಕಾದರೆ ಮತ್ತೊದೆಡೆ ಭಾರತದ ಸ್ಪನ್ ದಾಳಿಗೆ ಪೆವಿಲಿಯನ್ ಪರೇಡ್ ನಡೆಯುತ್ತಿತ್ತು. ಭಾರತೀಯ ಬೌಲಿಂಗ್ನ್ನು ಏಕಾಂಗಿಯಾಗಿ ಎದುರಿಸಿದ ಸ್ಮಿತ್ 51 ಎಸೆತಗಳಲ್ಲಿ 25 ರನ್ಗಳಿಸಿ ಅಜೇಯರಾಗಿ ಉಳಿದರು. ಮಿಕ್ಕ ಆಟಗಾರರೆಲ್ಲಾ 20 ರನ್ ಗಡಿ ಮುಟ್ಟಲೂ ಹವಣಿಸಿದರು. ಈ ಇನ್ನಿಂಗ್ಸ್ನಲ್ಲಿ 8 ವಿಕೆಟ್ ಸ್ಪಿನ್ನರ್ಗಳ ಪಾಲಾಯಿತು. ಶಮಿ ಎರಡು ವಿಕೆಟ್ ಪಡೆದರು.
-
Domination 👊
— ICC (@ICC) February 11, 2023 " class="align-text-top noRightClick twitterSection" data="
Outstanding effort from India to go 1-0 up against Australia in the Border-Gavaskar Trophy 👌#WTC23 | #INDvAUS | 📝: https://t.co/69XuLpfYpL pic.twitter.com/d6VR2t7Zyp
">Domination 👊
— ICC (@ICC) February 11, 2023
Outstanding effort from India to go 1-0 up against Australia in the Border-Gavaskar Trophy 👌#WTC23 | #INDvAUS | 📝: https://t.co/69XuLpfYpL pic.twitter.com/d6VR2t7ZypDomination 👊
— ICC (@ICC) February 11, 2023
Outstanding effort from India to go 1-0 up against Australia in the Border-Gavaskar Trophy 👌#WTC23 | #INDvAUS | 📝: https://t.co/69XuLpfYpL pic.twitter.com/d6VR2t7Zyp
ಕಾಂಗರೂ ಪಡೆ ಪೆವಿಲಿಯನ್ ಪರೇಡ್: ಭಾರತ 400ಕ್ಕೆ ಆಲ್ಔಟ್ ಆದ ನಂತರ 223 ರನ್ಗಳ ಮುನ್ನಡೆ ಸಾಧಿಸಿತ್ತು. ಭಾರತದ ಮೊದಲ ಇನ್ನಿಂಗ್ಸ್ ನಂತರ ಊಟದ ವಿರಾಮವಾಗಿ ಕ್ರೀಸ್ಗೆ ಮರಳಿದ ಪ್ಯಾಟ್ ಕಮಿನ್ಸ್ ಪಡೆ ಸತತ ವಿಕೆಟ್ ಪತನ ಅನುಭವಿಸಿತು. ಕವಾಜ (5) ಎರಡನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ವಾರ್ನರ್(10) ಮತ್ತು ಲಬುಶೇನೆ (17) ಕ್ರೀಸ್ ಕಾಯ್ದುಕೊಳ್ಳಲೆತ್ನಿಸಿದರಾದರೂ ಅಶ್ವಿನ್ ಮತ್ತು ಜಡೇಜಾ ಸ್ಪಿನ್ಗೆ ಔಟ್ ಆದರು. ಮ್ಯಾಟ್ ರೆನ್ಶಾ (2) ಮತ್ತು ಪೀಟರ್ ಹ್ಯಾಂಡ್ಸ್ಕಾಂಬ್ (6) ಬಂದು ಹೋದದ್ದೇ ಅರಿವಿಗೇ ಬರಲಿಲ್ಲ.
ಅಲೆಕ್ಸ್ ಕ್ಯಾರಿ (10) ಬಿರುಸಿನ ಆಟಕ್ಕೆ ಮುಂದಾಗಿ ಎರಡು ಫೋರ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಪ್ಯಾಟ್ ಕಮಿನ್ಸ್ (1), ಟಾಡ್ ಮರ್ಫಿ(2), ನಾಥನ್ ಲಿಯಾನ್(8) ಮತ್ತು ಸ್ಕಾಟ್ ಬೋಲ್ಯಾಂಡ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇನ್ನೊಂದು ಬದಿಯಲ್ಲಿ 51 ಬಾಲ್ ಎದುರಿಸಿ ಎರಡು ಬೌಂಡರಿ ಮತ್ತು 1 ಸಿಕ್ಸರ್ನಿಂದ ಸ್ಮಿತ್ 25 ರನ್ಗಳಿಸಿ ಅಜೇಯರಾಗಿ ಉಳಿದುಕೊಂಡರು.
-
An all-round match-winning performance to mark a memorable return! 🙌🏻@imjadeja becomes the Player of the Match as #TeamIndia win by an innings & 132 runs 👏🏻
— BCCI (@BCCI) February 11, 2023 " class="align-text-top noRightClick twitterSection" data="
Scorecard ▶️ https://t.co/SwTGoyHfZx…#INDvAUS | @mastercardindia pic.twitter.com/VBGfjqB4dZ
">An all-round match-winning performance to mark a memorable return! 🙌🏻@imjadeja becomes the Player of the Match as #TeamIndia win by an innings & 132 runs 👏🏻
— BCCI (@BCCI) February 11, 2023
Scorecard ▶️ https://t.co/SwTGoyHfZx…#INDvAUS | @mastercardindia pic.twitter.com/VBGfjqB4dZAn all-round match-winning performance to mark a memorable return! 🙌🏻@imjadeja becomes the Player of the Match as #TeamIndia win by an innings & 132 runs 👏🏻
— BCCI (@BCCI) February 11, 2023
Scorecard ▶️ https://t.co/SwTGoyHfZx…#INDvAUS | @mastercardindia pic.twitter.com/VBGfjqB4dZ
ಜಡೇಜ ಮ್ಯಾನ್ ಆಫ್ ದಿ ಮ್ಯಾಚ್: ಮೊದಲ ಇನ್ನಿಂಗ್ಸ್ನ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನ ಹಾಗೂ ಎರನೇ ಇನ್ನಿಂಗ್ಸ್ನ ಎರಡು ಅಮೂಲ್ಯ ವಿಕಟ್ಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಸರ್ ರವೀಂದ್ರ ಜಡೇಜ ಭಾಜನರಾದರು. ಮೊದಲ ಇನ್ನಿಂಗ್ಸ್ನಲ್ಲಿ ಕಾಂಗರೂ ಪಡೆಯನ್ನು 177ಕ್ಕೆ ಆಲ್ಔಟ್ ಮಾಡುವಲ್ಲಿ ಪ್ರಮುಖ 5 ವಿಕೆಟ್ ಉರುಳಿಸಿದ್ದರು. ಬ್ಯಾಟಿಂಗ್ನಲ್ಲಿ 70 ರನ್ನ ಅಮೂಲ್ಯ ಕೊಡುಗೆ ತಂಡಕ್ಕೆ ಕೊಟ್ಟಿದ್ದರು. ಎರಡನೇ ಇನ್ನಿಂಗ್ಸ್ನಲ್ಲಿ ಲಬುಶೇನೆ ಮತ್ತು ಕಮಿನ್ಸ್ ಅವರ ವಿಕೆಟ್ ಉರುಳಿಸಿದ್ದರು.
ನಾಗ್ಪುರದಲ್ಲಿ ಸಿನ್ನರ್ಗಳದ್ದೇ ಪ್ರಾಬಲ್ಯ : ಭಾರತದ ಸ್ಪಿನ್ನರ್ಗಳು ಆಸಿಸ್ನ 20 ವಿಕೆಟ್ನಲ್ಲಿ 16 ವಿಕೆಟ್ಗಳನ್ನು ಕಬಳಿಸಿದರು. ಎರಡೂ ಇನ್ನಿಂಗ್ಸ್ನಿಂದ ಜಡೇಜಾ 7, ಅಶ್ವಿನ್ 8 ಮತ್ತು ಅಕ್ಷರ್ 1 ವಿಕೆಟ್ ಪಡೆದರು. ವೇಗದ ವಿಭಾಗದಲ್ಲಿ ಶಮಿ 3 ಹಾಗೂ ಸಿರಾಜ್ 1 ವಿಕೆಟ್ ಪಡೆದುಕೊಂಡರು. ಒಟ್ಟು 30 ವಿಕೆಟ್ನಲ್ಲಿ 24 ವಿಕೆಟ್ಗಳು ಸ್ಪಿನ್ನರ್ಗಳ ಪಾಲಾಯಿತು.
ಇದನ್ನೂ ಓದಿ: Ind vs Aus 1st Test: 400 ರನ್ಗೆ ಭಾರತ ಆಲೌಟ್, ಆಸೀಸ್ನ ಟಾಡ್ ಮೊರ್ಪಿಗೆ 7 ವಿಕೆಟ್
ರೋಹಿತ್, ಜಡ್ಡು ಮತ್ತು ಅಕ್ಷರ್ ಮೆರುಗು: ಭಾರತದ ಮೊದಲ ಇನ್ನಿಂಗ್ ಆಟಕ್ಕೆ ಆಸ್ಟ್ರೇಲಿಯಾದ ಡೆಬ್ಯೂ ಬೌಲರ್ ಟಾಡ್ ಮರ್ಫಿ ಕಾಡಿದರು. ಭಾರತದ ಏಳು ವಿಕೆಟ್ ಕಿತ್ತು ಸಾಧನೆ ಮಾಡಿದರು. ಭಾರತದ ನಾಯಕ ರೋಹಿತ್ ಶರ್ಮಾ ಅವರು ಆರಂಭಿಕರಾಗಿ ಶತಕ ಗಳಿಸಿ ಆಸರೆ ಆದರು, ಆದರೆ ಮಿಕ್ಕ ಬ್ಯಾಟರ್ಗಳು ಹೆಚ್ಚು ಪ್ರತಿ ಸ್ಪರ್ಧೆ ನೀಡಿರಲಿಲ್ಲ. ಬೌಲಿಂಗ್ ಆಲ್ರೌಂಡರ್ಗಳಾದ ಜಡೇಜ ಮತ್ತು ಅಕ್ಷರ್ ಪಟೇಲ್ ತಲಾ ಅರ್ಧಶತಕ ಗಳಿಸಿ ಭಾರತ 400 ರನ್ ಗಳಿಸುವಂತೆ ಮಾಡಿದರು. ಭಾರತ 223 ರನ್ಗಳ ಲೀಡ್ನೊಂದಿಗೆ ಪ್ರಥಮ ಇನ್ನಿಂಗ್ಸ್ ಅಂತ್ಯವಾಯಿತು.
ಅಲ್ಪ ಮೊತ್ತಕ್ಕೆ ಆಸಿಸ್ ಕುಸಿತ: ನಾಗ್ಪುರದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡಿದ್ದ ಕಮಿನ್ಸ್ಗೆ ಸ್ಪಿನ್ನರ್ಗಳ ಭಯ ಇತ್ತು. ಅದರಂತೆ ಜಡೇಜ ಆಸಿಸ್ ಬ್ಯಾಟರ್ಗಳ ವಿಕೆಟ್ ಪಡೆದುಕೊಂಡರು. ಜಡೇಜ 5 ಮತ್ತು ಅಶ್ವಿನ್ 3 ಸೇರಿ ಒಟ್ಟು ಎಂಟು ವಿಕೆಟ್ಗಳನ್ನು ಮೊದಲ ಇನ್ನಿಂಗ್ಸ್ನಲ್ಲಿ ಭಾರತೀಯ ಬೌಲಿಂಗ್ ಪಡೆ ಪಡೆದು ಕೊಂಡಿತು. ಜಡ್ಡು ಮತ್ತು ಅಶ್ವಿನ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ ಪಡೆ 177ಕ್ಕೆ ಆಲ್ಔಟ್ ಆಯಿತು.
ಎರಡನೇ ಪಂದ್ಯ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಫೆಬ್ರವರಿ 17 ರಿಂದ ನಡೆಯಲಿದೆ.
ಇದನ್ನೂ ಓದಿ: ರೋಹಿತ್ ಶತಕ, ಜಡೇಜಾ- ಅಕ್ಷರ್ ಫಿಫ್ಟಿ: ಭಾರತ 7 ವಿಕೆಟ್ಗೆ 321 ರನ್