ಮೊಹಾಲಿ, ಪಂಜಾಬ್: ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮೊಹಾಲಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 208 ರನ್ಗಳ ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದ ಭಾರತ ತವರಿನಲ್ಲಿ ಅಬ್ಬರಸಿ ಬೊಬ್ಬಿರಿಯಿತು. ಆರಂಭದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ವಿಕೆಟ್ ಬೇಗನೇ ಕಳೆದುಕೊಂಡರೂ ಧೃತಿಗೆಡದ ರಾಹುಲ್, ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟ್ ಬೀಸಿದರು.
-
Half-centuries from @hardikpandya7 (71*) & @klrahul (55) and a solid 46 from @surya_14kumar as #TeamIndia post a formidable total of 208/6 on the board.
— BCCI (@BCCI) September 20, 2022 " class="align-text-top noRightClick twitterSection" data="
Australia chase underway.
LIVE - https://t.co/TTjqe4nsgt #INDvAUS @mastercardindia pic.twitter.com/ph66giqzPF
">Half-centuries from @hardikpandya7 (71*) & @klrahul (55) and a solid 46 from @surya_14kumar as #TeamIndia post a formidable total of 208/6 on the board.
— BCCI (@BCCI) September 20, 2022
Australia chase underway.
LIVE - https://t.co/TTjqe4nsgt #INDvAUS @mastercardindia pic.twitter.com/ph66giqzPFHalf-centuries from @hardikpandya7 (71*) & @klrahul (55) and a solid 46 from @surya_14kumar as #TeamIndia post a formidable total of 208/6 on the board.
— BCCI (@BCCI) September 20, 2022
Australia chase underway.
LIVE - https://t.co/TTjqe4nsgt #INDvAUS @mastercardindia pic.twitter.com/ph66giqzPF
ಸ್ಟ್ರೈಕ್ರೇಟ್ ಕಾರಣಕ್ಕಾಗಿ ಟೀಕೆಗೆ ಗುರಿಯಾಗಿರುವ ಕನ್ನಡಿಗ ಕೆ ಎಲ್ ರಾಹುಲ್ ಕೇವಲ 35 ಎಸೆತಗಳಲ್ಲಿ 55 ರನ್ ಬಾರಿಸಿದರು. ಇದರಲ್ಲಿ 3 ಸಿಕ್ಸರ್, 4 ಬೌಂಡರಿಗಳಿದ್ದವು. ಈ ಮೂಲಕ ರಾಹುಲ್ ಟೀಕಾಕಾರಿಗೆ ಬ್ಯಾಟ್ ಎತ್ತುವ ಮೂಲಕವೇ ಉತ್ತರ ನೀಡಿದರು. ಕೊನೆಗೆ ದೊಡ್ಡ ಹೊಡೆತಕ್ಕೆ ಮುಂದಾಗಿ ಹೇಜಲ್ವುಡ್ಗೆ ವಿಕೆಟ್ ಒಪ್ಪಿಸಿದರು.
ಇನ್ನು ಏಷ್ಯಾಕಪ್ನಲ್ಲಿ ಮಿಂಚು ಹರಿಸಲು ವಿಫಲವಾಗಿದ್ದ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯನ್ನರ ವಿರುದ್ಧ ಸವಾರಿ ಮಾಡಿದರು. 4 ಸಿಕ್ಸರ್, 2 ಬೌಂಡರಿ ಸಮೇತ 46 ರನ್ ಗಳಿಸಿ ಔಟಾಗಿ ಅರ್ಧಶತಕದಿಂದ ತಪ್ಪಿಸಿಕೊಂಡರು.
ಹಾರ್ದಿಕ್ ಪಾಂಡ್ಯಾ ವೀರಾವೇಶ: ಭರ್ಜರಿ ಫಾರ್ಮ್ನಲ್ಲಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಆಸೀಸ್ ಬೌಲರ್ಗಳ ಬೆವರಿಳಿಸಿದರು. ಕೊನೆಯವರೆಗೂ ಔಟಾಗದೇ ಉಳಿದ ಹಾರ್ದಿಕ್ 71 ರನ್ ಗಳಿಸಿದರು. ಇದರಲ್ಲಿ 5 ಸಿಕ್ಸರ್, 7 ಬೌಂಡರಿಗಳಿದ್ದವು. ಬಳಸಿದ್ದು 30 ಎಸೆತ ಮಾತ್ರ. ಸಿಕ್ಸ್, ಫೋರ್ಗಳಿಂದಲೇ ಪಾಂಡ್ಯಾ 58 ರನ್ ಗಳಿಸಿದ್ದು ಅಬ್ಬರಕ್ಕೆ ಸಾಕ್ಷಿಯಾಗಿತ್ತು. ಆಸ್ಟ್ರೇಲಿಯಾ ಪರವಾಗಿ ಜೋಸ್ ಹೇಜಲ್ವುಡ್ 2, ನಾಥನ್ ಎಲ್ಲಿಸ್ 3, ಕ್ಯಾಮರನ್ ಗ್ರೀನ್ 1 ವಿಕೆಟ್ ಗಳಿಸಿದರು.
ಓದಿ: ಪ್ರತಿ ಬಾರಿ 200ರ ಸ್ಟ್ರೈಕ್ರೇಟಲ್ಲಿ ಆಡಲಾಗದು.. ಬ್ಯಾಟಿಂಗ್ ಸರಾಸರಿ ಟೀಕೆಗೆ ಕೆಎಲ್ ರಾಹುಲ್ ಉತ್ತರ