ETV Bharat / sports

3ನೇ ಟಿ20: ರೋಹಿತ್, ರಿಂಕು ಅಬ್ಬರ, ಅಫ್ಘಾನ್​ಗೆ 212 ರನ್​ಗಳ​ ಬೃಹತ್​ ಗುರಿ ​ - ಭಾರತ ಅಫ್ಘಾನಿಸ್ತಾನ ಟಿ20

ಮೂರನೇ ಟಿ-20 ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನಕ್ಕೆ 212 ರನ್​ಗಳ ಗುರಿ ನೀಡಿದೆ.

ಭಾರತ Vs ಅಫ್ಘಾನಿಸ್ತಾನ 3ನೇ ಟಿ20: ಟಾಸ್​ ಗೆದ್ದ ಟೀಂ ಇಂಡಿಯಾ

author img

By ETV Bharat Karnataka Team

Published : Jan 17, 2024, 6:58 PM IST

Updated : Jan 17, 2024, 9:09 PM IST

ಬೆಂಗಳೂರು: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಮತ್ತು ಅಂತಿಮ ಟಿ-20 ಪಂದ್ಯದ ಮೊದಲ ಇನ್ನಿಂಗ್ಸ್​ ​ ಮುಕ್ತಾಯಗೊಂಡಿದೆ. ಟಾಸ್​​ ಗೆದ್ದು ಮೊದಲು ಬ್ಯಾಟ್​ ಮಾಡಿದ ಭಾರತ ನಿಗದಿತ 20 ಓವರ್​ಗಳ ಅಂತ್ಯಕ್ಕೆ 4 ವಿಕೆಟ್​ ನಷ್ಟಕ್ಕೆ 212 ರನ್​ಗಳನ್ನು ಬೃಹತ್​ ಮೊತ್ತವನ್ನು ಪೇರಿಸಿದೆ. ತಂಡದ ಮೊತ್ತ 22 ರನ್​ ಆಗಿದ್ದ ವೇಳೆಗೆ ಆರಂಭಿಕ 4 ವಿಕೆಟ್​ಗಳನ್ನು ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ, ನಾಯಕ ರೋಹಿತ್​ ಶರ್ಮಾ ಮತ್ತು ರಿಂಕು ಸಿಂಗ್​ ತಂಡಕ್ಕ ಆಸರೆಯಾದರು. ಬಿರುಸಿನ ಬ್ಯಾಟ್​ ಮಾಡಿ 5ನೇ ವಿಕೆಟ್​ಗೆ 95 ಎಸೆತಗಳಲ್ಲಿ ಬರೋಬ್ಬರಿ 190 ರನ್​ಗಳ ಜತೆಯಾಟವಾಡಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೊನೆಯ 5 ಓವರ್​ನಲ್ಲಿ ಭಾರತ 103 ರನ್​ಗಳನ್ನು ಕಲೆಹಾಕಿದೆ.

ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಅಫ್ಘಾನಿಸ್ತಾನದ ವಿರುದ್ಧದ ಮೂರು T20 ಪಂದ್ಯಗಳಲ್ಲಿ ಎರಡು ಪಂದ್ಯವನ್ನು ಗೆದ್ದಿರುವ ಭಾರತ ಸರಣಿಯನ್ನೂ ವಶಪಡಿಸಿಕೊಂಡಿದೆ. ಇಂದಿನ ಪಂದ್ಯ ಭಾರತ ಗೆದ್ದಿದ್ದೇ ಆದಲ್ಲಿ ಪಾಕಿಸ್ತಾನ ದಾಖಲೆಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದೆ. ಟಿ-20 ಇತಿಹಾಸದಲ್ಲಿ ಎದುರಾಳಿ ತಂಡವನ್ನು ಅತಿ ಹೆಚ್ಚು ಬಾರಿ ವೈಟ್‌ವಾಶ್ ಮಾಡಿದ ತಂಡವಾಗಿ ಭಾರತ ಹೊರಹೊಮ್ಮಲಿದೆ.

ಇಲ್ಲಿಯವರೆಗೆ ಟಿ-20 ಇತಿಹಾಸದಲ್ಲಿ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿಗಳಲ್ಲಿ ಅತಿ ಹೆಚ್ಚು ವೈಟ್‌ವಾಶ್ (8) ಮಾಡಿದ ತಂಡಗಳಾಗಿವೆ. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಮಹತ್ವ ಪಡೆದುಕೊಂಡಿದೆ.

ತಂಡಗಳು- ಭಾರತ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಶಿವಂ ದುಬೆ, ಸಂಜು ಸ್ಯಾಮ್ಸನ್(ವಿ.ಕೀ), ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್, ಕುಲದೀಪ್ ಯಾದವ್, ಅವೇಶ್ ಖಾನ್

ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿ.ಕೀ), ಇಬ್ರಾಹಿಂ ಝದ್ರಾನ್ (ನಾಯಕ), ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ನಜೀಬುಲ್ಲಾ ಝದ್ರಾನ್, ಕರೀಂ ಜನತ್, ಶರಫುದ್ದೀನ್ ಅಶ್ರಫ್, ಖೈಸ್ ಅಹ್ಮದ್, ಮೊಹಮ್ಮದ್ ಸಲೀಮ್ ಸಫಿ, ಫರೀದ್ ಅಹ್ಮದ್ ಮಲಿಕ್

ಇದನ್ನೂ ಓದಿ: ಶಿವಂ ದುಬೆ ಆಟ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಸಿಗುವಂತಿದೆ: ಸುನಿಲ್​ ಗವಾಸ್ಕರ್​

Last Updated : Jan 17, 2024, 9:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.