ಸಿಡ್ನಿ: 2020-21 ಟೆಸ್ಟ್ ಸರಣಿಯ ಸಂದರ್ಭದಲ್ಲಿ ಬ್ರಿಸ್ಬೇನ್‌ನ ಗಬ್ಬಾದಲ್ಲಿ ಆಡುವುದಿಲ್ಲ ಎಂದು ಭಾರತದ ಸ್ಪಷ್ಟವಾಗಿ ಹಿಂಜರಿಕೆ ತೋರಿ ನಮ್ಮನ್ನು ವಿಚಲಿತರಾಗಿ ಮಾಡಿದರು. ಇದರಿಂದ ನಾವು 2-1ರಿಂದ ಸರಣಿ ಕಳೆದುಕೊಳ್ಳಲು ಕಾರಣವಾಯಿತು ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಹೇಳುವ ಮೂಲಕ ವಿವಾದವನ್ನುಂಟು ಮಾಡಿದ್ದಾರೆ.
ಭಾರತದ ವಿರುದ್ಧ ಆಡುವಾಗ ಉಂಟಾಗುವ ಸವಾಲಿನ ಒಂದು ಭಾಗವೆಂದರೆ ಅವರು ನಿಮ್ಮನ್ನು ನಿಬ್ಬೆರಗಾಗಿಸಲು ಮತ್ತು ಅಪ್ರಸ್ತುತವಾದ ವಿಷಯಗಳಿಂದ ನಿಮ್ಮನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಾರೆ. ಹಾಗಾಗಿ ನಾವು ಅವರ ಸರಣಿಯನ್ನು ಕಳೆದುಕೊಂಡೆವು " ಎಂದು ಪೈನ್ ಬುಧವಾರ ರಾತ್ರಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ನಡೆದ ಚಾಪೆಲ್ ಫೌಂಡೇಷನ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಅವರು ಗಬ್ಬಾಗೆ ಹೋಗುವುದಿಲ್ಲ ಎಂದು ಹೇಳಿದರು. ಆ ವೇಳೆ, ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ನಮಗೆ ತಿಳಿದಿರಲಿಲ್ಲ. ಭಾರತೀಯರು ಈ ಗೊಂದಲದ ಸಂಪೂರ್ಣ ಲಾಭ ಪಡೆಕೊಂಡುರು. ಅಲ್ಲದೇ ಇಂತಹ ಸೈಡ್ ಸೋಗಳನ್ನು ಸೃಷ್ಟಿಸುವಲ್ಲಿ ಅವರು ನಿಸ್ಸೀಮರು ಎಂದು ಪೇನ್ ಬುಧವಾರ ರಾತ್ರಿ ಹೇಳಿದ್ದಾರೆ.
ಸಿಡ್ನಿಯಲ್ಲಿ 3ನೇ ಟೆಸ್ಟ್ ಆಡುವ ವೇಳೆ ಭಾರತೀಯ ಕಠಿಣ ಕ್ವಾರಂಟೈನ್ಗೆ ಒಳಗಾಗುವುದಕ್ಕೆ ಒಪ್ಪುತ್ತಿಲ್ಲ ಎನ್ನುವ ಗಾಳಿಸುದ್ದಿ ಹಬ್ಬಿತ್ತು. ಇದರಿಂದ ಬ್ರಿಸ್ಬೇನ್‌ನ ಆರೋಗ್ಯ ಸಚಿವೆ ರಾಸ್ ಬೇಟ್ಸ್ ಕ್ವಾರಂಟೈನ್ಗೆ ಒಳಗಾಗದಿದ್ದರೆ ಭಾರತೀಯರು ಇಲ್ಲಿಗೆ ಬರುವುದು ಬೇಡ ಎಂದು ಎಚ್ಚರಿಕೆ ನೀಡಿದ್ದರು.
3ನೇ ಟೆಸ್ಟ್ ಡ್ರಾ ಸಾಧಿಸುವಲ್ಲಿ ಭಾರತ ತಂಡ ಯಶಸ್ವಿಯಾಯಿತು. ಆದರೆ, ಕೊನೆಯ ಟೆಸ್ಟ್ನಲ್ಲಿ ಭಾರತ ಪಂತ್ ಮತ್ತು ಗಿಲ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ನೀಡಿದ್ದ 328 ರನ್ಗಳ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿದ ಐತಿಹಾಸಿಕ ಜಯ ಸಾಧಿಸಿತ್ತು.
ಇದನ್ನು ಓದಿ:ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಅಗ್ರಸ್ಥಾನ ಉಳಿಸಿಕೊಂಡ ಕೊಹ್ಲಿ ಪಡೆ