ಬ್ರಿಸ್ಬೇನ್: ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪ್ರಾರಂಭವಾಗಿದೆ. ಈ ಪಂದ್ಯವು ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ ಅವರ ಟೆಸ್ಟ್ ವೃತ್ತಿ ಜೀವನದ 100 ನೇ ಪಂದ್ಯವಾಗಿದೆ. ಪಂದ್ಯ ಪ್ರಾರಂಭವಾಗುವ ಮೊದಲು ಅವರ ತಂಡದ ಸದಸ್ಯರು ಗೌರವ ಸಲ್ಲಿಸಿದರು.
-
So much greatness in one video! 😍
— Cricket Australia (@CricketAus) January 15, 2021 " class="align-text-top noRightClick twitterSection" data="
The 12 men to have reached 100 Test matches for Australia share their reflections ahead of Nathan Lyon’s 100th. Congratulations, @NathLyon421! 👏 #AUSvIND pic.twitter.com/FJVer2kb2J
">So much greatness in one video! 😍
— Cricket Australia (@CricketAus) January 15, 2021
The 12 men to have reached 100 Test matches for Australia share their reflections ahead of Nathan Lyon’s 100th. Congratulations, @NathLyon421! 👏 #AUSvIND pic.twitter.com/FJVer2kb2JSo much greatness in one video! 😍
— Cricket Australia (@CricketAus) January 15, 2021
The 12 men to have reached 100 Test matches for Australia share their reflections ahead of Nathan Lyon’s 100th. Congratulations, @NathLyon421! 👏 #AUSvIND pic.twitter.com/FJVer2kb2J
ಆಸೀಸ್ ಪರ 100 ಟೆಸ್ಟ್ ಪಂದ್ಯವಾಡಿದ 13ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಆಸ್ಟ್ರೇಲಿಯಾದ ಟೆಸ್ಟ್ ಸ್ಪೆಷಲಿಸ್ಟ್ ಸ್ಪಿನ್ನರ್. ಅವರು ಈವರೆಗೆ 396 ಟೆಸ್ಟ್ ವಿಕೆಟ್ ಪಡೆದಿದ್ದಾರೆ. ಇದಲ್ಲದೇ ಲಿಯಾನ್ ಟೆಸ್ಟ್ ಕ್ರಿಕೆಟ್ನಲ್ಲಿ 400 ವಿಕೆಟ್ ಗಳಿಸುವ ಮೂಲಕ ಮಹತ್ವದ ಮೈಲಿಗಲ್ಲು ತಲುಪುವ ಹಾದಿಯಲ್ಲಿದ್ದು, ಇಲ್ಲಿಯವರೆಗೆ 396 ವಿಕೆಟ್‌ಗಳನ್ನು ಪಡೆದಿದ್ದು, ಈ ಪಂದ್ಯದಲ್ಲಿ 4 ವಿಕೆಟ್ ಪಡೆದು ಹೊಸ ದಾಖಲೆ ಬರೆಯುವ ವಿಶ್ವಾಸದಲ್ಲಿದ್ದಾರೆ.
ಓದಿ : ಅಂತಿಮ ಟೆಸ್ಟ್ ಪಂದ್ಯಕ್ಕೆ ವರುಣನ ಅಡ್ಡಿ ಸಾಧ್ಯತೆ
ಅವರು 2011 ರಲ್ಲಿ ಗೌಲ್ನಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಇವರು, ಮೊದಲ ಎಸೆತದಲ್ಲೇ ವಿಕೆಟ್ ಪಡೆದು ದಾಖಲೆ ಬರೆದಿದ್ದರು. ಇದಲ್ಲದೇ ಮೊದಲ ಪಂದ್ಯದಲ್ಲಿ ಐದು ವಿಕೆಟ್ ಪಡೆದಿದ್ದರು. ಇಲ್ಲಿಯವರೆಗೂ ಅವರು 18 ಬಾರಿ ಐದು ವಿಕೆಟ್ ಪಡೆದಿದ್ದಾರೆ. ಟೆಸ್ಟ್ನಲ್ಲಿ 31.98. ಸರಾಸರಿಯಲ್ಲಿ 396 ವಿಕೆಟ್ ಪಡೆದಿದ್ದಾರೆ.