ನವದೆಹಲಿ : ಆಸೀಸ್ ವಿರುದ್ಧದ ಟೆಸ್ಟ್ ಸರಣಿಯ ಆರಂಭದಲ್ಲೇ ಆಘಾತ, ನಂತರ ಅಸಂಖ್ಯಾತ ಆಟಗಾರರ ಗಾಯ. ಇದರ ನಡುವೆಯೂ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸಾಧಿಸಿದ್ದು ನಿಜಕ್ಕೂ ಗಮನಾರ್ಹ ಗೆಲುವು ಎಂದು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಶ್ಲಾಘಿಸಿದರು.
ಭಾರತ ತಂಡ ಮೊದಲ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 36 ರನ್ಗಳಿಗೆ ಆಲೌಟ್ ಆಗುವ ಮೂಲಕ ಮಾಜಿ ಕ್ರಿಕೆಟಿಗರ ಟೀಕೆಗೆ ಗುರಿಯಾಗಿತ್ತು. ಬಳಿಕ ವಿರಾಟ್ ಕೊಹ್ಲಿ ಅನುಪಸ್ಥಿತಿ ಮತ್ತು ಪ್ರಮುಖ ಆಟಗಾರರು ಗಾಯಕ್ಕೆ ಒಳಗಾದರು. ಆದರೂ ಆಸ್ಟ್ರೇಲಿಯಾವನ್ನು ಬಗ್ಗು ಬಡಿದ ಭಾರತ 2-1ರಿಂದ ಸರಣಿ ಗೆಲುವು ಸಾಧಿಸಿ ಟೂರ್ನಿಯನ್ನ ಅವಿಸ್ಮರಣೀಯವಾಗಿಸಿತು.
ಇದನ್ನೂ ಓದಿ...ಇಂಡಿಯಾ ವರ್ಸಸ್ ಇಂಗ್ಲೆಂಡ್ ಫೈಟ್: ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ, ದಿನಾಂಕಗಳ ವಿವರ ಇಲ್ಲಿದೆ ನೋಡಿ!
ಆಸ್ಟ್ರೇಲಿಯಾ ವಿರುದ್ಧ ಅದರಲ್ಲೂ ಅವರ ನೆಲದಲ್ಲೇ ಆಡುವುದು ಸವಾಲೇ ಸರಿ. ಮೊದಲ ಸೋಲಿನ ನಂತರ ಬಹುತೇಕರು ಬಾರ್ಡರ್-ಗವಾಸ್ಕರ್ ಟ್ರೋಫಿ ಆಸೀಸ್ ಕೈ ಸೇರುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ, ತಂಡದ ಮತ್ತು ಯುವಕರ ಅತ್ಯದ್ಭುತ ಪ್ರದರ್ಶನ ಕ್ರಿಕೆಟ್ ತಜ್ಞರ ಲೆಕ್ಕಾಚಾರಗಳನ್ನು ತಲೆಕೆಳಗಾಗುವಂತೆ ಮಾಡಿದ್ದಲ್ಲದೆ ಇತಿಹಾಸ ಬರೆದರು. ಭಾರತದ ಈ ಸಾಧನೆ ಕ್ರಿಕೆಟ್ ಭ್ರಾತೃತ್ವ ಎಂದು ಬಣ್ಣಿಸಿದರು.
ಅದರಲ್ಲೂ 32 ವರ್ಷಗಳಿಂದ ಗೆಲುವಿನ ಭದ್ರಕೋಟೆಯಾಗಿದ್ದ ಬ್ರಿಸ್ಬೇನ್ನಲ್ಲಿ ಅಂತಿಮ ಪಂದ್ಯದಲ್ಲಿ ಭಾರತ ತಂಡ ಸ್ಮರಣೀಯ ಗೆಲುವು ಸಾಧಿಸಿದೆ. ಅಲ್ಲದೆ, 32 ವರ್ಷಗಳ ದಾಖಲೆ ಮುರಿಯಿತು. ಯಾರೂ ಕೂಡ ಈ ದಾಖಲೆ ಮುರಿಯುತ್ತದೆ ಎಂದು ಊಹಿಸಿರಲಿಲ್ಲ ಎಂದರು.
ಕೊರೊನಾ ಕಾರಣದಿಂದಾಗಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ನಡುವಿನ ಟೆಸ್ಟ್ ಸರಣಿ ಮುಂದೂಡಿಕೆಯಾದ ಕಾರಣ, ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಗಿಟ್ಟಿಸಿಕೊಂಡ ಮೊದಲ ತಂಡವಾಗಿದೆ.
ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲು ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಭಾರತ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಬರುವ ಶುಕ್ರವಾರದಿಂದ ಇಂಗ್ಲೆಂಡ್ ಜೊತೆ ಭಾರತವು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.