ETV Bharat / sports

ಕುತೂಹಲ ಮೂಡಿಸಿದ ಕೊನೆಯ ದಿನದಾಟ: ಗಿಲ್ ಗುದ್ದಿಗೆ ಕಾಂಗರೂ ಪಡೆ ಹೈರಾಣು

author img

By

Published : Jan 19, 2021, 7:45 AM IST

Updated : Jan 19, 2021, 8:17 AM IST

ಎರಡನೇ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 294ರನ್​ಗಳಿಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡಿದ್ದು, ಟೀಂ ಇಂಡಿಯಾ ಗೆಲುವಿಗೆ 328ರನ್​ಗಳ ಟಾರ್ಗೆಟ್ ನೀಡಿದೆ. ಇದರ ಬೆನ್ನತ್ತಿರುವ ರಹಾನೆ ಪಡೆ, ಮೊದಲ ವಿಕೆಟ್​ ನಷ್ಟಕ್ಕೆ 83 ರನ್​ಗಳಿಕೆ ಮಾಡಿದ್ದು, ಆರಂಭಿಕ ಆಟಗಾರ ರೋಹಿತ್​ ಶರ್ಮಾ 7 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

INDIA VS AUSTRALIA 4TH TEST
ಶುಬ್ಮನ್ ಗಿಲ್​

ಬ್ರಿಸ್ಬೇನ್: ಬಾರ್ಡ್ - ಗವಾಸ್ಕರ್ ಸರಣಿಯ ಅಂತಿಮ ಟೆಸ್ಟ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದ್ದು, ದ್ವಿತೀಯ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಸುಭದ್ರ ಸ್ಥಿತಿಯಲ್ಲಿದೆ.

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಕೊನೆಯ ಟೆಸ್ಟ್​ ಪಂದ್ಯ ರೋಚಕತೆ ಪಡೆದುಕೊಂಡಿದ್ದು, ವಿರಾಮದ ವೇಳೆಗೆ ಟೀಂ ಇಂಡಿಯಾ 1 ವಿಕೆಟ್ ಕಳೆದುಕೊಂಡು 83ರನ್​ಗಳಿಕೆ ಮಾಡಿದೆ.

ಎರಡನೇ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 294 ರನ್​ಗಳಿಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡಿದ್ದು, ಟೀಂ ಇಂಡಿಯಾ ಗೆಲುವಿಗೆ 328 ರನ್​ಗಳ ಟಾರ್ಗೆಟ್ ನೀಡಿದೆ. ಇದರ ಬೆನ್ನಟ್ಟಿರುವ ರಹಾನೆ ಪಡೆ, ಮೊದಲ ವಿಕೆಟ್​ ನಷ್ಟಕ್ಕೆ 83ರನ್​ ಕಲೆ ಹಾಕಿದ್ದು, ಆರಂಭಿಕ ಆಟಗಾರ ರೋಹಿತ್​ ಶರ್ಮಾ 7 ರನ್​ಗಳಿಸಿ ಔಟಾಗಿದ್ದಾರೆ. ಚೇತೇಶ್ವರ್​ ಪೂಜಾರಾ 8ರನ್ ಹಾಗೂ ಶುಬ್ಮನ್ ಗಿಲ್​ 64 ರನ್​ ಮಾಡಿ ಕ್ರೀಸ್​ನಲ್ಲಿದ್ದಾರೆ. ಆಸ್ಟ್ರೇಲಿಯಾ ಪರ ಕಮಿನ್ಸ್​​​ ಒಂದು ವಿಕೆಟ್​ ಪಡೆದುಕೊಂಡರು.

ಓದಿ :ಗುಡ್​ನ್ಯೂಸ್​: ನೆಟ್​ನಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ ಅಶ್ವಿನ್​, ಬುಮ್ರಾ!

2ನೇ ಇನ್ನಿಂಗ್ಸ್​ನಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿದ ಮೊಹಮ್ಮದ್ ಸಿರಾಜ್​ ಚೊಚ್ಚಲ 5 ವಿಕೆಟ್ ಪಡೆದುಕೊಂಡು ಮಿಂಚಿದ್ರೆ,. ಅವರಿಗೆ ಉತ್ತಮ ಸಾಥ್ ನೀಡಿರುವ ಠಾಕೂರ್​ 4 ವಿಕೆಟ್ ಪಡೆದುಕೊಂಡರು.

Last Updated : Jan 19, 2021, 8:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.