ಬ್ರಿಸ್ಬೇನ್: ಬಾರ್ಡರ್ - ಗವಾಸ್ಕರ್ ಸರಣಿಯ ಅಂತಿಮ ಟೆಸ್ಟ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದ್ದು, ದ್ವಿತೀಯ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಸುಭದ್ರ ಸ್ಥಿತಿಯಲ್ಲಿದೆ.
ಟಿ ವಿರಾಮದ ವೇಳೆಗೆ ಭಾರತ ತಂಡ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು 183 ರನ್ಗಳಿಸಿದೆ. ಚೇತೇಶ್ವರ ಪೂಜಾರ 43* ಹಾಗೂ ರಿಷಭ್ ಪಂತ್ 10 * ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ.
-
Tea in Brisbane ☕
— ICC (@ICC) January 19, 2021 " class="align-text-top noRightClick twitterSection" data="
India scored 100 runs for the loss of two wickets in the second session.
Who will the final session belong to?#AUSvIND | https://t.co/oDTm20rn07 pic.twitter.com/iqUymZbiw0
">Tea in Brisbane ☕
— ICC (@ICC) January 19, 2021
India scored 100 runs for the loss of two wickets in the second session.
Who will the final session belong to?#AUSvIND | https://t.co/oDTm20rn07 pic.twitter.com/iqUymZbiw0Tea in Brisbane ☕
— ICC (@ICC) January 19, 2021
India scored 100 runs for the loss of two wickets in the second session.
Who will the final session belong to?#AUSvIND | https://t.co/oDTm20rn07 pic.twitter.com/iqUymZbiw0
ತೀವ್ರ ಕುತೂಹಲ ಕೆರಳಿಸಿದ್ದು, ದ್ವಿತೀಯ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಮೊದಲ ವಿರಾಮದ ವೇಳೆಗೆ ಸುಭದ್ರ ಸ್ಥಿತಿಯಲ್ಲಿತ್ತು. ಕೊನೆಯ ದಿನ ಇನ್ನಿಂಗ್ಸ್ ಆರಂಭಿಸಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಡುವಲ್ಲಿ ಮತ್ತೆ ಎಡವಿದರು. ರೋಹಿತ್ ಶರ್ಮಾ ಕೇವಲ 7 ರನ್ಗಳಿಸಿ ಔಟಾಗುವ ಮೂಲಕ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ನಂತರ ಕ್ರಿಸ್ಗಿಳಿದ ಅನುಭವಿ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ, ಯಂಗ್ ಬಾಯ್ ಗಿಲ್ ಜೊತೆ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ಎರಡನೇ ವಿಕೆಟ್ಗೆ ಶತಕದ ಜೊತೆಯಾಟವಾಡಿತು.
ಹೊಡಿ ಬಡಿ ಆಟಕ್ಕೆ ಮುಂದಾಗಿದ್ದ ಗಿಲ್ ಪಂದ್ಯವನ್ನು ಗೆಲ್ಲಿಸಲೇಬೇಕು ಎನ್ನುವ ಹಠದಲ್ಲಿ ಬ್ಯಾಟ್ ಬಿಸಿದರು. ಅದ್ಬುತ ಪಾರ್ಮ್ನಲ್ಲಿದ್ದ ಗಿಲ್ ಕಾಂಗರೊ ಬೌಲರ್ಗಳನ್ನು ಕಾಡಿದರು. ಈ ವೇಳೆ ದಾಳಿಗಿಳಿದ ನಾಥನ್ ಲಿಯಾನ್ ಶುಬ್ಮನ್ ಗಿಲ್ ವಿಕೆಟ್ ಪಡೆಯುವ ಮೂಲಕ ಆಸೀಸ್ ಪಡೆಗೆ ಬ್ರೇಕ್ ತಂದು ಕೊಟ್ಟರು. ಈ ಇನ್ನಿಂಗ್ಸ್ನಲ್ಲಿ ಗಿಲ್ 146 ಎಸೆತ ಎದುರಿಸಿ, 8 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ 91 ರನ್ ಗಳಿಸಿ ಔಟಾಗುವ ಮೂಲಕ, ಚೊಚ್ಚಲ ಶತಕವನ್ನ ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದರು.
ಗಿಲ್ ವಿಕೆಟ್ ನಂತರ ಕ್ರಿಸ್ಗಿಳಿದ ನಾಯಕ ರಹಾನೆ ಆಟ ಕೇವಲ 24 ರನ್ಗಳಿಗೆ ಅಂತ್ಯವಾಯಿತು. ನಂತರ ಪೂಜಾರ ಜೊತೆ ಸೇರಿದ ರಿಷಭ್ ಪಂಥ್ ತಾಳ್ಮೆಯ ಆಟಕ್ಕೆ ಮುಂದಾದರು. ಮೊದಲ ಇನ್ನಿಂಗ್ಸ್ನಲ್ಲಿ ಅಬ್ಭರಿಸಿದ್ದ ಪಂತ್ ಎರಡನೇ ಇನ್ನಿಂಗ್ಸ್ನಲ್ಲಿ ತಾಳ್ಮೆಯ ಆಟವಾಡುತ್ತಿದ್ದಾರೆ.
ಇನ್ನು ಆಸ್ಟ್ರೇಲಿಯಾ ಪರ ಕಮೀನ್ಸ್ 2 ವಿಕೆಟ್ ಪಡೆದರೆ ನಾಥನ್ ಲಿಯಾನ್ 1 ವಿಕೆಟ್ ಪಡೆದರು.