ETV Bharat / sports

ಬಾಕ್ಸಿಂಗ್‌ ಡೇ ಟೆಸ್ಟ್.. ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್‌ಗೆ ಬುಮ್ರಾ, ಅಶ್ವಿನ್ ಪೆಟ್ಟು ; ಟೀಂ ಇಂಡಿಯಾ 36/1

2ನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ದಿನದ ಅಂತ್ಯಕ್ಕೆ ಭಾರತ ಒಂದು ವಿಕೆಟ್​​ ಕಳೆದುಕೊಂಡು 36 ರನ್​ ಗಳಿಸಿದೆ. ಶುಭಮನ್​ ಗಿಲ್​ 28 ಹಾಗೂ ಚೇತೇಶ್ವರ ಪೂಜಾರ 7 ರನ್​ಗಳಿಸಿ ಕ್ರಿಸ್​ನಲ್ಲಿದ್ದಾರೆ..

Ind vs Aus, Boxing Day Test
ಬಾಕ್ಸಿಂಗ್ ಡೇ ಟೆಸ್ಟ್‌
author img

By

Published : Dec 26, 2020, 1:08 PM IST

ಮೆಲ್ಬೋರ್ನ್ : ಆಸ್ಟ್ರೇಲಿಯಾ ಎದುರಿನ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​​ ಮಾಡಲು ನಿರ್ಧರಿಸಿದ ಟಿಮ್‌ ಪೈನ್‌ ಬಳಗಕ್ಕೆ ರಹಾನೆ ಹುಡುಗರು​ ಶಾಕ್ ಕೊಟ್ಟಿದ್ದು ಮೊದಲ ದಿನವೇ 195 ರನ್​​ಗಳಿಗೆ ಸರ್ವ ಪತನ ಕಂಡಿತು.

ಆದರೆ, ಭಾರತ ತಂಡವೂ ತನ್ನ ಮೊದಲ ಇನ್ನಿಂಗ್ಸ್​​ ಆರಂಭದಲ್ಲೇ ಆಘಾತ ಅನುಭವಿಸಿದೆ. ಓಪನರ್​ ಆಗಿ ಕಣಕ್ಕಿಳಿದ ಮಯಾಂಕ್ ಅಗರವಾಲ್​ ಮತ್ತು ಶುಭಮನ್​ ಗಿಲ್​​ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು.

ಮಯಾಂಕ್ ಅಗರವಾಲ್​​, ಮಿಚಲ್​ ಸ್ಟಾರ್ಕ್​ ಅವರ ಮೊದಲನೇ ಓವರ್​ನಲ್ಲಿ ಶೂನ್ಯಕ್ಕೆ ಎಲ್​ಬಿಡಬ್ಲ್ಯೂ ಆದರು. ಈ ಮೂಲಕ ಮೊದಲ ದಿನದಂತ್ಯಕ್ಕೆ ಭಾರತ ಒಂದು ವಿಕೆಟ್​​ ಕಳೆದುಕೊಂಡು 36 ರನ್​ ಗಳಿಸಿತು. ಶುಭಮನ್​ ಗಿಲ್​ 28 ಹಾಗೂ ಚೇತೇಶ್ವರ ಪೂಜಾರ 7 ರನ್​ಗಳಿಸಿ ನಾಳೆ ಆಟ ಮುಂದುವರೆಸಲಿದ್ದಾರೆ. ಆಸ್ಟೇಲಿಯಾ ಪರ ಸ್ಟಾರ್ಕ್ ಒಂದು ವಿಕೆಟ್‌ ಪಡೆದರು.

ಆಸೀಸ್ ಮೊದಲ ಇನ್ನಿಂಗ್ಸ್‌ ಹೀಗಿತ್ತು..: ಆರಂಭಿಕನಾಗಿ ಕಣಕ್ಕಿಳಿದ ಜೋ ಬರ್ನ್ಸ್ ಹಾಗೂ ಮ್ಯಾಥ್ಯೂ ವೇಡ್​ ನಿರೀಕ್ಷಿತ ಪ್ರದರ್ಶನ​ ನೀಡಲಿಲ್ಲ. ಬರ್ನ್ಸ್ ಅವರನ್ನು​​ ಶೂನ್ಯಕ್ಕೆ ಔಟ್​ ಮಾಡಿದ ಬುಮ್ರಾ ಮೊದಲ ವಿಕೆಟ್​ ಉರುಳಿಸಿದರು.

ನಂತರ ಕ್ರೀಸಿಗೆ ಬಂದ ಮಾರ್ನಸ್​​ ಲಾಬುಶೇನ್, ವೇಡ್​ ಜೊತೆ ಸೇರಿ ಕೆಲ ಹೊತ್ತು ಭಾರತದ ಬೌಲರ್‌​ಗಳನ್ನು ದಂಡಿಸಿದರು. ಆದರೆ, ಇದಕ್ಕೆ ಕಡಿವಾಣ ಹಾಕಿದ ಅಶ್ವಿನ್,​​ ವೇಡ್ ವಿಕೆಟ್​ ಕಬಳಿಸಿದರು. ಜಡೇಜಾ ಅದ್ಭುತ ಕ್ಯಾಚ್​ಗೆ ವೇಡ್​ ಬಲಿಯಾದರು.

ನಂತರ ಬಂದ ಸ್ಟೀವ್​ ಸ್ಮಿತ್ ಕೂಡ​ ಅಶ್ವಿನ್​ ಅವರ ಕೈಚಳಕಕ್ಕೆ ಯಾವುದೇ ರನ್​​ಗಳಿಸದೆ ಬೌಲ್ಡ್​ ಆಗಿ ಪೆವಿಲಿಯನ್​ ಸೇರಿದರು. ಇದಾದ ಬಳಿಕ ಬಂದ ಟ್ರಾವಿಸ್​ ಹೆಡ್,​ ಮಾರ್ನಸ್​​ ಲಾಬುಶೇನ್ ಜೊತೆ ಸೇರಿ ಅರ್ಧಶತಕದ ಜೊತೆಯಾಟವಾಡಿದರು. ಈ ಜೋಡಿಯನ್ನು ಬುಮ್ರಾ ಬೇರ್ಪಡಿಸಿದರು.

ಟ್ರಾವಿಸ್​ ಹೆಡ್ (38) ರನ್​ಗಳಿಸಿದಾಗ ನಾಯಕ ರಹಾನೆ ಕ್ಯಾಚಿತ್ತರು. ಇದಾದ ಕೆಲವೇ ಹೊತ್ತಿನಲ್ಲಿ ಟೀಂ​​ ಇಂಡಿಯಾ ಪರ ಪದಾರ್ಪಣೆ ಟೆಸ್ಟ್ ಆಡುತ್ತಿರುವ ಮೊಹಮ್ಮದ್ ಸಿರಾಜ್​ ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. ಇದೇ ಪಂದ್ಯದಲ್ಲಿ ಪದಾರ್ಪಣೆ​ ಮಾಡಿದ ಮತ್ತೊಬ್ಬ ಆಟಗಾರ ಶುಭಮನ್​ ಗಿಲ್​ ಕ್ಯಾಚ್​ಗೆ ಮಾರ್ನಸ್​​ ಲಾಬುಶೇನ್ (48) ಪೆವಿಲಿಯನ್​ ಹಾದಿ ಹಿಡಿದರು.

ಓದಿ: ಆಸೀಸ್ ವಿರುದ್ಧ ಭಾರತದ ಬಿಗಿ ಹಿಡಿತ: ಬುಮ್ರಾ, ಅಶ್ವಿನ್‌ ದಾಳಿಗೆ ಬೆದರಿದ ಪೈನ್‌ ಪಡೆ

ನಾಯಕ ಟಿಮ್ ಪೈನ್‌ (13) ರನ್​ಗಳಿಸಿ ಅಶ್ವಿನ್​ಗೆ ವಿಕೆಟ್​ ಒಪ್ಪಿಸಿದರು. ಕ್ಯಾಮರೂನ್ ಗ್ರೀನ್ (12) ರನ್​ ಗಳಿಸಿದಾಗ ಸಿರಾಜ್​ ಬೌಲಿಂಗ್​ನಲ್ಲಿ ಎಲ್​ಬಿಗೆ ಬಲಿಯಾದರು. ಕಮಿನ್ಸ್​ 9, ಸ್ಟಾರ್ಕ್ 7, ನಾಥನ್​ ಲಯಾನ್​ 20, ಹೆಜಲ್​ವುಡ್ ​4* ರನ್ ​ಗಳಿಸಿದರು. ಟೀಂ​ ಇಂಡಿಯಾ ಪರ ಬುಮ್ರಾ 4 ವಿಕೆಟ್​ ಪಡೆದು ಮಿಂಚಿದ್ರೆ, ಅಶ್ವಿನ್​ 3 ಹಾಗೂ ಸಿರಾಜ್​ 2, ಜಡೇಜಾ ಒಂದು ವಿಕೆಟ್​ ಪಡೆದು ಮಿಂಚಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.