ETV Bharat / sports

ಮುಂದಿನ ಟೆಸ್ಟ್​​ ಪಂದ್ಯಗಳಿಗೆ ಉಮೇಶ್‌ ಯಾದವ್‌ ಔಟ್​.. ಟಿ ನಟರಾಜನ್​ ಇನ್!? - ಉಮೇಶ್‌ ಯಾದವ್‌

ಎರಡನೇ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​​ನ 4ನೇ ಓವರ್​ ಮಾಡುವಾಗ ಸ್ನಾಯು ಸೆಳೆತಕ್ಕೆ ತುತ್ತಾಗಿ ಪಂದ್ಯದಿಂದ ಹೊರ ನಡೆದಿದ್ದರು ಉಮೇಶ್ ಯಾದವ್. ಈಗ ಮೂಲಗಳ ಪ್ರಕಾರ ಮುಂದಿನ ಎರಡೂ ಪಂದ್ಯಗಳಿಗೆ ಯಾದವ್​ ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ..

Umesh Yadav
ಉಮೇಶ್‌ ಯಾದವ್‌ ಔಟ್
author img

By

Published : Dec 29, 2020, 12:39 PM IST

ಮೆಲ್ಬೋರ್ನ್ ‌: ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್‌ ಡೇ ಟೆಸ್ಟ್‌ ದ್ವಿತೀಯ ಇನಿಂಗ್ಸ್‌ನಲ್ಲಿ ಗಾಯಕ್ಕೆ ತುತ್ತಾಗಿದ್ದ ಭಾರತ ತಂಡದ ವೇಗಿ ಉಮೇಶ್‌ ಯಾದವ್‌, ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್ ಸರಣಿಯ ಮುಂದಿನ ಎರಡು ಪಂದ್ಯಗಳಲ್ಲಿ ಆಡುವುದು ಬಹುತೇಕ ಅನುಮಾನ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಎರಡನೇ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​​ನ 4ನೇ ಓವರ್​ ಮಾಡುವಾಗ ಸ್ನಾಯು ಸೆಳೆತಕ್ಕೆ ತುತ್ತಾಗಿ ಪಂದ್ಯದಿಂದ ಹೊರ ನಡೆದಿದ್ದರು. ಈಗ ಮೂಲಗಳ ಪ್ರಕಾರ ಮುಂದಿನ ಎರಡು ಪಂದ್ಯಗಳಿಗೆ ಯಾದವ್​ ಅಲಭ್ಯರಾಗುವುದು ಬಹುತೆಕ ಖಚಿತವಾಗಿದೆ.

ಇವರ ಸ್ಥಾನಕ್ಕೆ ಟೀಂ​ ಇಂಡಿಯಾ ಯುವ ಬೌಲರ್​ ಟಿ. ನಟರಾಜನ್​ಗೆ ಅವಕಾಶ ನೀಡಬಹುದು ಎಂದು ಹೇಳಲಾಗುತ್ತಿದ್ದು, ಬಿಸಿಸಿಐ ಮೂಲಗಳು ನಟರಾಜನ್​ ಅವರನ್ನ ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ.

ಓದಿ :ಈ ಸೋಲಿಗೆ ನಮ್ಮ ತಂಡದ ಕಳಪೆ ಪ್ರದರ್ಶನವೇ ಕಾರಣ : ಟಿಮ್ ಪೇನ್

ಈಗಾಗಲೇ ಹಿರಿಯ ವೇಗಿಗಳಾದ ಮೊಹಮ್ಮದ್‌ ಶಮಿ ಹಾಗೂ ಇಶಾಂತ್‌ ಶರ್ಮಾ ಸೇವೆಯನ್ನು ಟೀಂ‌ ಇಂಡಿಯಾ ಕಳೆದುಕೊಂಡಿದೆ. ಒಂದು ವೇಳೆ ಟೆಸ್ಟ್‌ ಸರಣಿಯ ಇನ್ನುಳಿದ ಎರಡೂ ಪಂದ್ಯಗಳಿಗೂ ಉಮೇಶ್‌ ಯಾದವ್‌ ಅಲಭ್ಯರಾದ್ರೆ ಟೀಂ​ ಇಂಡಿಯಾಗೆ ಭಾರಿ ನಷ್ಟವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.