ಮೆಲ್ಬರ್ನ್: ನಾಳೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾಕ್ಸಿಂಗ್ ಡೇ ಟೆಸ್ಟ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಮೊದಲ ಟೆಸ್ಟ್ ತಂಡದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸುವ ನಿರ್ಧಾರ ತೆಗೆದುಕೊಂಡಿದೆ. ಇದೀಗ ಬಿಸಿಸಿಐ ಆಡುವ 11 ರ ಭಾರತ ತಂಡವನ್ನು ಪ್ರಕಟಿಸಿದೆ.
ಎರಡನೇ ಮತ್ತು ಭಾರತಕ್ಕೆ ಮಹತ್ವದ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಮತ್ತು ವೇಗಿ ಮಹಮ್ಮದ್ ಸಿರಾಜ್ ಟೆಸ್ಟ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೇ ವೇಳೆ ಕಳಪೆ ಪ್ರದರ್ಶನ ತೋರಿದ ಪೃಥ್ವಿ ಶಾ, ಮತ್ತು ಸಹಾ ತಂಡದಿಂದ ಹೊರಬಿದ್ದಿದ್ದಾರೆ.
ಓದಿ: ಕೆ ಎಲ್ ರಾಹುಲ್, ರಿಷಬ್ ಪಂತ್ ಅಪಾಯಕಾರಿ.. ಅಡಿಲೇಡ್‌ನಂತೆ ಸೋಲು ಮರುಕಳಿಸದು: ಆಸೀಸ್ ನಾಯಕ
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಹೊಣೆ ಅಜಿಂಕ್ಯ ರಹಾನ್ ಹೆಗಲಿಗೆ ಬಿದ್ದಿದೆ. ಅದೇ ರೀತಿ ಮೊಹಮ್ಮದ್ ಶಮಿ ಬದಲಿಗೆ ಮತ್ತೋರ್ವ ವೇಗಿ ಮಹಮ್ಮದ್ ಸಿರಾಜ್ ತಂಡ ಸೇರಿಕೊಂಡಿದ್ದಾರೆ. ನಿರೀಕ್ಷೆಯಂತೆ ರವೀಂದ್ರ ಜಡೇಜಾ ಹಾಗು ರಿಷಬ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
-
ALERT🚨: #TeamIndia for 2nd Test of the Border-Gavaskar Trophy against Australia to be played in MCG from tomorrow announced. #AUSvIND pic.twitter.com/4g1q3DJmm7
— BCCI (@BCCI) December 25, 2020 " class="align-text-top noRightClick twitterSection" data="
">ALERT🚨: #TeamIndia for 2nd Test of the Border-Gavaskar Trophy against Australia to be played in MCG from tomorrow announced. #AUSvIND pic.twitter.com/4g1q3DJmm7
— BCCI (@BCCI) December 25, 2020ALERT🚨: #TeamIndia for 2nd Test of the Border-Gavaskar Trophy against Australia to be played in MCG from tomorrow announced. #AUSvIND pic.twitter.com/4g1q3DJmm7
— BCCI (@BCCI) December 25, 2020
ಟೀಂ ಇಂಡಿಯಾ ಪ್ಲೇಯಿಂಗ್ 11:
- ಅಜಿಂಕ್ಯ ರಹಾನೆ (ನಾಯಕ)
- ಮಯಾಂಕ್ ಅಗರವಾಲ್
- ಶುಭಮನ್ ಗಿಲ್
- ಚೇತೇಶ್ವರ ಪುಜಾರ
- ಹನುಮ ವಿಹಾರಿ
- ರಿಷಭ್ ಪಂತ್ (ವಿಕೆಟ್ ಕೀಪರ್)
- ರವೀಂದ್ರ ಜಡೇಜಾ
- ಆರ್.ಅಶ್ವಿನ್
- ಉಮೇಶ್ ಯಾದವ್
- ಜಸ್ಪ್ರೀತ್ ಬುಮ್ರಾ
- ಮಹಮ್ಮದ್ ಸಿರಾಜ್