ETV Bharat / sports

ಮುಂದಿನ ವರ್ಷ ಜುಲೈನಲ್ಲಿ ಭಾರತದಿಂದ ಇಂಗ್ಲೆಂಡ್ ಪ್ರವಾಸ.. ಟಿ-20, ಏಕದಿನ ಸರಣಿಯಲ್ಲಿ ಭಾಗಿ.. - ಭಾರತ-ಇಂಗ್ಲೆಂಡ್ ಏಕದಿನ ಸರಣಿ

ಇಂಗ್ಲೆಂಡ್​ ಪ್ರವಾಸಕ್ಕೂ ಮೊದಲು ಭಾರತ ತವರಿನಲ್ಲೇ ದಕ್ಷಿಣ ಆಫ್ರಿಕಾದೊಂದಿಗೆ ನಿಗದಿತ ಓವರ್​ಗಳ ಕ್ರಿಕೆಟ್​ನಲ್ಲಿ ಭಾಗಿಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ..

England vs India
England vs India
author img

By

Published : Sep 8, 2021, 4:10 PM IST

ಲಂಡನ್ : ನ್ಯೂಜಿಲ್ಯಾಂಡ್ ಜೊತೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಆಡಲು ಮೇ ತಿಂಗಳಲ್ಲಿ ಇಂಗ್ಲೆಂಡ್​ಗೆ ತೆರಳಿದ್ದ ಟೀಂ ಇಂಡಿಯಾ ಇದಾದ ಬಳಿಕ ಆಂಗ್ಲರೊಂದಿಗೆ ಸುದೀರ್ಘ ಟೆಸ್ಟ್​​ ಸರಣಿಯಲ್ಲಿ ಭಾಗಿಯಾಗಿದೆ. ಇದರ ಬೆನ್ನಲ್ಲೇ ಮುಂದಿನ ವರ್ಷದ ಜುಲೈನಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ ಎಂಬ ಮಾಹಿತಿ ಪ್ರಕಟಗೊಂಡಿದೆ.

ಇಂಗ್ಲೆಂಡ್​ ವಿರುದ್ಧ ಐದು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಿರುವ ವಿರಾಟ್​ ಕೊಹ್ಲಿ ಪಡೆ, ಸೆಪ್ಟೆಂಬರ್​ 10ರಿಂದ ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್​​ ಪಂದ್ಯ ಆಡಲಿದೆ. ಇದು ಮುಕ್ತಾಯಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ತಕ್ಷಣವೇ ದುಬೈಗೆ ಪ್ರಯಾಣ ಬೆಳೆಸಲಿದೆ. ಇಲ್ಲಿ ಐಪಿಎಲ್​ ಹಾಗೂ ಐಸಿಸಿ ಟಿ-20 ವಿಶ್ವಕಪ್​​ನಲ್ಲಿ ಭಾಗಿಯಾಗಲಿದೆ. ಇದಾದ ಬಳಿಕ ಕೊಹ್ಲಿ ಪಡೆ ಮತ್ತೊಮ್ಮೆ ಆಂಗ್ಲರ ನಾಡಿಗೆ ಪ್ರವಾಸ ಕೈಗೊಳ್ಳಲಿದೆ.

India team
ಮುಂದಿನ ವರ್ಷ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ

ಮುಂದಿನ ವರ್ಷ ಜುಲೈ ತಿಂಗಳಲ್ಲಿ ಸಿಮೀತ ಓವರ್​ಗಳ ಕ್ರಿಕೆಟ್​ನಲ್ಲಿ ಭಾಗಿಯಾಗಲು ಇಂಗ್ಲೆಂಡ್​ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ಮೂರು ಟಿ-20 ಹಾಗೂ ಮೂರು ಏಕದಿನ ಪಂದ್ಯದಲ್ಲಿ ಭಾಗಿಯಾಗಲಿದೆ. ಅದಕ್ಕಾಗಿ ಇಂಗ್ಲೆಂಡ್​​​​​ ಕ್ರಿಕೆಟ್​ ಬೋರ್ಡ್​ ವೇಳಾಪಟ್ಟಿ ರಿಲೀಸ್ ಮಾಡಿದೆ.

ಇದನ್ನೂ ಓದಿರಿ: ICC ಟೆಸ್ಟ್​​ ರ‍್ಯಾಂಕಿಂಗ್‌ : ಬೌಲಿಂಗ್​ನಲ್ಲಿ ಬುಮ್ರಾ ಅಮೋಘ ಸಾಧನೆ, 5ನೇ ಸ್ಥಾನದಲ್ಲಿ ರೋಹಿತ್​​

ಭಾರತ-ಇಂಗ್ಲೆಂಡ್​​ ಟಿ20 ಸರಣಿ ವೇಳಾಪಟ್ಟಿ

  • ಜುಲೈ 1, 2022 ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್
  • ಜುಲೈ 3, 2022 ಟ್ರೆಂಟ್​ ಬ್ರೀಡ್ಜ್​
  • ಜುಲೈ 6, 2022 ಆಗೇಸ್​ ಬೌಲ್​

ಭಾರತ-ಇಂಗ್ಲೆಂಡ್​​ ಏಕದಿನ ಸರಣಿ ವೇಳಾಪಟ್ಟಿ

  • ಜುಲೈ 9, 2022 ಎಡ್ಜ್‌ಬಾಸ್ಟನ್
  • ಜುಲೈ 12, 2022 ಓವಲ್​
  • ಜುಲೈ 14, 2022 ಲಾರ್ಡ್ಸ್​​​

ಇಂಗ್ಲೆಂಡ್​ ಪ್ರವಾಸಕ್ಕೂ ಮೊದಲು ಭಾರತ ತವರಿನಲ್ಲೇ ದಕ್ಷಿಣ ಆಫ್ರಿಕಾದೊಂದಿಗೆ ನಿಗದಿತ ಓವರ್​ಗಳ ಕ್ರಿಕೆಟ್​ನಲ್ಲಿ ಭಾಗಿಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.