ETV Bharat / sports

ಅತಿ ಹೆಚ್ಚು ಟಿ-20 ಪಂದ್ಯ ಗೆದ್ದು ದಾಖಲೆ: ಪಾಕಿಸ್ತಾನ ಹಿಂದಿಕ್ಕಿ ಅಗ್ರಸ್ಥಾನಕ್ಕೆರಿದ ಭಾರತ

ಆಸ್ಟ್ರೇಲಿಯಾ ವಿರುದ್ಧ ಸರಣಿ ವಶ ಪಡಿಸಿಕೊಂಡ ಭಾರತ ಮಹತ್ವ ಸಾಧನೆ ಒಂದನ್ನು ಮಾಡಿದೆ. ಅತಿ ಹೆಚ್ಚು ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಗೆದ್ದ ದೇಶ ಎಂಬ ಖ್ಯಾತಿಗೆ ಒಳಗಾಗಿದೆ.

India surpass Pakistan
India surpass Pakistan
author img

By ETV Bharat Karnataka Team

Published : Dec 2, 2023, 3:55 PM IST

ರಾಯಪುರ (ಛತ್ತೀಸ್‌ಗಢ): ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 5 ಟಿ-20 ಪಂದ್ಯಗಳ ಸರಣಿಯನ್ನು ಭಾರತ 3-1 ರಿಂದ ಗೆಲ್ಲುವ ಮೂಲಕ ಅತಿ ಹೆಚ್ಚು ಅಂತಾರಾಷ್ಟ್ರೀಯ ಚುಟುಕು ಪಂದ್ಯ ಗೆದ್ದ ದೇಶ ಎಂಬ ಖ್ಯಾತಿಗೆ ಒಳಗಾಯಿತು. ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದ ಪಾಕಿಸ್ತಾನವನ್ನು ಟೀಮ್​ ಇಂಡಿಯಾ ಹಿಂದಿಕ್ಕಿದೆ.

ಭಾರತ ಶುಕ್ರವಾರ ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯವನ್ನು ಭಾರತ 20 ರನ್​​ಗಳಿಂದ ಗೆದ್ದು ಸರಣಿ ತನ್ನದಾಗಿಸಿಕೊಂಡಿದೆ. ಸರಣಿಯನ್ನು 3-1 ರಿಂದ ಗೆದ್ದುಕೊಂಡಿತು ಮಾತ್ರವಲ್ಲದೇ ಅಂತಾರಾಷ್ಟ್ರೀಯ ಟಿ20ಗಳಲ್ಲಿ ಅವರ 136ನೇ ಜಯವನ್ನು ಪಡೆದುಕೊಂಡಿತು.

2006ರಲ್ಲಿ ಟೀಮ್​ ಇಂಡಿಯಾವು ತಮ್ಮ ಚೊಚ್ಚಲ ಟಿ-20 ಮಾದರಿಯ ಪಂದ್ಯವನ್ನು ಆಡಿತು. ಅಂದಿನಿಂದ ಒಟ್ಟಾರೆ 213 ಟಿ20ಐ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 136 ಪಂದ್ಯಗಳಲ್ಲಿ ಗೆದ್ದು, 67ರಲ್ಲಿ ಸೋತಿದೆ ಮತ್ತು ಒಂದು ಟೈನಲ್ಲಿ ಅಂತ್ಯವಾಗಿದೆ. ಮೂರು ಪಂದ್ಯಗಳು ಫಲಿತಾಂಶವಿಲ್ಲದೇ ಕೊನೆಗೊಂಡಿದೆ. ಗೆಲುವಿನ ಶೇಕಡಾವಾರು ಪ್ರಮಾಣ ನೋಡಿದರೆ 63.84 ಇದೆ. ಪಾಕಿಸ್ತಾನ ಒಟ್ಟು 226 ಟಿ20 ಪಂದ್ಯಗಳಲ್ಲಿ 135 ಗೆಲುವು ಸಾಧಿಸಿದ್ದು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್ (200 ಪಂದ್ಯ 102 ಗೆಲುವು), ಆಸ್ಟ್ರೇಲಿಯಾ (181 ಪಂದ್ಯ, 95 ಗೆಲುವು), ಮತ್ತು ದಕ್ಷಿಣ ಆಫ್ರಿಕಾ (171 ಪಂದ್ಯ, 95 ಗೆಲುವು) ಪಂದ್ಯಗಳನ್ನು ಗೆದ್ದಿದ್ದೆ.

ರಾಹುಲ್​ ಮೀರಿಸಿದ ರುತುರಾಜ್‌: ಈ ಪಂದ್ಯದಲ್ಲಿ 32 ರನ್ ಗಳಿಸಿ ಮಿಂಚಿದ್ದ ಓಪನರ್ ರುತುರಾಜ್ ಗಾಯಕ್ವಾಡ್ ಖಾತೆಯಲ್ಲಿ ದಾಖಲೆಯೊಂದು ನಿರ್ಮಾಣವಾಗಿದೆ. ಈ ಮಾದರಿಯಲ್ಲಿ ಅತಿ ವೇಗವಾಗಿ 4000 ರನ್ ಪೂರೈಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಕ್ರಮದಲ್ಲಿ ಕೆಎಲ್ ರಾಹುಲ್ ಅವರನ್ನು ಮೀರಿಸಿದರು. ರುತುರಾಜ್ 116 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ, ಕೆಎಲ್ 117 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದರು. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ (107 ಇನ್ನಿಂಗ್ಸ್), ಶಾನ್ ಮಾರ್ಷ್ (113), ಬಾಬರ್ ಅಜಮ್ (115) ಮತ್ತು ಕಾನ್ವೇ (116) ಮೊದಲ ನಾಲ್ಕು ಸ್ಥಾನಗಳಲ್ಲಿದ್ದಾರೆ. ಶುಕ್ರವಾರ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯ ವಿರುದ್ಧ 20 ರನ್‌ಗಳ ಜಯ ಸಾಧಿಸಿದ್ದು ಗೊತ್ತೇ ಇದೆ.

ಇದನ್ನೂ ಓದಿ: ಅಕ್ಷರ್​, ಬಿಷ್ಣೋಯ್ ಸ್ಪಿನ್​ಗೆ ನಲುಗಿದ ಕಾಂಗರೂ ಪಡೆ: ಭಾರತಕ್ಕೆ ಸರಣಿ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.