ETV Bharat / sports

ಆಸ್ಟ್ರೇಲಿಯಾ ಸರಣಿಗೆ ಎರಡು ತಂಡ ಪ್ರಕಟ: ಮೊದಲೆರಡು ಪಂದ್ಯಕ್ಕೆ ಕನ್ನಡಿಗ ರಾಹುಲ್ ನಾಯಕ.. ಆರ್​ ಅಶ್ವಿನ್​ಗೆ ಸ್ಥಾನ

India squads Australia series: ವಿಶ್ವಕಪ್​ಗೂ ಮುನ್ನ ಭಾರತದಲ್ಲಿ ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಗೆ ತಂಡವನ್ನು ಪ್ರಕಟಿಸಲಾಗಿದೆ.

India squads
ಆಸ್ಟ್ರೇಲಿಯಾ ಸರಣಿಗೆ ಎರಡು ತಂಡ ಪ್ರಕಟ
author img

By ETV Bharat Karnataka Team

Published : Sep 18, 2023, 10:11 PM IST

2023 ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಪ್ರಾರಂಭವಾಗುವ ಮೊದಲು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆಯಲಿರುವ ಏಕದಿನ ಸರಣಿಗೆ ಭಾರತ ಎರಡು ಪ್ರತ್ಯೇಕ ತಂಡಗಳನ್ನು ಹೆಸರಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಗೆ ಭಾರತ ಅನುಭವಿ ಆಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಏಕದಿನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. 2022 ರ ಜನವರಿಯಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಅಶ್ವಿನ್ ಆಡಿದ್ದರು.

ಐಪಿಎಲ್​, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್, ವೆಸ್ಟ್​ ಇಂಡೀಸ್​ ಸರಣಿ ಮತ್ತು ಏಷ್ಯಾಕಪ್​ ಆಡಿರುವ ಅನುಭವಿ ಪ್ರಮುಖ ಆಟಗಾರರಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಕುಲ್ದೀಪ್​ ಯಾದವ್​ ಅವರಿಗೆ ವಿಶ್ವಕಪ್​ ಹಿನ್ನೆಲೆಯಲ್ಲಿ ವಿಶ್ರಾಂತಿ​ ಕೊಡಲಾಗಿದೆ. ಆದರೆ ಕೊನೆಯ ಏಕದಿನ ಪಂದ್ಯದ ವೇಳೆಗೆ ಈ ಇಬ್ಬರು ಆಟಗಾರರು ತಂಡಕ್ಕೆ ಮರಳಲಿದ್ದಾರೆ.

ಮೊದಲೆರಡು ಪಂದ್ಯಕ್ಕೆ ರಾಹುಲ್​ ಸಾರಥ್ಯ: ಆಸಿಸ್ ವಿರುದ್ಧದ ಮೊದಲೆರಡು ಪಂದ್ಯಕ್ಕೆ ಕೆಎಲ್​ ರಾಹುಲ್​ ಅವರಿಗೆ ನಾಯಕತ್ವ ನೀಡಲಾಗಿದೆ. ಐಪಿಎಲ್​ ವೇಳೆ ಕೊನೆಯಲ್ಲಿ ಗಾಯಕ್ಕೆ ತುತ್ತಾಗಿದ್ದ ರಾಹುಲ್​ ಏಷ್ಯಾಕಪ್​ನಲ್ಲಿ ಕಮ್​ಬ್ಯಾಕ್​ ಮಾಡಿದ್ದರು. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶತಕದ ಭರ್ಜರಿ ಬ್ಯಾಟಿಂಗ್​ ಮಾಡಿದ್ದರು.

ತಂಡಕ್ಕೆ ಮರಳಿದ ಆರ್​ ಅಶ್ವಿನ್​: ಟೆಸ್ಟ್​ನ ನಂ.1 ಬೌಲರ್​ ರವಿಚಂದ್ರನ್​ ಅಶ್ವಿನ್​ಗೆ ತಂಡದಲ್ಲಿ ಬಹಳ ಸಮಯದಿಂದ ಸ್ಥಾನವೇ ಸಿಕ್ಕಿರಲಿಲ್ಲ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ತಂಡದಲ್ಲಿ ಸ್ಥಾನ ಪಡೆದಿದ್ದರೂ ಅವರನ್ನು ಆಡಿಸಿರಲಿಲ್ಲ. 2022ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಶ್ವಿನ್​ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಈಗ ಆಸಿಸ್​ ಸರಣಿಗೆ 3ನೇ ಬೌಲರ್​ ಆಗಿ ಸೇರ್ಪಡೆಗೊಂಡಿದ್ದಾರೆ. ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಂಡದ ಪ್ರಮುಖ ಬೌಲರ್​ಗಳಾಗಿದ್ದಾರೆ. ವಿಶ್ವಕಪ್​ ತಂಡದಲ್ಲಿ ಆರ್​ ಅಶ್ವಿನ್​ ಅವರನ್ನು ಸೇರಿಸಿಕೊಂಡಿಲ್ಲ.

  • Squad for the 3rd & final ODI:

    Rohit Sharma (C), Hardik Pandya, (Vice-captain), Shubman Gill, Virat Kohli, Shreyas Iyer, Suryakumar Yadav, KL Rahul (wicketkeeper), Ishan Kishan (wicketkeeper), Ravindra Jadeja, Shardul Thakur, Axar Patel*, Washington Sundar, Kuldeep Yadav, R…

    — BCCI (@BCCI) September 18, 2023 " class="align-text-top noRightClick twitterSection" data=" ">

ಈಗ ಅಕ್ಷರ್ ಪಟೇಲ್​ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅಶ್ವಿನ್​ ಸ್ಥಾನ ಕೊಡಲಾಗಿದೆ. ಆದರೆ, ಏಷ್ಯಾಕಪ್​ನ ಕೊನೆಯ ಪಂದ್ಯಕ್ಕೆ ಅಕ್ಷರ್​ ಬದಲಿಯಾಗಿ ಆಯ್ಕೆ ಆದ ವಾಷಿಂಗ್ಟನ್ ಸುಂದರ್ ಸಹ ತಂಡದಲ್ಲಿ ಇದ್ದಾರೆ.

ತಿಲಕ್​ ವರ್ಮಾ ಮತ್ತೊಂದು ಅವಕಾಶ: ಏಷ್ಯಾಕಪ್​ಗೆ ಅಚ್ಚರಿಯ ಆಯ್ಕೆ ಆಗಿದ್ದ ತಿಲಕ್​ ವರ್ಮಾಗೆ ಆಸಿಸ್​ ಸರಣಿಯಲ್ಲಿ ಆಡಲು ಅವಕಾಶ ಸಿಕ್ಕಿದೆ. ಏಷ್ಯಾಕಪ್​ನಲ್ಲಿ ಬಾಂಗ್ಲಾ ವಿರುದ್ಧದ ಔಪಚಾರಿಕ ಪಂದ್ಯದಲ್ಲಿ ತಿಲಕ್​ ವರ್ಮಾ ಪಾದಾರ್ಪಣೆ ಮಾಡಿದ್ದರು. ಆದರೆ ಉತ್ತಮ ಪ್ರದರ್ಶನ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಈಗ ಮಧ್ಯಮ ಅಥವಾ ಕೆಳ ಕ್ರಮಾಂಕದಲ್ಲಿ ತಿಲಕ್​ ಸ್ಥಾನ ಪಡೆಯಲಿದ್ದಾರೆ.

ಮೊದಲ ಎರಡು ಏಕದಿನ ಪಂದ್ಯಕ್ಕೆ ತಂಡ: ಕೆಎಲ್ ರಾಹುಲ್ (ನಾಯಕ & ವಿಕೆಟ್​ ಕೀಪರ್​), ರವೀಂದ್ರ ಜಡೇಜಾ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್​ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ

  • *Axar Patel's selection in the third and final ODI will be subject to fitness.

3ನೇ ಏಕದಿನ ಪಂದ್ಯದ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್*, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್

ಇದನ್ನೂ ಓದಿ: ಆಸ್ಟ್ರೇಲಿಯಾ ಸರಣಿಗೆ ಇಂದು ಪ್ರಕಟಗೊಳ್ಳಲಿದೆ ತಂಡ.. ವಿರಾಟ್​, ಸಿರಾಜ್​, ಬುಮ್ರಾ, ಶಮಿಗೆ ವಿಶ್ರಾಂತಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.