ಮುಂಬೈ: ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಕ್ರಿಕೆಟ್ ಸರಣಿ ಬೆನ್ನಲ್ಲೇ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಸೆಟಸಾಟ ನಡೆಸಲಿದೆ. ಅದಕ್ಕೋಸ್ಕರ ಮೂರು ಏಕದಿನ ಪಂದ್ಯಗಳಿಗೋಸ್ಕರ ಭಾರತ ತಂಡ ಪ್ರಕಟಗೊಂಡಿದ್ದು, ಆರಂಭಿಕ ಆಟಗಾರ ಶಿಖರ್ ಧವನ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
16 ಸದಸ್ಯರ ತಂಡ ಪ್ರಕಟಗೊಳಿಸಲಾಗಿದ್ದು, ಉಪನಾಯಕನಾಗಿ ಆಲ್ರೌಂಡರ್ ರವೀಂದ್ರ ಜಡೇಜಾ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಕೆಲವೊಂದು ಹೊಸ ಪ್ರತಿಭೆಗಳಿಗೆ ಸ್ಥಾನ ನೀಡಲಾಗಿದೆ. ಮುಖ್ಯವಾಗಿ ದೀಪಕ್ ಹೂಡಾ, ಅರ್ಷದೀಪ್ ಸಿಂಗ್, ಆವೇಶ್ ಖಾನ್ ಹಾಗೂ ಪ್ರಸಿದ್ಧ್ ಕೃಷ್ಣ ಚಾನ್ಸ್ ಪಡೆದುಕೊಂಡಿದ್ದಾರೆ. ರಿಷಭ್ ಪಂತ್ಗೆ ವಿಶ್ರಾಂತಿ ನೀಡಿರುವ ಕಾರಣ ಇಬ್ಬರು ವಿಕೆಟ್ ಕೀಪರ್ಗಳಾದ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ಗೆ ಅವಕಾಶ ನೀಡಲಾಗಿದೆ. ಜುಲೈ 22ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ.
ಏಕದಿನ ತಂಡ ಇಂತಿದೆ: ಶಿಖರ್ ಧವನ್(ಕ್ಯಾಪ್ಟನ್), ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್(ವಿ.ಕೀ), ಸಂಜು ಸ್ಯಾಮ್ಸನ್(ವಿ.ಕೀ), ರವೀಂದ್ರ ಜಡೇಜಾ(ಉಪನಾಯಕ), ಶಾರ್ದೂಲ್ ಠಾಕೂರ್. ಯಜುವೇಂದ್ರ ಚಹಲ್, ಅಕ್ಸರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್
ಇನ್ನೂ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಗೋಸ್ಕರ ಆಯ್ಕೆಯಾಗಿರುವ ಜಮ್ಮು-ಕಾಶ್ಮೀರ ಎಕ್ಸ್ಪ್ರೆಸ್ ಉಮ್ರಾನ್ ಮಲಿಕ್ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.
ಹಿರಿಯ ಪ್ಲೇಯರ್ಸ್ಗೆ ವಿಶ್ರಾಂತಿ: ಟೀಂ ಇಂಡಿಯಾ ಸಿಮೀತ ಓವರ್ಗಳ ನಾಯಕನಾಗಿರುವ ರೋಹಿತ್ ಶರ್ಮಾ, ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಾಗೂ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಇದರ ಜೊತೆಗೆ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ಗೂ ಮಣೆ ಹಾಕಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಮೂರು ಏಕದಿನ ಹಾಗೂ ಐದು ಟಿ-20 ಪಂದ್ಯಗಳ ಸರಣಿ ಆಡಲಿದ್ದು, ಕೆಲ ದಿನಗಳಲ್ಲೇ ಚುಟುಕು ಕ್ರಿಕೆಟ್ ಸರಣಿಗೂ ತಂಡ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಇದನ್ನುಓದಿ:ICC Test Ranking: 6 ವರ್ಷದ ಬಳಿಕ ಟಾಪ್ 10 ರಿಂದ ಹೊರಬಿದ್ದ ವಿರಾಟ್; 5ನೇ ಸ್ಥಾನಕ್ಕೆ ಪಂತ್ ಲಗ್ಗೆ