ಪರ್ತ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನ 4 ಪಂದ್ಯಗಳು ಈಗಾಗಲೇ ಮಳೆಗೆ ಆಹುತಿಯಾಗಿವೆ. ಇಂದು ಪರ್ತ್ನಲ್ಲಿ ನಡೆಯುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಕ್ಕೂ ವರುಣ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ.
ಪರ್ತ್ನಲ್ಲಿ ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿದೆ. ಇದರಿಂದಾಗಿ ಮೊನ್ನೆಯ ಅಫ್ಘಾನಿಸ್ತಾನ- ಐರ್ಲೆಂಡ್, ಆಸ್ಟ್ರೇಲಿಯಾ-ಇಂಗ್ಲೆಂಡ್ ಪಂದ್ಯಗಳು ಒಂದೂ ಎಸೆತ ಕಾಣದೇ ರದ್ದಾಗಿದ್ದವು.
ಹವಾಮಾನ ಇಲಾಖೆಯ ಪ್ರಕಾರ, ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ತುಂತುರು ಮಳೆ ಬೀಳಲಿದೆ. ಮಧ್ಯಾಹ್ನ ಮತ್ತು ಸಂಜೆಯ ವೇಳೆ ಮಳೆ ಹೆಚ್ಚಾಗಲಿದೆ. ಗಂಟೆಗೆ 25 ರಿಂದ 35 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ಪಂದ್ಯ ನಡೆಯುವುದು 50:50 ಸಾಧ್ಯತೆ ಇದೆ.
ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ ವಿರುದ್ಧ ಗೆಲುವು ಕಂಡಿರುವ ಭಾರತ ತಂಡ ದಕ್ಷಿಣ ಆಫ್ರಿಕಾ ಪಂದ್ಯವನ್ನು ಗೆದ್ದು ಸೆಮಿಫೈನಲ್ ಟಿಕೆಟ್ ಖಚಿತಪಡಿಸಿಕೊಳ್ಳುವ ಆತುರದಲ್ಲಿದೆ. ದಕ್ಷಿಣ ಆಫ್ರಿಕಾ ಕೂಡ 2 ಪಂದ್ಯಗಳಲ್ಲಿ ಒಂದು ಗೆದ್ದಿದೆ. ಇನ್ನೊಂದು ಮಳೆಗೆ ರದ್ದಾಗಿ 1 ಅಂಕ ಪಡೆದಿದೆ. ಭಾರತ ವಿರುದ್ಧ ಗೆದ್ದು ಅಂಕ ಹೆಚ್ಚಿಸಿಕೊಳ್ಳಲು ಸಿದ್ಧತೆಯಲ್ಲಿದೆ.
ಪರ್ತ್ ಮೈದಾನದಲ್ಲಿ ಆಡಿದ 21 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 13 ಬಾರಿ ಗೆಲುವು ಸಾಧಿಸಿದೆ. ಒಂದು ಮಳೆ ಮಳೆ ಬಂದಲ್ಲಿ ಟಾಸ್ ಮಹತ್ವ ಪಡೆಯಲಿದೆ. ಪರ್ತ್ ಪಿಚ್ ಬೌನ್ಸರ್ಗಳಿಗೂ ನೆರವು ನೀಡಲಿದ್ದು, ಪಂದ್ಯದ ರೋಚಕತೆ ಹೆಚ್ಚಿಸಲಿದೆ.
ಇದನ್ನೂ ಓದಿ: India vs South Africa: ಗೆಲ್ಲುವ ವಿಶ್ವಾಸದಲ್ಲಿ ಉಭಯ ತಂಡಗಳು