ದುಬೈ: ಟಿ20 ವಿಶ್ವಕಪ್ನ ಕೊನೆಯ ಸೂಪರ್ ಲೀಗ್ ಪಂದ್ಯದಲ್ಲಿ ನಮೀಬಿಯಾ ವಿರುದ್ಧ 9 ವಿಕೆಟ್ಗಳ ಜಯ ಸಾಧಿಸಿ ತನ್ನ ವಿಶ್ವಕಪ್ ಅಭಿಯಾನವನ್ನು ಅಂತ್ಯಗೊಳಿಸಿದೆ.
ವಿಶ್ವಕಪ್ ಎತ್ತಿ ಹಿಡಿಯುವ ನೆಚ್ಚಿನ ತಂಡವಾಗಿ ಟೂರ್ನಿ ಪ್ರವೇಶಿಸಿದ್ದ ಭಾರತ ತಂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಯಿತು. ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 10 ಸೋಲು ಕಂಡರೆ 2ನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 8 ವಿಕೆಟ್ಗಳ ಸೋಲು ಕಾಣುವ ಮೂಲಕ ಟೂರ್ನಿಯಲ್ಲಿ ಭಾಗಶಃ ಹೊರಬಿದ್ದಿತ್ತು. ಭಾನುವಾರ ನ್ಯೂಜಿಲ್ಯಾಂಡ್ ತಂಡ ಅಫ್ಘಾನಿಸ್ತಾನದ ವಿರುದ್ಧ ಗೆಲ್ಲುತ್ತಿದ್ದಂತೆ ಭಾರತ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿತ್ತು.
ಸೋಮವಾರ ಔಪಚಾರಿಕವಾಗಿದ್ದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡ ನಮೀಬಿಯಾ ನೀಡಿದ್ದ 133 ರನ್ಗಳ ಗುರಿಯನ್ನು 15.2 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ತಲುಪಿತು. ರೋಹಿತ್ ಶರ್ಮಾ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 56 ರನ್ಗಳಿಸಿದರೆ, ಕೆ.ಎಲ್.ರಾಹುಲ್ 36 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ ಅಜೇಯ 54 ರನ್ ಮತ್ತು ಸೂರ್ಯಕುಮಾರ್ ಯಾದವ್ 19 ಎಸೆತಗಳಲ್ಲಿ ಅಜೇಯ 25 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
-
India sign off from the #T20WorldCup in style 👏 #INDvNAM | https://t.co/ICh1BVKEFJ pic.twitter.com/7Qg7J38ppW
— T20 World Cup (@T20WorldCup) November 8, 2021 " class="align-text-top noRightClick twitterSection" data="
">India sign off from the #T20WorldCup in style 👏 #INDvNAM | https://t.co/ICh1BVKEFJ pic.twitter.com/7Qg7J38ppW
— T20 World Cup (@T20WorldCup) November 8, 2021India sign off from the #T20WorldCup in style 👏 #INDvNAM | https://t.co/ICh1BVKEFJ pic.twitter.com/7Qg7J38ppW
— T20 World Cup (@T20WorldCup) November 8, 2021
ಇದಕ್ಕೂ ಮುನ್ನ ಟಾಸ್ ಗೆದ್ದಿದ್ದ ಭಾರತ ತಂಡ ನಮೀಬಿಯಾಗೆ ಬ್ಯಾಟಿಂಗ್ ಆಹ್ವಾನಿಸಿ ಕೇವಲ 132 ರನ್ಗಳಿಗೆ ಕಟ್ಟಿಹಾಕಿತ್ತು. ರವಿಚಂದ್ರನ್ ಅಶ್ವಿನ್ 20ಕ್ಕೆ 3, ರವೀಂದ್ರ ಜಡೇಜಾ 16ಕ್ಕೆ 3, ಜಸ್ಪ್ರೀತ್ ಬುಮ್ರಾ 19ಕ್ಕೆ 2 ವಿಕೆಟ್ ಪಡೆದಿದ್ದರು. ನಮೀಬಿಯಾ ಪರ ಡೇವಿಡ್ ವೀಸ್ 26 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಇನ್ನು ಸೆಮಿಫೈನಲ್ ತಂಡಗಳು ಈಗಾಗಲೇ ಅಧಿಕೃತವಾಗಿದ್ದು, ನವೆಂಬರ್ 10ರಂದು ಇಂಗ್ಲೆಂಡ್ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಮತ್ತು ಪಾಕಿಸ್ತಾನ ನವೆಂಬರ್ 11ರಂದು 2ನೇ ಆಸ್ಟ್ರೇಲಿಯಾ ವಿರುದ್ಧ ತಮ್ಮ ನಾಕೌಟ್ ಪಂದ್ಯಗಳನ್ನಾಡಲಿವೆ.
ಇದನ್ನೂ ಓದಿ: 'ಟೀಂ ಇಂಡಿಯಾ ಆಟಗಾರರು ಐಪಿಎಲ್‌ಗಿಂತ ದೇಶದ ಪರ ಆಟಕ್ಕೆ ಮೊದಲ ಆದ್ಯತೆ ನೀಡಬೇಕು'